ಕರ್ನಾಟಕ ಪ್ರೆಸ್ ಕ್ಲಬ್ ಭಟ್ಕಳ ತಾಲೂಕ ಘಟಕದಿಂದ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ್ ಲಕ್ಷ್ಮಿಶ ಅವರಿಗೆ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ

ವರದಿ:ಕುಮಾರ ನಾಯ್ಕ

ಭಟ್ಕಳ

ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಭಟ್ಕಳ ತಾಲೂಕ ಘಟಕದಿಂದ ಇಂದು ಭಟ್ಕಳದಲ್ಲಿ ಸಮಾಜ
ಸರಕಾರಿ ಆಸ್ಪತ್ರೆಯ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ ಲಕ್ಷ್ಮಿಶ ನಾಯ್ಕ ಅವರನ್ನು ಸನ್ಮಾನಿಸುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ ನಾಯ್ಕ ಅವರು ಮಾತನಾಡಿ ಡಾಕ್ಟರ್ ಲಕ್ಷ್ಮಿಶ ನಾಯ್ಕ ಅವರು ಕಳೆದ 6 ವರುಷಗಳಿಂದ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿ ಯಾವುದೇ ಪ್ರತಿಪಲಾಕ್ಷೇ ಬಯಸದೆ ಅತ್ಯಂತ ಪ್ರಾಮಾಣಿಕರಾಗಿ ಬಡ ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಪಾಲಿಗೆ ಹಗಲು ರಾತ್ರಿ ಅನ್ನದೆ ಇವರು ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಭಟ್ಕಳದಲ್ಲಿ ಅನೇಕ ಬಡ ಜೀವಗಳನ್ನು ಉಳಿಸುವುದರ ಮೂಲಕ ಸರಕಾರಿ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಪ್ರಾಮಾಣಿಕ ಸರ್ಕಾರಿ ವೈದ್ಯನ್ನು ಗುರುತಿಸಿ ಇಂದು ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಸಮಿತಿ ಮತ್ತು ಭಟ್ಕಳ ತಾಲೂಕ ಸಮಿತಿಯಿಂದ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಕುಮಟಾದ ಹೇಗೆಡೆಯಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಜಿಲ್ಲೆಯ ನೇರ ನಡೆ ನುಡಿಯ ಪ್ರಾಮಾಣಿಕ ಪತ್ರಕರ್ತ ವಿನಾಯಕ ಭಟ್ ಬ್ರಹಮ್ಮುರೂ ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಭಟ್ಕಳ ತಾಲೂಕ ಸಮಿತಿ ವತಿಯಿಂದ ಸಂತಾಪ ಸೂಚಿಸಲಾಯಿತು. ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ ಲಕ್ಷ್ಮಿಶ ಅವರಿಗೆ ಫಲ ಪುಷ್ಪ ಮತ್ತು ಸರಣಿಕೆ ನೀಡಿ ಶಾಲು ಹೋದಿಸಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಭಟ್ಕಳ ತಾಲೂಕ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಮತ್ತು ಭಟ್ಕಳ ತಾಲೂಕ ಅಧ್ಯಕ್ಷ ಜೆವೋತ್ತಮ್ ಪೈ ಅವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ ನಾಯ್ಕ ಮುಂಡಳ್ಳಿ ಭಾಗವಹಿಸಿ ಮಾತನಾಡಿ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರೆಸ ಕ್ಲಬ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕ ಸರಕಾರಿ ಸೇವೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಕಾರ್ಯವನ್ನು ಹೊಗಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಭಟ್ಕಳ ತಾಲೂಕ ಅಧ್ಯಕ್ಷ ಜೇವೋತ್ತಮ್ ಪೈ , ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಕ, ಅಂಬಿಗ ನ್ಯೂಸ್ ಭಟ್ಕಳ ತಾಲೂಕ ವರದಿಗಾರ ಅಂತೋನ ಜುಜೆ ಲೂಯಿಸ್ , ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ನಾಯ್ಕ ಮುಂಡಳಿ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*