ರಾಜ್ಯ ಸುದ್ದಿಗಳು
ಬೆಂಗಳೂರು (ಯಲಹಂಕ):
ಬೇಲಿಯೇ ಎದ್ದ ಹೊಲ ಮೇದರೆ ಮುಂದೆ ಗತಿ ಏನು? ಇಂತಹ ಪರಿಸ್ಥಿತಿಯು ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ ಗಣಿಗರಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ ಮುನಿರಾಜು ಕುಟುಂಬದವರಿಗೆ ಒದಗಿ ಬಂದಿದೆ.
ಗಣಿಗರಹಳ್ಳಿ ಸರ್ವೆ ನಂ76/10ಪಿ ಯಲ್ಲಿ 30 ಗುಂಟೆ ಜಮೀನು ನರಸಪ್ಪ ಎಂಬುವವರಿಗೆ ಮಂಜೂರಾಗಿದ್ದು ಅವರ ಸವತಿಯ ನಂತರ ಮುನಿರಾಜು ಮತ್ತು ಇವರ ಸಹೊದರ ಮಂಜುನಾಥ್ ಹೆಸರಿನಲ್ಲಿ ಪಹಣಿ ಖಾತೆ ಕಂದಾಯ ಇತ್ಯಾದಿ ದಾಖಲಾಗಿವೆ ಇವರ ವ್ಯವಸಾಯ ಮಾಡಿಕೊಂಡು ಸ್ವಾದೀನಾನುಭವದಲ್ಲಿದ್ದಾರೆ ಈ
ಜಮೀನಿನ ಮಾಲಿಕತ್ವದ ಬಗ್ಗೆ ಇದ್ದ ಯಲ್ಲಾ ಪ್ರಕರಣಗಳಲ್ಲಿ ಮುನಿರಾಜು ಮತ್ತು ಈತನ ತಮ್ಮ ಮಂಜುನಾಥ್ ಪರವಾಗಿ ಬೆಂಗಳೂರು ಉತ್ತರವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ನಿಡಿರುತ್ತದೆ.
ಈ ಮಧ್ಯೆ ಅನುಸೂಯಮ್ಮ ಮತ್ತು ಇವರ ಮಕ್ಕಳು ಸದರಿ ಜಮೀನು ತಮಗೆ ಸೇರಿದಂದು ತಗಾದೆ ಮಾಡುತ್ತಾ ಮುನಿರಾಜು ಇವರ ಕುಟುಂಬಕ್ಕೆ ಬಹಳ ಕಿರುಕುಳ ನಿಡುತ್ತಿದ್ದಾರೆ ರಾಜಕೀಯ ಬೆಂಬಲದಿಂದ ಮತ್ತು ಎಸಿಪಿ ಶ್ರೀನಿವಾಸ ರೆಡ್ಡಿಯವರು ಹಾಗೂ ಸೋಲದೇನಹಳ್ಳಿ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ಹರಿವರ್ಧನ್ ಇವರ ಬೆಂಬಲದಿಂದ ದೌರ್ಜನ್ಯ ಮಾಡುತ್ತಿರುವುದು ಮುನಿರಾಜು ಇವರ ಕುಟುಂಬಕ್ಕೆ ಪ್ರಾಣಬೀತಿ ಉಂಟಾಗಿದೆ ಈ ಸಂಬದ ಮುನಿರಾಜುರವರ ಸೋಲದೇನಹಳ್ಳಿ ಠಾಣೆಗೆ ದಿನಾಂಕ: 04-12-2019. 30-4-2020.18-6-2020 ರಂದು ದೂರ ನೀಡಿದರೂ ಸ್ಥಳೀಯ ಪೋಲೀಸರು ಭೂ ಮಾಫಿಗಳೂಂದಿಗೆ ಶಾಮೀಲಗಿ ದಲಿತ ಕುಟುಂಬಕ್ಕೆ ರಕ್ಷಣೆ ಕೋಟ್ಟಿರುದಿಲ್ಲ ಜೊತೆಗೆ ಮುನಿರಾಜು ಅವರ ಕುಂಟುಬಂಕ್ಕೆ ರಕ್ಷಣೆ ನೀಡುವಂತೆ ತಾಲ್ಲೂಕು ತಹಶಿಲ್ದಾರ ರವರ ಮತ್ತು ಬೆಂಗಳೂರು ಉತ್ತರ ಉಪವಿಭಾಗಧಿಕಾರಿಗಳು ಹಾಗೂ ಮಾನ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸೋಲದೇನಹಳ್ಳಿ ಠಾಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Be the first to comment