ಗುಳೆಯಿಂದ ಮರಳಿಬಂದ ಜನರಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಕೆ. ತಳ್ಳಳ್ಳಿ ಗ್ರಾಮದಲ್ಲಿ ಕೋರೋನಾ ಪರೀಕ್ಷೆ:

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಹೌದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೆಂಗಳೂರಿಗೆ ದುಡಿಯಲು ಹೋಗಿ ಇಡೀ ದೇಶಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಮರಳಿ ಸ್ವಗ್ರಾಮಕ್ಕೆ ಗುಳೆ ಹೋಗಿ ಬಂದಿರುವ ಜನರಿಗೆ ಸ್ವತಃ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಯನ್ನು ನಡೆಸಿದರು.

ತಾಲೂಕಿನ ಬೋನ್ಹಾಳ, ಚಿಕ್ಕನಹಳ್ಳಿ,ತಳ್ಳಳ್ಳಿ ಗ್ರಾಮಗಳು ಸೇರಿದಂತೆ ಸುಮಾರು 250 ಜನರಿಗೆ ಸುರಪುರ ಹಾಗೂ ಪೇಠ ಅಮ್ಮಾಪುರದ ಆರೋಗ್ಯ ಇಲಾಖೆಯವರು ಫೀವರ್ ಪರೀಕ್ಷೆಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕರಾದ ಶ್ರೀಕಾಂತ್ ಬಾವೂರ, ಅಬ್ದುಲ್ ರಶೀದ್, ಆರೋಗ್ಯ ಸಹಾಯಕಿ ಸೌಮ್ಯ, ಶೇಖರ್ ಪುರಾಣಿಕ್ ಕಚಕನೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗನಗೌಡ ಪಾಟೀಲ ಗ್ರಾಮ ಪಂಚಾಯತಿ ಕರವಸೂಲಿಗಾರ ಯಲ್ಲಪ್ಪ ಅರಳಗುಂಡಗಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಕಮ್ಮ,ಎಂ, ಆಶಾ ಕಾರ್ಯಕರ್ತೆ ಈರಮ್ಮ ವಡಗೇರಿ, ಅಂಗನವಾಡಿ ಸಹಾಯಕಿ ಹಣಮಂತಿ ತಿಂಥಣಿ, ಭೀಮಶಂಕರ ಕಡಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*