ಕಾಂಗ್ರೆಸ್ ಸರಕಾರ ಬಹಳದಿನ ಉಳಿಯುವ ಯಾವುದೆ ಗ್ಯಾರಂಟಿ ಇಲ್ಲವೆಂದು ಶಾಸಕ ಮಾನಪ್ಪ ವಜ್ಜಲ್ 

ಲಿಂಗಸಗೂರು:ಮೆ.೨೫: ಮತದಾರನಿಗೆ ಹಲವು ಗ್ಯಾರಂಟಿ ನೀಡುತ್ತೇನೆಂದು ಭರವಸೆಯನ್ನಿತ್ತು ಆಯ್ಕೆಗೊಂಡಿರುವ ಕಾಂಗ್ರೆಸ್ ಸರಕಾರ ಬಹಳದಿನ ಉಳಿಯುವ ಯಾವುದೆ ಗ್ಯಾರಂಟಿ ಇಲ್ಲವೆಂದು ಶಾಸಕ ಮಾನಪ್ಪ ವಜ್ಜಲ್ ಲೇವಡಿ ಮಾಡಿದರು

 

ಅವರು ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ಏರ್ಪಡಿಸಿದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತ ಕಾಂಗ್ರೆಸ್ ಪಕ್ಷವು ಮತದಾರನಿಗೆ ಹಲವಾರು ಆಮಿಷಗಳನ್ನು

ತೋರಿಸುವುದರ ಮೂಲಕ ಆಯ್ಕೆಯಾಗಿದ್ದು ಇದೀಗ ರಾಜ್ಯದಲ್ಲಿ ಜನತೆ ಕರೆಂಟ್ ಬಿಲ್ ಕಟ್ಟುವುದಿಲ್ಲ ಬಸ್ ಟಿಕೇಟ್ ಪಡೆಯುವುದಿಲ್ಲವೆಂದು ಹಠಹಿಡಿದಿದ್ದಾರೆ. ಅಲ್ಲದೆ ನಿರುದ್ಯೋಗಿಗಳಿಗೆ ಭತ್ಯೆ ಕೊಡುತ್ತೇವೆಂದು ಈ ವರ್ಷ ಪದವಿ ಮುಗಿಸಿದವರಿಗೆ ಎನುತಿದ್ದಾರೆ ಇದೆಲ್ಲವನ್ನು ಕಂಡರೆ ಸದರಿ ಕಾಂಗ್ರೆಸ್ ಸರಕಾರ ಬಹಳದಿನ ನಿಲ್ಲುವುದು ಗ್ಯಾರಂಟಿ ಇಲ್ಲವೆಂದು ಹೇಳಿದರು

ಅಲ್ಲದೆ ಕ್ಷೇತ್ರದಲ್ಲಿ ಹಲವಾರು ಪಕ್ಷಗಳು ನನ್ನ ಬಗೆಗೆ ಹಲವಾರು ಊಹಾಪೋಹಗಳನ್ನು ಹಬ್ಬಿಸಿದರು ಕ್ಷೇತ್ರ ಬಿಡುತ್ತಾರೆ ಪಕ್ಷ ಬಿಡುತ್ತಾರೆ ಟಿಕೇಟ್ ಸಿಗುವುದಿಲ್ಲ ಹೀಗೆ ಹಲವಾರು ಗಾಳಿಸುದ್ದಿ ತೇಲಿಬಿಟ್ಟ ವಿರೋಧಿ ಪಕ್ಷಗಳಿಗೆ ಉತ್ತರವೆಂಬತೆ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಕಾಂಗ್ರೆಸ್ ಗಾಳಿಯಲ್ಲಿಯು ಕ್ಷೇತ್ರದಲ್ಲಿ ಕಮಲ ಅರಳಿಸಿದ್ದೀರಿ ತಮಗೆಲ್ಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

 

ರಾಜ್ಯದಲ್ಲಿ ಬಿಜೆಪಿ ಸರಕಾರವಿಲ್ಲ ಆದರೆ ನಾನು ಕ್ಷೇತ್ರದ ಜನತೆಗೆ ಮಾತುಕೊಟ್ಟಂತೆ ೨೪ಗಂಟೆ ಕುಡಿಯುವ ನೀರು ಕೊಡುವುದು, ಸ್ವಚ್ಚತಾಕಾರ್ಯ, ಗುಡ್ಡಗಾಡು ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯ ಸ್ಥಾಪನೆ, ನೀರಾವರಿ ಸೌಲಭ್ಯ ಕಲ್ಪಿಸುವುದು, ಹಾಗೂ ಎರಡು ಸಾವಿರ ಮಹಿಳೆಯರ ಅನುಕೂಲಕ್ಕಾಗಿ ಗಾರ್ಮೆಂಟ್ ಸ್ಥಾಪನೆ ಎಂದು ಮಾತುಕೊಟ್ಟಂತೆ ನಡೆದುಕೊಂಡು ಸರಕಾರದ ಮೇಲೆ ಒತ್ತಡಹಾಕಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು

 

ಕಾಐರಿಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ರಾಜಾ ಅಮರೇಶ್ವರನಾಯಕ ಇತೀಚೆಗೆ ಪ್ರಧಾನಿ ಮೋದಿಯವರು ಜಿಲ್ಲೆಗೆ ಬಂದಾಗ ರಾಯಚೂರು ಜಿಲ್ಲೆಯ ಬಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಜಿಲ್ಲೆಯ ಅಭಿವೃದ್ಧಿಯ ಬಗೆಗೆ ಮಾತನಾಡಿದ್ದಾರೆ. ಲಿಂಗಸಗೂರು ಕ್ಷೇತ್ರದಲ್ಲಿ ವಜ್ಜಲರು ಆಯ್ಕೆಯಾಗಿದ್ದು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾದಂತಾಗಿದೆ. ಉತ್ತರದಲ್ಲಿ ಬಿಜೆಪಿಗೆ ಉತ್ತಮ ಅವಕಾಶವಿದ್ದರೆ ದಕ್ಷಿಣದಲ್ಲಿ ಸ್ವಲ್ಪ ತೊಂದರೆಯಾಗಿದೆ ಅದಕ್ಕೆ ಪಕ್ಷದ ನಿರ್ಧಾರಗಳು ಮತ್ತು ಟಿಖೇಟ್ ಹಂಚಿಕೆಯ ತಪ್ಪುಗಳು ಸೇರಿ ಆಗಿರಬಹುದು ಆದರು ವಜ್ಜರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಅಲ್ಲದೆ ಅವರು ಸಹಿತ ಸೋತಾಗಲು ಸುಮ್ಮನಿರದೆ ಸದಾ ಜನರೊಂದಿಗೆ ಬೆರೆಯುತ್ತಿರುವುದರ ಮೂಲಕ ಇದು ಸಾಧ್ಯವಾಗಿದೆ.

ದೇಶದಲ್ಲಿ ಬ್ರಿಟಿಷರು ಕಟ್ಟಿದ ಸಂಸತ್ತಿನಲ್ಲಿ ಸದನಗಳು ನಡೆಯುತ್ತಿದ್ದವು ಆದರೆ ಮೋದೀಜಿಯವರ ಕನಸಿನಂತೆ ಹೊಸ ಸಂಸತ್ ಭವನ ನಿರ್ಮಾಣವಾಗಿದ್ದು ಇದೆ ತಿಂಗಳು ಲೋಕಾರ್ಪಣೆಯಾಗಲಿರುವುದು ಸಂತಸದ ಸಂಗತಿಯಾಗಿದೆ ಜನರನ್ನು ಮರಳು ಮಾಡುವುದರ ಮೂಲಕ ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಪಕ್ಷ ಬಹದಿನ ಉಳಿಯುವುದಿಲ್ಲವೆಂದರು

 

ಮಂಡಲ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪಕ್ಷದ ತಳಮಟ್ಟದ ಕಾರ್ಯಕರ್ತರು ಮುಖಂಡರು ಮಹಿಳಾ ಘಟಕಗಳು ಸೇರಿದಂತೆ ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡಿರುವುದಕ್ಕಾಗಿ ಗೆಲುವಾಗಿದೆ ನಾವು ಈ ಗೆಲುವಿನಲಿ ಮೈಮರೆಯದೆ ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಈಗಿನಿಂದಲೇ ಕೆಲಸ ಮಾಡಿ ಕ್ಷೇತ್ರದ ಎಲ್ಲಾ ಜಿ.ಪಂ ಗಳನ್ನು ಬಿಜೆಪಿಪರವಾಗಿ ಗೆಲ್ಲಿಸೋಣವೆಂದರು.

 

ಉಸ್ತುವಾರಿ ಚಂದ್ರ ಶೇಖರ ಪಾಟೀಲ್ ರಾಜಾ ಸೋಮನಾಥನಾಯಕ ಸೇರಿದಂತೆ ವಿವಿಧ ಗಣ್ಯರು ಮಾತನಾಡಿದರು.

 

ನೂತನ ಶಾಸಕರಾಗಿ ಆಯ್ಕೆಯಾದ ಮಾನಪ್ಪ ವಜ್ಜಲರಿಗೆ ಸನ್ಮಾನಿಸಲಾಯಿತು. ಅಲ್ಲದೆ ಆಯ್ದ ಕಾರ್ಯಕರ್ತರು ಮತ್ತು ಮುಖಂಡರಿಗೂ ಸನ್ಮಾನಿಸಲಾಯಿತು

 

ಈ ಸಂದರ್ಭದಲ್ಲಿ ರಾಜಾ ಶ್ರೀನಿವಾಸನಾಯಕ, ಗಿರಿನಲ್ಲನಗೌಡ ಪಾಟೀಲ್, ಶಂಕರಗೌಡ ಬಳಗಾನೂರು, ಮುದಕಪ್ಪ ವಕೀಲ, ವೆಂಕಟೇಶ ರಾಠೋಡ್, ಹನಮಂತಪ್ಪ ಕಂದಗಲ್‌ ನಾರಾಯಣಪ್ಪನಾಯ್ಕ, ಹುಲ್ಲೇಶಸಾಹುಕಾರ, ಜಗನ್ನಾಥ ಕುಲಕರ್ಣಿ, ಪರಮೇಶ ಯಾದವ ಯಾದವ ಸೇರಿದಂತೆ ಇದ್ದರು.

Be the first to comment

Leave a Reply

Your email address will not be published.


*