ಯಾದಗಿರಿ ಸುದ್ದಿ :ಹುಣಸಗಿ ತಾಲೂಕಿನ ಗುಂಡಲಗೇರಿ ಗ್ರಾಮದಲ್ಲಿ ಹೊಲವೊಂದರಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಾಯಂಕಾಲ 5:30 ರ ಸುಮಾರಿಗೆ ಸಿಡಿಲು ಬಡಿದು ಅದೇ ಗ್ರಾಮದ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ.
ಮೃತ ಯುವತಿ ಗುಂಡಲಗೇರಿ ಗ್ರಾಮದ ಸತ್ಯಮ್ಮ ತಂ/ಪರಮಪ್ಪ ತಾಳ್ಗೇರಿ (25) ಎಂದು ತಿಳಿದು ಬಂದಿದೆ,
ಇನ್ನೊಬ್ಬ ಮಹಿಳೆ ಚಂದ್ರಮ್ಮ ಗಂ/ಭೀಮಪ್ಪ ತಾಳ್ಗೆರಿ (50) ಸ್ಥಿತಿ ಗಂಭೀರವಾಗಿದ್ದು ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆ ಹುಣಸಗಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Be the first to comment