24 ತಾಸುಗಳಲ್ಲಿ ಅಮೆರಿಕ 1900 ಅಧಿಕ ಜನರ ಸಾವು ಮರಣ ಮೃದಂಗ ಬಾರಿಸುತ್ತಿದೆ ಕರೋನ

ವರದಿ: ಅಮರೇಶ ಕಾಮನಕೇರಿ

ವಿದೇಶದ ಸುದ್ದಿಗಳು

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ದೇಶವಾಗಿದೆ. ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಅಧಿಕವಾಗುತ್ತಲೆ ಇದೆ. ಇದೀಗ, ಒಂದೇ ದಿನ 1900ಕ್ಕೂ ಹೆಚ್ಚು ಕೊರೊನಾ ರೋಗಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಯುಎಎದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿರುವುದು ಕೂಡ ನ್ಯೂಯಾರ್ಕ್‌ನಲ್ಲೆ. ಸುಮಾರು 5489 ಜನರು ನ್ಯೂಯಾರ್ಕ್‌ ಸಿಟಿಯಲ್ಲಿ ಮೃತಪಟ್ಟಿದ್ದಾರೆ. 1.42 ಲಕ್ಷ ಜನರಿಗೆ ಸೋಂಕು ತಗುಲಿದೆ. ನ್ಯೂಯಾರ್ಕ್‌ ಬಿಟ್ಟರೆ ನ್ಯೂ ಜೆರ್ಸಿಯಲ್ಲಿ ಹೆಚ್ಚು ಸೋಂಕು (44,416) ಕಾಣಿಸಿಕೊಂಡಿದ್ದು, 1232 ಜನರು ಸಾವನ್ನಪ್ಪಿದ್ದಾರೆ. 1900 ಸಾವಿನ ಪೈಕಿ ನ್ಯೂಯಾರ್ಕ್‌ ನಗರದಲ್ಲೇ 800ಕ್ಕೂ ಹೆಚ್ಚು ಸಾವು ಸಂಭವಿಸಿದೆ. 24 ಗಂಟೆಯಲ್ಲಿ ಕೇವಲ ಒಂದೇ ನಗರದಲ್ಲಿ 800ಕ್ಕು ಹೆಚ್ಚು ಜನ ಮೃತಪಟ್ಟಿರುವುದು ಯುಎಸ್‌ ದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 6 ರಿಂದ ಏಪ್ರಿಲ್ 7 ರವರೆಗೆ ನ್ಯೂಯಾರ್ಕ್‌ನಲ್ಲಿ 731 ಮಂದಿ ಸಾವನ್ನಪ್ಪಿದ್ದರು. ಈಗ ಏಪ್ರಿಲ್ 7 ರಿಂದ ಏಪ್ರಿಲ್ 8 ರವರೆಗೆ ಆ ಸಂಖ್ಯೆ ಮತ್ತಷ್ಟು ಏರಿದೆ. ಹೀಗಾಗಿ, ಗವರ್ನರ್ ಆಂಡ್ರ್ಯೂ ಕುವೋಮೊ ಲಾಕ್‌ಡೌನ್‌ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಿದ್ದಾರೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅಮೆರಿಕದಲ್ಲಿ 4,00,412 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ 12,854 ಜನರು ನಿಧನರಾಗಿದ್ದಾರೆ. 21,674 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು 9169 ಜನರ ಸ್ಥಿತಿ ಗಂಭೀರವಾಗಿದೆ. ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಸ್ಥಿತಿ ಕೈ ಮೀರುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಬೇರೆ ರಾಷ್ಟ್ರಗಳ ಬಳಿ ನೆರವು ಸಹಾಯ ಕೇಳುತ್ತಿದ್ದಾರೆ. ಭಾರತದ ಬಳಿಯೂ ಮಲೇರಿಯಾ ನಿವಾರಕ ಔ‍ಷಧಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

Be the first to comment

Leave a Reply

Your email address will not be published.


*