“ಪರಿಸರ ರಕ್ಷಕ”  ಪ್ರಶಸ್ತಿ ಪ್ರದಾನ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ: ಪ್ರತಿಭಾ

ವರದಿ: ಚೇತನ ಕೆಂದೂಳಿ, ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಪಟ್ಟಣದಲ್ಲಿ ಅಂದಾಜು 62 ಕ್ಕೂ ಹೆಚ್ಚು ಉದ್ಯಾನವನಗಳಿವೆ ಎಂದು ಗುರುತಿಸಲಾಗಿದ್ದು, ಅವುಗಳನ್ನು ರಕ್ಷಿಸುವ ಹಾಗೂ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡುವುದಾಗಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹೇಳಿದರು. ಅವರು ಪಟ್ಟಣದ  ಹಸಿರು ತೋರಣ ಗೆಳೆಯರ  ಬಳಗದ ಆಶ್ರಯದಲ್ಲಿ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.

ಪಟ್ಟಣದಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳ ಜೊತೆ ಮಾತಾಡಿದ್ದೇನೆ. ಅದನ್ನು ಎಲ್ಲರೊಂದಿಗೆ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು. ಹಸಿರು ತೋರಣ ಬಳಗದ ಸಹಯೋಗದಲ್ಲಿ ಪರಿಸರ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಜೂನ್ ತಿಂಗಳಲ್ಲಿ ಗಿಡಗಳನ್ನು ನೆಟ್ಟರೆ ತಂಪಾದ ವಾತಾವರಣ ಗಿಡಗಳ ಬೆಳವಣಿಗೆ ಪೂರಕವಾಗಿರುವುದರಿಂದ ಉತ್ತಮ ಹಾಗೂ ಆರೋಗ್ಯಪೂರ್ಣವಾಗಿ ಗಿಡಗಳು ಬೆಳೆಯುತ್ತವೆ. ಪಟ್ಟಣದ ಕೆರೆ ತುಂಬಿದ್ದು, ಗಿಡಗಳಿಗೆ ಅಗತ್ಯವಾದ ನೀರನ್ನು ಅರಣ್ಯ ಇಲಾಖೆಯ ಟ್ಯಾಂಕರ್ ಮೂಲಕ ಪೂರೈಸಲು ಆದ್ಯತೆ ನೀಡುತ್ತೇನೆ. ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.


ಸಾಮಾಜಿಕ ಅರಣ್ಯ ಇಲಾಖೆಯ ತಾಲ್ಲೂಕು ಅಧಿಕಾರಿ ಎಸ್.ಜಿ.ಸಂಗಾಲಿಕ ಮಾತನಾಡಿ, ಗಿಡಗಳನ್ನು ನೆಡುವಿಕೆಯ ಕೆಲಸ ಅರಣ್ಯ ಇಲಾಖೆಯದ್ದು ಎಂದು ಜನ ಉದಾಸೀನ ಮಾಡದೇ, ಇಲಾಖೆಯ ಜೊತೆ ಕೈಜೋಡಿಸಬೇಕು. ಸಾಮಾಜಿಕ ಕಳಕಳಿ ಉಳ್ಳವರಿಂದಲೇ ಪರಿಸರ ಉಳಿಸಲು ಸಾಧ್ಯ. ಎಲ್ಲರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಸಿರು ಮಾಡಲು ಶ್ರಮಿಸಬೇಕು.ಹಸಿರು ತೋರಣ ಬಳಗ ಮಾಡುತ್ತಿರುವ ಕೆಲಸ ಬಹಳ ಪ್ರಶಂಸನೀಯವಾದುದು ಎಂದರು.
  ಪ್ರಾದೇಶಿಕ ಅರಣ್ಯ ಇಲಾಖೆಯ ತಾಲ್ಲೂಕು ಅಧಿಕಾರಿ ರಾಜೀವ ಬಿರಾದಾರ ಮಾತನಾಡಿ,  ಇರುವುದೊಂದೇ ಭೂಮಿ. ಅದನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಘ, ಸಂಸ್ಥೆಗಳು ನೀಡುವ ಪ್ರಶಸ್ತಿಗಳು ಕೆಲಸ ಮಾಡುವವರಿಗೆ ಮತ್ತಷ್ಟು ಖುಷಿಯಿಂದ, ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ. ತಾಲ್ಲೂಕಿನಾದ್ಯಂತ ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು ಹೆಚ್ಚು ಗಿಡಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು. ಸಭೆಯನ್ನುದ್ದೇಶಿಸಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಹಸಿರು ತೋರಣ ಬಳಗದ ಕಾರ್ಯದರ್ಶಿ ರವಿ ಗೂಳಿ ಮಾತನಾಡಿದರು. ಬಳಗದ ಅಧ್ಯಕ್ಷ ಬಿ.ಎಸ್.ಮೇಟಿ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ಕಾರ್ಯಕ್ರಮದಲ್ಲಿ 2022 ನೇ ಸಾಲಿನಲ್ಲಿ ಪರಿಸರ ಉಳಿಸುವ, ಬೆಳೆಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ ತಾಲ್ಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಅಮರಗೋಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ ಶಿವಲಿಂಗಪ್ಪ ರೂಢಗಿ, ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕರಾದ ನಿಂಗನಗೌಡ ಪಾಟೀಲ ಹಾಗೂ ಸಿದ್ದಪ್ಪ ಮಾದರ, ಪ್ರಾದೇಶಿಕ ಅರಣ್ಯ ಇಲಾಖೆಯ ಅರಣ್ಯ ರಕ್ಷಕರಾದ ಯಲ್ಲಪ್ಪ ಹಿರೇಕುರುಬರ ಹಾಗೂ ವಿಜಯಕುಮಾರ ಕಿತ್ತೂರ ಅವರಿಗೆ “ಪರಿಸರ ರಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಡಾ.ರಂಗನಾಥ ವೈದ್ಯ, ಬಸವರಾಜ ರೂಢಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಶಾಜಾದಬಿ ಹುಣಸಗಿ ಇದ್ದರು.  ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆಯರಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಸದಾಶಿವ ಮಾಗಿ, ಎಂ.ಜಿ.ವಿ.ಸಿ. ಸಂಸ್ಥೆಯ ಅಧ್ಯಕ್ಷ ಅಶೋಕ ತಡಸದ, ಅಹಲ್ಯಾದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ,

