ರಾಜ್ಯದ ಸುದ್ದಿಗಳು
ಲಿಂಗಸ್ಗೂರ:- ಕರೋನ ವೈರಾಸ ನಿಂದ ಇಡೀ ದೇಶ ಲಾಕ್ ಡೌನ ಆಗಿದೆ ಕರ್ನಾಟಕ ಸಂಪೂರ್ಣ ಸ್ತಬ್ದವಾಗಿರುವಾಗಲ್ಲೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕೆಲ ಅಧಿಕಾರಿಗಳು ಗುತ್ತಿಗಾರರ ಬಿಲ್ಲ ಪಾವತಿ ಮಾಡುವದರಲ್ಲಿ ಬೀಜಿಯಾಗುರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ನಾರಯಣಪೂರ ಮತ್ತು ರೋಡಲಬಂಡಾ ಕ್ಯಾಂಪ್ ಆಪೀಸ್ ಗಳ ವ್ಯಾಪ್ತಿಗೆ ಬರುವ ಹಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಆಗಿದು ಆ ಬಗ್ಗೆ ಹಲವು ದೂರು ಗಳು ಇದ್ದರು ಕೆ ಬಿ ಜೆ ಎನ ಎಲ್ ಅಧಿಕಾರಿಗಳು ಕಾಂಟ್ಯಾಕ್ಟ್ ಗಳ ಬಿಲ್ಲ ಪಾವತಿ ಮಾಡುತ್ತಿದು ಅಕ್ರಮದ ದಟ್ಟ ಹೊಗೆ ಹಾಡುತ್ತಿದೆ. ರೋಡಲಬಂಡಾ ಕ್ಯಾಂಪನ ನೀರಿನ ಟ್ಯಾಂಕ್ ಕಾಮಗಾರಿಯು ಸಂಪೂರ್ಣ ಕಳಪೆಯಾದೆ ತನಿಖೆ ಮಾಡಬೇಕು ಎಂದು ಅನ್ನದಾತ ರಕ್ಷಣಾ ವೇದಿಕೆ ದೂರು ನೀಡಿದೆ ಅಲ್ಲದೆ ಮರಳಲ್ಲಿ (ಉಸುಕು) ಮಣ್ಣು ಮಿಶ್ರಿಣ ಮಾಡುತ್ತಿರು ವಿಡಿಯೋ ನೀಡಿ ಕಳಪೆ ಕಾಮಗಾರಿ ಬಗ್ಗೆ ದಾಖಲೆ ಸಮೇತ ದೂರನ್ನು ನೀಡಿದರು ಕಾಮಗಾರಿ ಪೂರ್ಣವಾಗುವಂತೆ ನೋಡಿಕೊಂಡ ಅಧಿಕಾರಿಗಳು ನೀರಿನ ಟ್ಯಾಂಕ್ ನೀರು ತುಂಬಿದ ದಿನವೇ ಸೊರುತ್ತಿದೆ.
ಇಂದು ನಾಳೆ ಬಿಳುವ ರೀತಿಯಲ್ಲಿ ನಿರ್ಮಾಣವಾಗಿದೆ.ಸುತ್ತ ಮುತ್ತಲ್ಲಿನ ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳು ಇದರ ಬಗ್ಗೆ ನಾರಾಯಣಪುರದ ಚಿಪ್ ಇಂಜಿನಿಯರರವರ ಗಮನಕ್ಕೆ ತಂದ ನಂತರ ಸ್ವತಃ ಚಿಪ ಇಂಜಿನಿಯರ್ ರಂಗರಾಮ ಸಾಹೇಬರು ರೋಡಲಬಂಡಾ ಕ್ಯಾಂಪನ ಟ್ಯಾಂಕಗಳ ವೀಕ್ಷಣೆ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹೋಗಿದ್ದಾರೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಮೊಲಾಸಾಬ ಮತ್ತು ಕಳಪೆ ಕಾಮಗಾರಿ ಮಾಡಲು ಅನುವು ಮಾಡಿಕೋಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗದೆ ಇರುವುದು ಇವರ ಕಾರ್ಯವೈಕರಿಗೆ ಇಡೀದ ಕನ್ನಡಿಯಾಗಿದೆ.ಸ್ವತಃ ಕೆ ಬಿ ಜೆ ಎನ ಎಲ್ ಅಧಿಕಾರಿಗಳು ವಾಸಿಸುವ ಮನೆಗಳ ಕುಡಿಯುವ ನೀರಿನ ಟ್ಯಾಂಕ ಕಾಮಗಾರಿ ಕಳಪೆಯಾದರು ಅದು ಕೆ ಬಿ ಜೆ ಎನ ಎಲ್ ಪ್ರಮುಖ ಆಪೀಸ್ ಗಳ ಮುಂಭಾಗದಲ್ಲೆ ಉಸುಕಿನಲ್ಲಿ ಮಣ್ಣು ಮಿಶ್ರಣ ಮಾಡಿ ಕಾಮಗಾರಿ ಮಾಡುತ್ತಿದರು ಸುಮನೆ ಇರುವ ಇಂತ ಭ್ರಷ್ಟ ಕೆ ಬಿ ಜೆ ಎನ ಎಲ್ ಅಧಿಕಾರಿಗಳಿಂದ ರೈತ ಹೊಲದಲ್ಲಿ ನೇಡೆಯುವ ಕಾಮಗಾರಿಗಳು ಎಷ್ಟರ ಮಟ್ಟಿ ಕಳಪೆ ಆಗಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಇಂತ ಕಳಪೆ ಕಾಮಗಾರಿಯಿಂದ ಮುಂದೆ ಸಂಭವಿಸಬಹುದಾದ ಬಾರಿ ಅನಾಹುತಕ್ಕೆ ಯಾರು ಹೊಣೆ ಕೆ ಬಿ ಜೆ ಎನ ಎಲ್ ಅಧಿಕಾರಿಗಳೋ ? ಅಥವಾ ಗುತ್ತಿಗೆದಾರರೋ ? ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಲೈಸೆನ್ಸ್ ರದ್ದು ಗೋಳಿಸದೆ ಬಿಲ್ಲ ಪಾವತಿ ಮಾಡುತ್ತಿರುವ ಅಧಿಕಾರಿಗಳಿಗೆ ಮನೆದಾರಿ ತೋರಿಸದ ಹೊರತು ಇಂತ ಕಳಪೆ ಕಾಮಗಾರಿಗಳ ಗುತ್ತಿಗಾದಾರರಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಕೃಷ್ಣ ನದಿ ಕೋಳ ಭಾಗ್ಯದ ರೈತ ಮತ್ತು ಜನ ಸಾಮಾನ್ಯರ ಅಭಿವೃದ್ಧಿಯು ಸಾಧ್ಯವಿಲ್ಲ.
Be the first to comment