ಜೀಲ್ಲಾ ಸುದ್ದಿಗಳು
ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕರೋನಾ ವೈರಸ್ ಬಗ್ಗೆ ಮುಂಜಾಗೃತಿ ಸಲುವಾಗಿ ಅರಿವು ಮೂಡಿಸಲಾಯಿತು.
ಮಾಂಜರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಂಚಾಯತಿ ಸದಸ್ಯರು ಕರೋನಾ ವೈರಸ್ ಕುರಿತು ಜನಜಾಗೃತಿ ನಡೆಸಿದರು.
ರಸ್ತೆಗಳಲ್ಲಿ ಬೀದಿ ಬೀದಿಗಳಲ್ಲಿ ಹಾಗೂ ಕಟ್ಟೆ ಮೇಲೆ ಗುಂಪು ಗುಂಪಾಗಿ ಕುಳಿತು ಮಾತನಾಡಬೇಡಿ ಹೊರಗೆ ಯಾರೂ ತಿರುಗಾಡಬೇಡಿಯೆಂದು ಜನರಿಗೆ ಮನವರಿಕೆ ಮಾಡಿದರು .PKPS ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡಿಕೋಳಿ ಎಂದು ಜನರಿಗೆ ತಿಳಿಸಿದರು.ಸೋಂಕು ಪೀಡಿತರಿಂದ ದೂರವಿರುವುದು.
ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು. ಗ್ರಾಮಸ್ಥರ ಜನರಲ್ಲಿ ಕೊರಾನಾ ವೈರಸ್ ಕುರಿತು ಅರಿವು ಮೂಡಿಸಿದರು.
ಕೊರಾನಾ ವಾಯರಸ್ ವಿರುದ್ಧ ಹೋರಾಡಲು ಸರಕಾರಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯತಿ ಸಿಬ್ಬಂದಿ ಅಧಿಕಾರಿ PDO, ಅಧ್ಯಕ್ಷರಾದ ಮಾಯಾ ಬಬನ ಭಿಲವಡೆ , ಉಪಾಧ್ಯಕ್ಷರಾದ ಶೀತಲ ಮಗೆಣ್ಣವರ ,ಪೋಪಟ ಕೋಳಿ, ಬಾಳಾಸಾಹೇಬ ಮಿರ್ಜೆ ,ಸಿದ್ಧಾರ್ಥ ಗಾಯಗೋಳ, ಹಾಗೂ ಗ್ರಾಮಪಂಚಾಯತ ಸಿಬ್ಬಂದಿಯವರು ಹಾಗೂ ಮಾಂಜರಿ ಗ್ರಾಮದ ಹಲವರು ಸೇರಿ ಪ್ರಚಾರ ಮಾಡಿದರು.
Be the first to comment