ಆರ್.ಆರ್.ಟಿ ತಂಡದಿಂದ ಜಾಗೃತಿ ಹಾಗೂ ನೆರವು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಕೂಡ್ಲಿಗಿ ತಾಲ್ಲೂಕು ಆಡಳಿತದಿಂದ ರಚನೆ ಆಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ಹೋಬಳಿಯಲ್ಲಿ ಕಾರ್ಯನಿರ್ವಹಿಸುವ ಆರ್.ಆರ್.ಟಿ (Rapid Response Team) ತಂಡದಿಂದ ಕೂಡ್ಲಿಗಿ ಪಟ್ಟಣದ ಹಲವೆಡೆಗಳಲ್ಲಿ ಕೊರೋನಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು ಮತ್ತು ಕಡುಬಡವರಿಗೆ ಅಗತ್ಯ ನೆರವು ನೀಡಲಾಯಿತು.
ತಂಡದಿಂದ ಕೂಡ್ಲಿಗಿ ಪಟ್ಟಣದ ಅಜಾದ್ ನಗರ, ರಾಜೀವಗಾಂಧೀ ನಗರಗಳಲ್ಲಿ ಜಾಗೃತಿ ಮೂಡಿಸಿ ಕಡುಬಡವರಿಗೆ ಅಗತ್ಯ ನೆರವು ನೀಡಿಲಾಯಿತು.ತಂಡದ ಸದಸ್ಯರು ಹಾಗೂ ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೆಚ್. ದೇವೇಂದ್ರ ಮಾತನಾಡಿ ತಂಡವು ಕೂಡ್ಲಿಗಿ ಮತ್ತು ಕೊಟ್ಟೂರು ಹೋಬಳಿಗಳಲ್ಲಿ ಕಾಯ೯ನಿವ೯ಹಿಸುತ್ತಿದೆ. ಕಾಯ೯ನಿಮಿತ್ತ ಸಂಚರಿಸುವಾಗ ಮಾಗ೯ಮಧ್ಯದಲ್ಲಿ ಹಾಗೂ ಗ್ರಾಮಗಳಲ್ಲಿ ಅನೇಕರು ಒಪ್ಪತ್ತು ಊಟಕ್ಕೂ ಪರಿತಪಿಸುವುದನ್ನು ಕಂಡಿದ್ದೇವೆ.ಆಗ ನಮ್ಮತಂಡದ ಸದಸ್ಯರಾದ ಪೊಲೀಸ್ ಕಾನ್ಸ್ ಟೇಬಲ್ ಸ್ವರೂಪಾನಂದ. ತಾ ಪಂ ಸಿಬ್ಬಂದಿ ಮಾರುತಿ‌, ಕಂದಾಯ ಇಲಾಖೆಯ ಕುಮಾರಸ್ವಾಮಿ ನಾವೆಲ್ಲರೂ ಅಂತಹವರಿಗೆ ಶಕ್ತಾನುಸಾರ ಅಗತ್ಯ ನೆರವು ನಿಡುತ್ತಿದ್ದೇವೆ.ಇದನ್ನು ಬಹುದಿನಗಳಿಂದಲೂ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.
ಪೊಲೀಸ್ ಪೇದೆ ಸ್ವರೂಪಾನಂದ ಮಾತನಾಡಿ ಆಥಿ೯ಕ ಸ್ಥಿತಿವಂತರು ತಮ್ಮ ನೆರೆಹೊರೆಯ ಕಡುಬಡವರನ್ನು ನಿರ್ಗತಿಕರನ್ನು ಗುರುತಿಸಿ ಅವರಗೆ ಶಕ್ತಾನುಸಾರ ಅಗತ್ಯ ನೆರವು ನೀಡಬೇಕೆಂದು ಸಾವ೯ಜನಿಕರಲ್ಲಿ ಕೋರಿದರು.ಕೊರೋನಾ ರೋಗ ನಿಯಂತ್ರಣಕ್ಕಾಗಿ ಸಕಾ೯ರ ಲಾಕ್ ಡೌನ್ ಜಾರಿತಂದಿದೆ.ಅದನ್ನು ಎಲ್ಲರೂ ಪಾಲಿಸಲೇಬೇಕಾಗಿದೆ.ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸ್ಥಿತಿವಂತರು ಮಾನವೀಯತೆ ಮೆರೆಯೋ ಮೂಲಕ ಸಮಾಜ ಸೇವಕರಾಗಬಹುದು ಮತ್ತು ಸಮಾಜದಲ್ಲಿ ಉತ್ತಮಸ್ಥಾನ ಮಾನಗಳನ್ನು ಹೊಂದಬಹುದಾಗಿದೆ ಎಂದರು. ತಾಪಂ ಇಲಾಖೆಯ ಮಾರುತಿ,ಕಂದಾಯ ಇಲಾಖೆಯ ಕುಮಾರಸ್ವಾಮಿ, ಡ್ರೈವರ್ ವಲಿ,ಪೆಟ್ರೋಲ್ ಬಂಕ್ ಹರೀಶ,ಮಂಜು, ಸಾಲುಮನಿ ರಾವೇಂದ್ರ, ಹೋಟೆಲ್ ಕೊಟ್ರೇಶಪ್ಪ ಮುಂತಾದವರಿದ್ದರು.✍️

Be the first to comment

Leave a Reply

Your email address will not be published.


*