ಅಂಬಿಗ ನ್ಯೂಸ್ ಸುರಪುರ
ಪ್ರತಿವರ್ಷದಂತೆ ಈ ವರ್ಷವೂ ಏಪ್ರಿಲ್ ತಿಂಗಳಿನಲ್ಲಿ ದವನದ ಹುಣ್ಣಿಮೆಯಂದು ನಡೆಯಬೇಕಿದ್ದ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲೂಕಿನ ಕಾಲಜ್ಞಾನಿ ಕೊಡೆಕಲ್ ಬಸವಣ್ಣನವರ ಜಾತ್ರೆ ಕೊರೊನಾ ದಿಂದಾಗಿ ಇಡೀ ದೇಶಾದ್ಯಂತ ಹೊರಡಿಸಲಾಗಿರುವ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ರದ್ದಾಗಿದೆಯೆಂದು ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು ಭಕ್ತರು ಯಾವುದೇ ಕಾರಣಕ್ಕೂ ಅನ್ಯತಾ ಭಾವಿಸದೆ ನಾಳೆಯ ದಿನ ಕೊಡೆಕಲ್ ಬಸವಣ್ಣನವರ ದೇವಸ್ಥಾನಕ್ಕೆ ಜಾತ್ರೆಯ ನೆಪದಲ್ಲಿ ಯಾರೂ ಬರಕೂಡದು ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದು ಮಾಡಲಾಗಿದೆ, ಹಾಗಾಗಿ ಜನತೆ ಸಹಕರಿಸಬೇಕು ದೇವಸ್ಥಾನಕ್ಕೆ ಬಂದು ಕಾಯಿ, ಕರ್ಪೂರ ಮತ್ತು ತಾವೂ ಬೇಡಿಕೊಂಡ ಹರಕೆಗಳನ್ನು ಸಲ್ಲಿಸುವ ಬದಲು ತಮ್ಮ ಮನೆಯ ಜಗುಲಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನಿಟ್ಟು ಬೇಡಿಕೊಳ್ಳಲು ಮನವಿ ಮಾಡಿದ್ದಾರೆ.
Be the first to comment