ಎಸ್.ಬಿ.ಕನ್ನೂರ, ಎಸ್.ಬಿ.ಬಂಗಾರಿ, ಶಿಕ್ಷಣಾಧಿಕಾರಿ ಉಮೇಶ ಧರಿಕಾರ, ಎಂ.ಎಂ.ಬೆಳಗಲ್ಲ, ಬಿ.ಎಸ್.ನವಲಿ, ವೈದ್ಯರ ಸಂಘದ ಅಧ್ಯಕ್ಷ ಡಾ.ವಿಜಯಕುಮಾರ ನಾಯಕ, ಚಂದ್ರಶೇಖರ ಇಟಗಿ, ಜಿ.ಆರ್.ಕಲಬುರ್ಗಿ, ಬಿ.ಎಂ.ರಾಂಪೂರ, ಬಸವರಾಜ ನಾಲತವಾಡ, ಶಶಿಧರ ಹಾಲ್ಯಾಳ, ಕಿರಣ ಕಡಿ, ಶರಣು ಹಿರೇಕುರುಬರ, ಎಲ್.ಎಂ.ಚಲವಾದಿ, ಡಾ.ಪಲ್ಲವಿ ನಾಗೂರ, ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ರಾಜಶೇಖರ ಕಲ್ಯಾಣಮಠ, ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಅಮರೇಶ ಗೂಳಿ, ಡಾ.ಉತ್ಕರ್ಷ ನಾಗೂರ, ರವಿ ತಡಸದ, ವಿಲಾಸ ದೇಶಪಾಂಡೆ, ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ,  ವೀರೇಶ ಹಂಪನಗೌಡ್ರ, ಪಿ.ಆರ್.ಕೂಡಗಿ, ಎನ್.ಎಸ್.ಹಿರೇಮಠ, ಡಾ.ವೀರೇಶ ಇಟಗಿ, ಡಾ.ವೀರೇಶ ಪಾಟೀಲ,  ಡಾ.ಎ.ಎಂ.ಮುಲ್ಲಾ, ಡಾ.ಶಶಿಧರ ಜುಲ್ಪೆ, ಶಿವಲಿಂಗಪ್ಪ ಗಡೇದ,  ಸೇರಿದಂತೆ ಅರಣ್ಯ ಇಲಾಖೆ, ಹಸಿರು ತೋರಣ ಬಳಗದ ಸದಸ್ಯರು ಇದ್ದರು. ಸವಿತಾ ಮುಪ್ಪಯ್ಯನಮಠ ಪ್ರಾರ್ಥಿಸಿದರು. ನಾಗಭೂಷಣ ನಾವದಗಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ವೀರೇಶ ಢವಳಗಿ ಸನ್ಮಾನಿತರನ್ನು ಪರಿಚಯಿಸಿದರು. ಬಿ.ಎಚ್.ಬಳಬಟ್ಟಿ ವಂದಿಸಿದರು.

CHETAN KENDULI

Be the first to comment

Leave a Reply

Your email address will not be published.


*