ರಾಜ್ಯ ಸುದ್ದಿಗಳು
ಬೆಂಗಳೂರು ಅ.13:
ಪ್ರಶ್ನೆ ಪತ್ರಿಕೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸದೇ ಪತ್ರಿಕೆಗಳು ಸೊರಿಕೆಯಾಗುವ ದುಸ್ಥಿತಿಯನ್ನು ಮಾಡಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳನ್ನು ಕೇಂದ್ರದಿಂದ ಹೊರಗೆ ಕಳುಹಿಸುವುರು ವಿಷಾಧನೀಯ ಸಂಗತಿಯಾಗಿದ್ದು ಕೂಡಲೇ ಪ್ರಶ್ನೆ ಪತ್ರಿಕೆ ಸೊರಿಕೆ ಮಾಡಿದವರನ್ನು ಪತ್ತೆಮಾಡಿ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೊರಿಕೆಯಾದಂತೆ ನಿಗಾ ವಹಿಸಬೇಕೆಂದು ಆಗ್ರಹಿಸಿ ಎಬಿವ್ಹಿಪಿ ಕಾರ್ಯಕರ್ತರು ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಎದುರಿಗೆ ಪ್ರತಿಭಟಿಸಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಎಬಿವ್ಹಿಪಿ ರಾಜ್ಯ ಕಾರ್ಯದರ್ಶಿ ಸೂರಜ್ ಪಂಡಿತ್, ದೇಶದಲ್ಲಿ ಕೊರೊನಾ ತಾಂಡವಾಡುತ್ತಿದೆ. ಇದರಿಂದ ಈಗಾಗಲೇ ರಾಜ್ಯದ ಜನತೆಯೂ ಕಂಗಾಲಾಗಿದ್ದಾರೆ. ಇಂತಹ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಬಿ.ಕಾಂ ಪದವಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಸೊರಿಕೆಯಾಗಿದ್ದು ನಿನ್ನೆ ಪರೀಕ್ಷೆಗೆ ಹಾಜರಿದ್ದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕಿದ್ದು ಖಂಡನೀಯವಾಗಿದೆ. ಯಾರೊ ಮಾಡಿದ ತಪ್ಪಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದಂತಾಗಿದೆ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ರಕ್ಷಣೆ ಮಾಡುವುದು ಸಂಬಂಧಿಸಿದ ಕಾಲೇಜುಗಳ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಇದನ್ನು ಮಾಡದೇ ಪಶ್ನೆ ಪತ್ರಿಕೆ ಸೊರಿಕೆಯಾಗುವಂತೆ ಮಾಡಿ ಇದರಿಂದ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಎಷ್ಟರಮಟ್ಟಿಗೆ ಸರಿಯಾಗಿದೆ? ಇದರ ವಿರುದ್ಧ ಕೂಡಲೇ ಕುಲಪತಿಗಳು ತನಿಖೆ ನೆಡೆಸಿ ಪ್ರಶ್ನೆ ಪತ್ರಿಕೆ ಸೊರಿಕೆ ಮಾಡಿದವರನ್ನು ಕಂಡು ಹಿಡಿದು ಅವರ ವಿರುದ್ಧ ಕಾನೂನು ರೀತಿಯಾಗಿ ಕ್ರಮ ಜರಿಗುಸಬೇಕೆಂದು ಆಗ್ರಹಿಸಿದರು.
ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿಗಳು ಮನವಿ ಸ್ವೀಕರಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಪ್ರಕರಣ ದಾಕಲಿಸಿರುವುದಾಗಿ ತಿಳಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕುಲಪತಿಗಳು ಹೇಳಿದರು
ಈ ಸಂದರ್ಭದಲ್ಲಿ ಎಬಿವ್ಹಿಪಿ ರಾಜ್ಯ ಸಹ ಕಾರ್ಯದರ್ಶಿ ತೇಜಸ ರೆಡ್ಡಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Be the first to comment