ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ಇರುವ ಕಾರಣ ಕಂಗೆಟ್ಟ ಎಂಕೆ ಹುಬ್ಬಳ್ಳಿಯ ಬಸಪ್ಪಾ ಕೊಡ್ಲಿ ಎಂಬ ರೈತ”

ವರದಿ:- ಬಸವರಾಜು ಬೆಳಗಾವಿ

ರೈತ-ಧ್ವನಿ

ಸಾಲ ಮಾಡಿ ಜೀವನೋಪಾಯ ಕ್ಕಾಗಿ ಬೆಳೆದ ಪಸಲುಗಳಿಗೆ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ರೈತರ ಪರಿಸ್ಥಿತಿ ಹೇಗೆ ಸ್ವಾಮಿ!

ಕೃಷಿ ಸಚಿವರಾದ ಬಿ ಸಿ ಪಾಟೀಲರೇ ಇನ್ನಾದರೂ ರೈತರ ಹಿತ ಕಾಯುತ್ತಿರಾ?

ಎಂಕೆ ಹುಬ್ಬಳ್ಳಿ :-ಹೌದು ಈ ಕರೋನಾ ವೈರಸ್ ಎಂಬ ಮಾರಿಯಿಂದ ಅನ್ನಕೊಡುವ ಅನ್ನದಾತ ರೈತನಿಗೂ ಸಾಕಷ್ಟು ನಷ್ಟವಾಗಿದ್ದು, ಜೀವನ ನಡೆಸುವುದು ಹೇಗೆ ಎಂಬುದಕ್ಕೆ ಕಣ್ಣೀರು ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹದ್ದೇ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿಯ ಬಸಪ್ಪಾ ಕೊಡ್ಲಿ ಎಂಬ ರೈತನ ಪರಿಸ್ಥಿತಿಯೂ ತುಂಬಾನೇ ಶೋಚನೀಯ ವಾಗಿದೆ. ಸಾಲ ಮಾಡಿ 3 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 3 ಎಕರೆ ಜಮೀನಿನಲ್ಲಿ ಕುಂಬಳಕಾಯಿ ಬೆಳೆಯನ್ನು ಬಿತ್ತುತ್ತಾರೆ. ಆದರೇ ಕೈ ಬಂದ ತುತ್ತು ಬಾಯಿಗೆ ಬರೋದಿಲ್ಲ ಎಂಬಂತೆ ಕುಂಬಳಕಾಯಿಗಳು ಬೆಳೆದು ಮಾರಾಟಕ್ಕೆ ನಿಂತಿವೆ.

Lock down ಎಲ್ಲೆಡೆ ಇರುವುದರಿಂದ ಸೂಕ್ತ ಮಾರುಕಟ್ಟೆ, ಬೆಲೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ ಬೆಳೆದ ಕುಂಬಳಕಾಯಿ ಗಳು ಕೊಳೆತು ಹೋಗುತ್ತಿವೆ. ಸರ್ಕಾರ ನೆಪ ಮಾತ್ರಕ್ಕೆ ಮಾರುಕಟ್ಟೆ , ಸೂಕ್ತ ಬೆಲೆ ನಿಗದಿ ಮಾಡುವುದಾಗಿ ಆದೇಶ ನೀಡಿದೆ. ಆದರೇ ಕಾರ್ಯರೂಪಕ್ಕೆ ಬಂದಿಲ್ಲಾ . ಆದ್ದರಿಂದ ಇಂದು ಪತ್ರಕರ್ತ ಬಸವರಾಜು ಭೇಟಿಕೊಟ್ಟು ಈ ರೈತನ ಸಮಸ್ಯೆಗಳು ಹಾಗೂ ನಷ್ಟಗಳ ಬಗ್ಗೆ ಸಮಗ್ರವಾಗಿ ವರದಿ ತಯಾರು ಮಾಡಿದರು. ಇನ್ನಾದರೂ ಸರ್ಕಾರ , ಸಂಬಂಧಿಸಿದಂತೆ ಇರುವ ಇಲಾಖೆಗಳು, ಕೃಷಿ ಸಚಿವರಾದ ಬಿ ಸಿ ಪಾಟೀಲರು ಈ ರೈತನ ಹಿತ ಕಾಯುವರೇ ಎಂಬುದನ್ನ ಕಾದುನೋಡಬೇಕಿದೆ.

Be the first to comment

Leave a Reply

Your email address will not be published.


*