ಅಕ್ರಮ ಕ್ರಿಮಿನಾಶಕ ಹಾಗೂ ತಾಡಪತ್ರೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಸಿಎಂ ಗೆ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

 

ಮುದ್ದೇಬಿಹಾಳ ಅ.8:

ಪಟ್ಟಣದ ರೈತರ ಸಹಾಯಕ್ಕಾಗಿರುವ ಗ್ರಾಮಸಹಾಯಕ ಆರ್.ಬಿ.ರುದ್ರವಾಡಿ ಅವರು ರೈತರಿಗಾಗಿ ಸರಕಾರದಿಂದ ನೀಡಲಾಗುತ್ತಿರುವ ತಾಡಪತ್ರಿಗಳ ಅಕ್ರಮ ಮಾರಾಟದ ಬಗ್ಗೆ ಹಾಗೂ ಮುದ್ದೇಬಿಹಾಳ ಎಪಿಎಂಸಿಯಲ್ಲಿ ಅಕ್ರಮವಾಗಿ ಸಂಗ್ರಹಿಯಿಟ್ಟ ಕ್ರಿಮಿನಾಶಕ ಮತ್ತು ಬೀಜ ಗೊಬ್ಬರದ ಬಗ್ಗೆ ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತರ ಸಂಘ ಪದಾಧಿಕಾರಿಗಳು ತಹಸೀಲ್ದಾರ ಅವರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು.



ಮುದ್ದೇಬಿಹಾಳ ತಾಲೂಕಿನಲ್ಲಿ ಕಳೆದ ತಿಂಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಆದರೆ ರೈತನು ಬೆಳೆದ ಬೆಳೆಗಳ ರಕ್ಷಣೆಗಾಗಿ ಸರಕಾರದಿಂದ ಸಬ್ಸಿಡಿಯಲ್ಲಿ ತಾಡಪತ್ರಿಗಳನ್ನು ನೀಡಲಾಗುತ್ತಿದೆ. ಆದರೆ ಇಲ್ಲಿ ಕೃಷಿ ಇಲಾಖೆಯ ಗ್ರಾಮ ಸಹಾಯಕ ಆರ್.ಬಿ.ರುದ್ರವಾಡಿ ಅವರು ತಾಡಪತ್ರಿ ಹಾಘೂ ಕ್ರಿಮಿನಾಶಕ ಇನ್ನೂ ಬಂದಿಲ್ಲ ಎಂದು ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ರೈತ ಸಂಘದವತಿಯಿAದ ಇಲಾಖೆಯಲ್ಲಿ ವಿಚಾರಿಸಿದಾಗ ಇಲಾಖೆಗೆ ಬಂದಂತಹ ತಾಡಪತ್ರಿಗಳನ್ನು ೨ ಸಾವಿರ ರೂಪಾಯಿಗಳಿಗೆ ಅಕ್ರಮವಾಗಿ ಮಾರಿಕೊಂಡಿದ್ದೇವೆ. ನೀವೇನು ಮಾಡುತ್ತಿರು ಎಂದು ಉಢಾಫೆ ಉತ್ತರವನ್ನೂ ರುದ್ರವಾಡಿ ಅವರು ನೀಡಿದ್ದಾರೆ. ಅಲ್ಲದೇ ಅದೇ ದಿನ ಬೆಳಗಾವಿಯಿಂದ ಆಗಮಿಸಿದ್ದ ತನಿಖಾ ತಂಡಕ್ಕೆ ಈ ಮಾಹಿತಿಯನ್ನು ನೀಡಿದ್ದು ತಂಡದ ಅಧಿಕಾರಿಗಳ ಮುಂದೆಯೂ ರುದ್ರವಾಡಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಆದ್ದರಿಂದ ಇದರ ಹಿಂದೆ ಇನ್ನೂ ಅನೇಕ ಕೈಗಳಿರುವ ಮಾಹಿತಿ ಬಂದಿದ್ದು ಕೂಡಲೇ ರುದ್ರವಾಡಿ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿಟ್ಟ ಗೊಬ್ಬರದ ತನಿಖೆಗೂ ಆಗ್ರಹ:
ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಗೊದಾಮಿನಲ್ಲಿ ರೈತರಿಗೆ ದೊರಕಬೇಕಾದ ಕ್ರಿಮಿನಾಶಕ ಹಾಗೂ ರಸ ಗೊಬ್ಬರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಬೆಳಗಾವಿಯಿಂದ ಆಗಮಿಸಿದ್ದ ತನಿಖಾ ತಂಡ ಇದನ್ನು ಪತ್ತೆ ಹಚ್ಚಿದೆ. ಆದರೆ ಅಕ್ರಮದ ಹಿಂದೆ ಕೆಲ ರಾಜಕೀಯ ವ್ಯಕ್ತಿಗಳ ಕೈವಾಡವಿರುವ ಸಂಶಯ ಮೂಡಿದ್ದು ಯಾವುದೇ ಕಾರಣಕ್ಕೂ ತನಿಖೆಯಲ್ಲಿ ವಿಳಂಭ ಮಾಡದೇ ಸಮಗ್ರ ತನಿಖೆಯನ್ನು ಮಾಡಬೇಕು ಎಂದು ರೈತ ಸಂಘದವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಸಂಗಣ್ಣ ಬಾಗೇವಾಡಿ, ಅಯ್ಯಣ್ಣ ಬಿದರಕುಂದಿ, ವಾಯ್.ಬಿರಾದಾರ, ಎಚ್.ಬಿ.ಬಿದರಕುಂದಿ, ಹಸೇನಸಾಬ ಕೊಂಡಗೂಳಿ, ಎಚ್.ಕೆ.ನದಾಫ, ಹಣಮಪ್ಪ ಬೋಳಿ, ಮಲ್ಲಪ್ಪ ಬಿರಾದಾರ, ನಾಗಪ್ಪ ನರಸುಣಗಿ, ಕಾಶಪ್ಪ ಬಡಿಗೇರ, ಯಲ್ಲಾಲಿಂಗ ಮೇಟಿ, ನೀಲಪ್ಪ ನರಸನಗಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*