ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ ನಿನ್ನೆ ಬಿಡುಗಡೆಗೊಳಿಸಿದ ಹೇಳಿಕೆ ಪ್ರಕಾರ, ಕೋವಿಡ್-19 ಜೂನ್ ಮತ್ತು ಜುಲೈನಲ್ಲಿ ಉತ್ತುಂಗಕ್ಕೆ ಏರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ತಿಂಗಳು ನಡೆಸುವುದು ಬೇಡವೆಂದು ವಿಜಯಪುರ NSUI ಜಿಲ್ಲಾ ಅಧ್ಯಕ್ಷ ಹೇಳಿದ್ದಾರೆ
ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲ ವಾರ ಬಹಳ ನಿರ್ಣಾಯಕವೆಂದು ಹಲವು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಕೊರೊನಾಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಮತ್ತು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಸೇರಿದಂತೆ ಸುಮಾರು 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ.
ಕೊರೊನಾ ಹೋರಾಟ ದೀರ್ಘಕಾಲಿನವಾಗಿದ್ದು, ವಾಸ್ತವಿಕತೆಯನ್ನು ಅರಿತು ಸರ್ಕಾರ ಹೆಜ್ಜೆ ಇಡಬೇಕು. ವಲಸೆ ಕಾರ್ಮಿಕರ ವಿಚಾರದಲ್ಲಿ ಆದ ತಪ್ಪನ್ನು ಇಲ್ಲಿ ಪುನರಾವರ್ತನೆ ಮಾಡಬಾರದು. ಪರೀಕ್ಷೆಯನ್ನು ಮುಂದೂಡುವುದು ಉಚಿತ ಎಂದು ಸದ್ದಾಂ ಕುಂಟೋಜಿ ಅವರು ತಿಳಿಸಿದ್ದಾರೆ
Be the first to comment