ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ.
ಇಡೀ ರಾತ್ರಿ ಸುರಿದ ಮಳೆಗೆ ಕೆಲ ಮನೆಗಳು ಜಖಂಗೊಂಡಿದ್ದರೆ ಇನ್ನು ಕೆಲವು ಮನೆಗಳು ಹಾಗೂ ಶೆಡ್ಗಳ ಒಳಗಡೆ ನೀರು ತುಂಬಿಕೊಂಡಿದೆ.
ಅಲ್ಲದೆ ಗ್ರಾಮದ ರಸ್ತೆಗಳು ನದಿಯಂತಾಗಿದ್ದು, ಇನ್ನು ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳು ಜೋಳ, ಅಕ್ಕಿ ಹಾಗೂ ಇನ್ನಿತರೆ ಧವಸಧಾನ್ಯಗಳು ನೀರು ಪಾಲಾಗಿವೆ.
ಕೆಲ ಮನೆಗಳ ಒಳಗಡೆ ಅರ್ಧದಷ್ಟು ನೀರು ತುಂಬಿಕೊಂಡಿದ್ದರಿಂದ ಜನರು ಇಡೀ ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದಲ್ಲದೆ, ಬಡವರು ಊಟ ಸಿಗದೇ ಪರದಾಡಿದ್ದಾರೆ.
ಇನ್ನು ಗ್ರಾಮದ ನಾಗಮ್ಮ ಹಾಗೂ ಶೇಖರಮ್ಮ ಇವರ ಮನೆಗಳು ಸಂಪೂರ್ಣ ನದಿಯಿಂದಾಗಿದ್ದು, ಜೀವನ ನಡೆಸಲು ಪರದಾಡುತ್ತಿದ್ದು, ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
ಎರಡು ಮೂರು ದಿನಗಳಿಂದ ವರುಣನ ಆರ್ಭಟಕ್ಕೆ ಜನರಂತೂ ತತ್ತರಿಸಿಹೋಗಿದ್ದು, ಇಡೀ ಗ್ರಾಮ ಅರ್ಧಭಾಗದಷ್ಟು ನೀರು ತುಂಬಿಕೊಂಡು ಕೆರೆಯಂತೆ ಹರಿಯುತ್ತಿದೆ.
ಈ ಬಡಜನರು ಇಷ್ಟೆಲ್ಲಾ ಸಂಕಷ್ಟದಲ್ಲಿದ್ದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳಾಗಲಿ ಅಥವಾ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಹಾಗೂ ಜನಪ್ರತಿನಿದಿನಗಳಾಗಲಿ ಭೇಟಿ ನೀಡಿ ಜನರ ಕಷ್ಟ ಆಲಿಸದಿರೋದು ದುರದೃಷ್ಟಕರ ಸಂಗತಿ.
ಇನ್ನು ಗ್ರಾಮದ ಕೆಲ ಜನರು
ಜೀವ ಕೈ ಹಿಡಿದು ಕುಳಿತಿದ್ದಾರೆ. ಏಕೆಂದರೆ ಕೆಲ ಮಣ್ಣಿನ ಮನೆಗಳು ಎಲ್ಲಿ ಬಿದ್ದು ಹೋಗುತ್ತೇವೆ ಎಂಬ ಆತಂಕದಲ್ಲಿದ್ದಾರೆ. ವರುಣನ ಆರ್ಭಟಕ್ಕೆ ಮನೆಗಳಿಗೆ ನೀರು ನುಗ್ಗಿದ್ದು ಒಂದೆಡೆಯಾದರೆ ರೈತರ ಬೆಳೆ ಕೂಡ ಹಾನಿಯಾಗಿದೆ.
ಸದ್ಯ ಸತ್ಯಂಪೇಟೆ ಗ್ರಾಮದ ಒಣಕಿಹಾಳ ಓಣಿಯ ಜನರ ಬದುಕು ಮೂರಾಬಟ್ಟೆಯಾಗಿದ್ದೂ, ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇನೇ ಇರಲಿ ಇಷ್ಟೆಲ್ಲಾ ಮನೆಗಳಿಗೆ ನೀರು ನುಗ್ಗಿ ಜನರು ಇಡೀ ರಾತ್ರಿ ಎದ್ದು ಕುಳಿತು ಜೀವ ಉಳಿಸಿಕೊಳ್ಳಲು ಅರಸಾಹಸಪಟ್ಟಿದ್ದಾರೆ. ಜೊತೆಗೆ ಅನ್ನ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
- ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗ್ರಾಮಕ್ಕೆ ಭೇಟಿ ನೀಡಿ ಬಡ ಜನರ ಕಷ್ಟ ಆಲಿಸಿ ಪರಿಹಾರ ನೀಡಬೇಕು ಅನ್ನೋದು ಜನರ ಆಶಯ.
Be the first to comment