ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಬೆಲೆಕಟ್ಟಲಾಗದ ಆರೋಗ್ಯ,ದೇಶ,ಜನರು,ಕಾನೂನಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಅಖಿಲ್ ಮೌಲ್ವೀಸಾಹೇಬ್ ನುಡಿದರು. ಅವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕೊರೋನಾ ಜಾಗೃತಿ ಮತ್ತು ಸಾಮೂಹಿಕ ಪ್ರಾಥ೯ನೆ ನಿಶಿದ್ಧಗೊಳಿಸಿ ಆದೇಶಿಸದೆ.ಸಕಾ೯ರ ಸೂಚಿಸಿರುವುದರ ಕುರಿತು ಮೌಲಾನಾರಿಗೆ ಹಾಗೂ ಮುಖಂಡರಿಗಾಗಿ ತಿಳುವಳಿಕೆ ಮೂಡಿಸುವ ಸಭೆಯಲ್ಲಿ ಮೌಲಾನಾ ಮಾತನಾಡಿದರು.ಲಾಕ್ ಡೌನ್.144ಸೆಕ್ಷನ್ ಜಾರಿಯಾದಾಗಲಿಂದಲೂ ಸಾಮೂಹಿಕ ಪ್ರಾಥ೯ನೆಯನ್ನ ನಿಲ್ಲಿಸಲಾಗಿದೆ ಸ್ಪಷ್ಟಪಡಿಸಿದರು.ನಾವೂ ಕೂಡ ಕಾನೂನನ್ನ ಗೌರವಿಸುತ್ತೇವೆ ಮತ್ತು ನಿಯಮಗಳನ್ನು ಪಾಲಿಸುತ್ತಿದ್ದೇವೆ.ನಾವು ಮನೆಯಲ್ಲಿ ಪ್ರಾಥಿ೯ಸುವಾಗ ಜಗತ್ತನ್ನು ಕೊರೋನಾ ಮುಕ್ತ ಗೊಳಿಸೆಂದು ಅಲ್ಲಾಹನಲ್ಲಿ ಪ್ರಾಥಿ೯ಸುತ್ತಿದ್ದೇವೆ ಮತ್ತು ಶಾಂತಿಯುತ ಜಗತ್ತು ನಿಮಾ೯ಣವಾಗಲಿ ಲೋಕ ಕಲ್ಯಾಣವಾಗಲೆಂದು ಕೋರುತ್ತೇವೆ.ಅದರಂತೆಯೇ ಪ್ರಾಥಿ೯ಸುವಂತೆ ಸಮಾಜದವರಿಗೆಲ್ಲರಿಗೂ ಸೂಚಿಸಲಾಗಿದೆ ಎಂದರು.ಪಟ್ಟಣ ಪಂಚಾಯ್ತಿ ಸದಸ್ಯ ಹಾಗೂ ಮುಸ್ಲೀಂ ಯುವಮುಖಂಡ ಸೈಯದ್ ಶುಕೂರ್ ರವರು ಮಾತನಾಡಿ ಕೊರೋನಾ ವಿರುದ್ಧದ ಸಮರದಲ್ಲಿ ಸಕಾ೯ರ ಕೈಗೊಳ್ಳುವ ಎಲ್ಲಾ ನಿಧಾ೯ರಗಳಿಗೆ ತಮ್ಮ ಸಮುದಾಯದಿಂದ ತುಂಬು ಹೃದಯದ ಸಹಕಾರ ಸದಾ ಇರುತ್ತದೆ.ಲಾಕ್ ಡೌನ್ ಮತ್ತು 144ಸೆಕ್ಷನ್ ನ್ನು ಸಮುದಾಯದ ಪ್ರತಿಯೊಬ್ಬರೂ ಪಾಲಿಸಬೇಕು ಮತ್ತು ಆರೋಗ್ಯ ಇಲಾಖೆಯು ನೀಡಿರುವ ಸಲೆಹೆಗಳನ್ನು ತಪ್ಪದೇ ಪಾಲಿಸುವಂತೆ ಸಮುದಾಯದ ಎಲ್ಲರಿಗೂ ಸೂಚಿಸಲಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್.