ಜಿಲ್ಲಾ ಉಸ್ತುವಾರಿ ಸಚಿವರಿಂದ ಆಹಾರಧಾನ್ಯಗಳ ಕಿಟ್ ವಿತರಣೆ

ಜೀಲ್ಲಾ ಸುದ್ದಿಗಳು

ಬೀದರ ಮೇ.8 (ಅಂಬಿಗ ನ್ಯೂಸ್ ):- ಪಶು ಸಂಗೊಪನೆ, ಹಜ್ ಮತ್ತು ವಕ್ಪ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮೇ.8ರಂದು ಬೀದರ್ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಹತ್ತಿರದ ತಮ್ಮ ಕಚೇರಿ ಆವರಣದಲ್ಲಿ

ಸಾರ್ವಜನಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಮತ್ತು ಕರೋನಾ ಹರಡದಂತೆ ಮುಜಾಗ್ರತಾ ಕ್ರಮವಾಗಿ ದೇಶದೆಲ್ಲೆಡೆ ಲಾಕ್ ಡೌನ್ ಮುಂದುವರೆದಿದೆ. ಈ ಸಂದರ್ಭದಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದೆಂದು ತಿಳಿದು ಸರ್ಕಾರದಿಂದ ನಿರಾಶ್ರಿತರು, ಬಡವರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆಹಾರಧಾನ್ಯಗಳ ವಿತರಣೆ ಕಾರ್ಯಕ್ರಮವನ್ನು ತಾವು ಕೂಡ ಮುಂದುವರೆಸಿದ್ದು, ಕಡುಬಡವರು ಹಸಿವಿನಿಂದ ನರಳಬಾರದೆಂಬುದು ತಮ್ಮ ಉದ್ದೇಶವಾಗಿದೆ ಎಂದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ:: ಕಡ್ಡಾಯ ಮಾಸ್ಕ ಧರಿಸಿದರೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕರೋನಾದಿಂದ ದೂರ ಇರಬಹುದು. ಸಾರ್ವಜನಿಕರು ಇದನ್ನರಿತು ಮಾಸ್ಕ ಧರಿಸಬೇಕು. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದರು.

ವರದಿ.ಚಂದ್ರಕಾಂತ ಹಳ್ಳಿಖೇಡಕರ ಬೀದರ್.

Be the first to comment

Leave a Reply

Your email address will not be published.


*