ಗುಳೇದಗುಡ್ಡ ಕುಡಿಯುವ ನೀರಿಗೆ ಹಾಹಾಕಾರ: ನೀರು ಪೂರೈಸಲು ಆಗ್ರಹ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಗುಳೇದಗುಡ್ಡ ಕಳೆದ ನಾಲ್ಕು ದಿನಗಳಿಂದ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಸದ ಕಾರಣ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನೀರು ಪೂರೈಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

CHETAN KENDULI

ಬಳಕೆಗೆ ಮತ್ತು ಕುಡಿಯುವ ನೀರಿಗಾಗಿ ಕೊಡಗಳನ್ನು ತೆಗೆದುಕೊಂಡು ಸಾರ್ವಜನಿಕರು ನೀರು ಇರುವಲ್ಲಿ ತಿರುಗುವ ಪರಿಸ್ಥಿತಿ ಎದುರಾಗಿದೆ.ಆದಷ್ಟು ಬೇಗನೆ ಕುಡಿಯುವ ನೀರನ್ನು ಪೂರೈಸಬೇಕೆಂದು ಈರಣ್ಣ ಅಲದಿ, ವಿಠಲ ಬದಿಯವರು ಆಗ್ರಹಿಸಿದ್ದಾರೆ.

ಜಲಮೂಲಗಳು ದೂರ:
ಪಟ್ಟಣ ಮತ್ತು ಸಮೀಪದ ಜಲ ಮೂಲಗಳಾದ ಬಾವಿಗಳು, ಕೆರೆ ಕಟ್ಟೆಗಳು, ನದಿಗಳು, ಬೋ ರ್‌ವೆಲ್‌ಗಳು ಇರದ ಕಾರಣ ನೀರಿನ ಅಭಾವ ತಲೆದೋರಿದೆ. ಈ ಹಿಂದೆ ಆಸಂಗಿ ಬ್ಯಾರೇ ಜ್‌ನಿಂದ ನೀರನ್ನು ಪೂರೈಸಲಾಗುತ್ತಿತ್ತು.ಆಲಮಟ್ಟಿಯಿಂ ದ ನೀರು ಪೂರೈಸಲು ಆರಂ ಭಿಸಿದ್ದರಿಂದ ಅದನ್ನು ನಿರ್ಲ ಕ್ಷಿಸಲಾಗಿದೆ.ಆಸಂಗಿ ಬ್ಯಾರೇಜ್ ನಿಂದ ನೀರು ಪೂರೈಕೆ ವ್ಯವಸ್ಥೆ ಸರಿಯಾಗಿ ಇಟ್ಟುಕೊಂಡಿದ್ದರೆಇಂತಹ ಸಂದರ್ಭದಲ್ಲಿ ಅನುಕೂಲವಾಗುತ್ತಿತ್ತು.

ದುರಸ್ತಿಯಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕಗಳು:
ಪಟ್ಟಣದಲ್ಲಿ ಒಟ್ಟು ಆರು ಶುದ್ಧ ಕುಡಿಯುವ ನೀರಿನ ಘಟಕ ಗಳಿದ್ದು, ಅದರಲ್ಲಿ ಮೂರನ್ನು ಟೆಂಡರ್‌ ಮಾಡಿ ಖಾಸಗಿಯ ವರಿಗೆ ನಿರ್ವಹಣೆ, ನೀರಿನ ಮಾರಾಟದ ಜವಾಬ್ದಾರಿ ವಹಿ ಸಲಾಗಿದೆ. ಇನ್ನುಳಿದ ಪುರಸಭೆ ಎದುರಿಗೆ, ಮುಖ್ಯ ಬಸ್ ನಿಲ್ದಾಣದ ಹತ್ತಿರ ಸರ್ಕಾರಿ ಕಾಲೇಜಿಗೆ ಹೊಂದಿಕೊಂಡಂತೆ

ಸಾಲೇಶ್ವರ ದೇವಸ್ಥಾನದ ಹತ್ತಿರ ಇರುವ ಒಟ್ಟು ಮೂರು ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಅದಕ್ಕೆ ಸಂಬಂಧಿಸಿದ ತಾಂತ್ರಿಕ ಮೇಲ್ವಿಚಾರ, ಪುರಸ ಭೆಯ ಎಂಜಿನಿಯರಾ ದ ಯಲ್ಲಪ್ಪ ಜೋಗಿಯವರ ನ್ನು ಕೇಳಿದರೆ ನಾನು ಇತ್ತೀಚಿಗೆ ಜವಾಬ್ದಾರಿ ವಹಿಸಿಕೊಂಡಿದ್ದು, ಈ ಕುರಿತು ನನಗೆ ಮಾಹಿತಿ ಇಲ್ಲ. ಸಂಬಂಧ ಪಟ್ಟವರಿಂದಮಾಹಿತಿ ಪಡೆದು ತಿಳಿಸುತ್ತೇನೆಂದು ಹೇಳಿದರು.

ಕಳೆದ ನಾಲ್ಕು ದಿನಗಳಿಂದ ಪಟ್ಟಣಕ್ಕೆ ಆಲಮಟ್ಟಿ ಜಲಾ ಶಯದಿಂದ ಪೂರೈಕೆಯಾಗುವ ಕುಡಿಯುವ ನೀರಿನ ಜಾಕ್‌ವೆ ಲ್ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ದುರಸ್ತಿ ಕಾರ್ಯ ನಡೆದಿದೆ. ಎರಡು ದಿನಗಳಲ್ಲಿ ದುರಸ್ತಿ ರ್ಣಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ಪೂರೈಸಲಾಗುತ್ತದೆ.

Be the first to comment

Leave a Reply

Your email address will not be published.


*