ಪಿ ಶಿವಕುಮಾರ ಮಾತನಾಡಿ ಕೊರೋನಾ ವಿರುದ್ಧ ಸಕಾ೯ರ ಸಾರಿರುವ ಯುದ್ಧದಲ್ಲಿ ಇಲಾಖೆಯ ಪ್ರತಿಯೊಬ್ಬರೂ ಸೈನಿಕರಂತೆ ಕಾಯ೯ಹಿಸುತ್ತಿದ್ದಾರೆ.ಜೀವದ ಅಂಗುತೊರದು ಆರೋಗ್ಯ ಇಲಾಖೆಯವರು ಕಥ೯ವ್ಯ ನಿವ೯ಹಿಸುತ್ತಿದ್ದಾರೆ.ಇತರೆ ಎಲ್ಲಾ ಇಲಾಖೆಯವರೂ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಇದರೊಂದಿಗೆ ಸಾವ೯ಜನಿಕರ ಹಾಗೂ ಎಲ್ಲಾ ಸಮುದಾಯದವರ ಸಹಕಾರ ಮುಖ್ಯ ಎಂದರು.ಆರೋಗ್ಯ ಇಲಾಖೆ ಸೂಚಿರುವ ಎಲ್ಲಾ ನಿಯಮಗಳನ್ನು ಮತ್ತು ಲಾಕ್ ಡೌನ್ 144ಸೆಕ್ಷನ್ ಇವನ್ನು ಪಾಲಿಸಿದರೆ ಕೊರೋನಾ ವಿರುದ್ಧ ಗೆಲುವು ಸಾಧ್ಯ.ಜಾತ್ಯಾತೀತವಾಗಿ ಎಲ್ಲರೂ ಸಕಾ೯ರದ ಆದೇಶಗಳನ್ನು ಪಾಲಿಸಲೇಬೇಕು.ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯ ನಿಧಾ೯ಕ್ಷಿಣ್ಯ ಕ್ರಮಜರುಗಿಸಲಾಗುವುದು. ಕಾರಣ ಎಲ್ಲಾ ಸಮುದಾಯಗಳ ಹಿರಿಯರು ಇದರ ಕುರಿತು ಪ್ರಮುಖವಾಗಿ ಯುವಪೀಳಿಗೆಗೆ ಹಾಗೂ ಸವ೯ರಿಗೂ ಅರಿವು ಮೂಡಿಸಬೇಕು ಎಂದರು. ಸಿ.ಪಿ.ಐ.ಪಂಪನಗೌಡ.ಪಿ.ಎಸ್.ಐ.ತಿಮ್ಮಪ್ಪ.ಅಹಲೇ ಹದೀಸ್ ಅಧ್ಯಕ್ಷ ಎ.ಎಮ್.ಭಾಷಾ ಸಾಬ್.ಮಾತನಾಡಿದರು. ಮಖ್ಬುೂಲ್ ಮೌಲ್ವೀಸಾಬ್. ಇಬಾದುಲ್ಲಾ ಮೌಲ್ವೀಸಾಬ್. ಹಫೀಜಾ ಅನ್ವರ್ ಮೌಲ್ವೀ ಸಾಬ್.ಫಿರೋಜ್ ಅಲಾಮ್ ಮೌಲ್ವೀ ಸಾಬ್.ಅಭ್ದುಲ್ವಾಹಬ್ ಮೌಲ್ವೀ ಸಾಬ್.ಹಫೀಜುದ್ಧೀನ್ ಮೌಲ್ವೀ ಸಾಬ್.ಮತ್ತು ಮುಖಂಡರಾದ ಅಥಮಾನ್. ಮುನೀರ್.ಸೈಪುಲ್ಲಾ ಮುಂತಾದವರು ಉಪಸ್ಥಿತರಿದ್ದರು.
Be the first to comment