ರಾಜ್ಯ ಸುದ್ದಿ
ಹೊನ್ನಾವರ: ಜಿಲ್ಲೆಯಲ್ಲಿ ಕಳೆದೆರಡು ಮೂರು ದಿನಗಳಿಂದ ನಿರಂತರ ಮಳೆಸುರಿಯುತ್ತಿದ್ದು, ಜೊತೆಗೆ ಗಾಳಿಯ ಆರ್ಭಟವು ಜೋರಾಗಿದ್ದು ಹಲವೆಡೆ ಅವಾಂತರ ಸೃಷ್ಟಿಯಾಗಿದೆ.ತಾಲೂಕಿನ ಗುಂಡಬಾಳ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ಭರ್ತಿಯಾಗಿ ನೆರೆ ಭೀತಿ ಎದುರಾಗಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಹಲವೆಡೆ ಮಳೆ ಅಬ್ಬರಕ್ಕೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಇನ್ನು ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಮುರಿದು ಕರೆಂಟ್ ಕಂಬದ ಮೇಲೆ ಬಿದ್ದಿದ್ದು ಕರೆಂಟ್ ಇಲ್ಲದಂತಾಗಿದೆ. ಗ್ರಾಮೀಣ ಭಾಗಗಳಲ್ಲಿ ಸಿಗ್ನಲ್ ಇಲ್ಲದೆ ಪರದಾಡುವಂತಾಗಿದೆ. ಗುರುವಾರದಿಂದ ಮಳೆ ಇಳಿಮುಖವಾಗಿದ್ದು, ಅಂದು ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಬಿದ್ದ ಮಳೆ ಪ್ರಮಾಣ ಹೀಗಿದೆ ನೋಡಿ. ಅಂಕೋಲಾ 41.8 ಮಿ.ಮೀ, ಭಟ್ಕಳ 27 ಮಿ.ಮೀ, ಹಳಿಯಾಳ 31.4 ಮಿ.ಮೀ, ಹೊನ್ನಾವರ 40.6 ಮಿ.ಮೀ, ಕಾರವಾರ 30.8 ಮಿ.ಮೀ, ಕುಮಟಾ28.2 ಮಿ.ಮೀ, ಮುಂಡಗೋಡ 81.8 ಮಿ.ಮೀ, ಸಿದ್ದಾಪುರ 125.2 ಮಿ.ಮೀ, ಶಿರಸಿ 95.5, ಜೋಯಿಡಾ 78.6 ಮಿ.ಮೀ, ಯಲ್ಲಾಪುರ 58.6 ಮಿ.ಮೀ ಮಳೆಯಾಗಿದೆ.
Be the first to comment