ರಾಜ್ಯ ಸುದ್ದಿಗಳು
ಭಟ್ಕಳ
ಕಳೆದ 3 ದಿನಗಳ ಹಿಂದೆ ನಡೆದ ಭಾರಿಮಳೆಗೆ ನಗರ ಪ್ರದೇಶ ಸೇರಿದಂತೆ ಭಟ್ಕಳದ ಹಲವೆಡೆ ನೀರಿನಿಂದ ಆವೃತ್ತವಾಗಿತ್ತು. ಗುಡ್ಡ ಕುಸಿತದಿಂದ ಒಂದೇ ಮನೆಯಲ್ಲಿ ರಾತ್ರೆ ಹೊತ್ತು ಮಲಗಿದ್ದ 4 ಜನ ಜೀವಂತ ಸಮಾಧಿಯಾಗಿದ್ದರು ಈ ಬಗ್ಗೆ ಮುಖ್ಯಮಂತ್ರಿಗಳು ಸ್ಥಳಕ್ಕೆ ತೆರಳಿ ಮೃತರ ಸಂಭಂದಿಗಳಿಗೆ ಸಾಂತ್ವನ ಹೇಳಿ ತಲಾ 5 ಲಕ್ಷದಂತೆ 20ಲಕ್ಷರೂ ಪರಿಹಾರ ನೀಡಿದ್ದರು. ತಾಲೂಕಿನಾದ್ಯಂತ ಆದ ನಷ್ಟದ ಪರಿಹಾರ ನೀಡುವ ಕುರಿತು ಇಂದು ತಾಲೂಕಾ ಆಡಳಿತ ಸೌಧದಲ್ಲಿ ಏಡಿಸಿ ರಾಜು ಮೊಗವೀರ ಪತ್ರಿಕಾಗೊಷ್ಠಿ ನಡೆಸಿದರು ಈ ಕುರಿತು ಮಾತನಾಡಿದ ಎಡಿಸಿ ರಾಜು ಮೊಗವೀರ ಭಟ್ಕಳದಲ್ಲಿ ನಡೆದ ಭಾರಿ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿ ಯಾಗಿದೆ ಜನ ಜೀವನ ಅಸ್ತವ್ಯಸ್ಥವಾಗಿದೆ . ನೆರೆ ಪರಿಹಾರದ ಸಮಿಕ್ಷೆಗಳೂ ಸರಿಯಾಘಿ ನಡೆಯುತ್ತಿಲ್ಲ ವೆಂದು ಸಾರ್ವಜನಿಕರ ದೂರುಗಳು ಬಂದಿದ್ದು ಅದರ ಆಧಾರದ ಮೇಲೆ ಸರ್ವೆ ನಡೆಸುವ ತಂಡಕ್ಕೆ ಹಾನಿಗೊಳಗಾದ ಪ್ರದೇಶ, ಮನೆ ಮತ್ತು ವಾಣಿಜ್ಯ ಮಳಿಗೆಗಳ ಬಗ್ಗೆ ಸರಿಯಾದ ದಾಖಲಾತಿಗಳು ಇಲ್ಲವೆಂದು ಅದನ್ನು ತಿರಸ್ಕರಸಿದೆ ಅಂತಹ ಮನೆ, ಹಾನಿಗೊಳಗಾದ ಪ್ರದೇಶಗಳ ಬಗ್ಗೆ ವರದಿಯನ್ನು ಸಂಗ್ರಹಿಸಬೇಕೆಂದು ಆದೇಶಿಸಿರುವ ಬಗ್ಗೆ ತಿಳಿಸಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ ಅಜಮಾಸು 2000 ದಿಂದ 2200 ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಸದ್ಯದ ಮಾಹಿತಿ ಸಂಗ್ರಹವಾಗಿದ್ದು ಪ್ರಮಾಣ ಇನ್ನು ಹೆಚ್ಚುಗೊಳ್ಳಬಹುದು. ಈ ಬಗ್ಗೆ ಜಿಲ್ಲಾಡಳಿತ ತಾಲುಕಾ ಆಡಳಿತದ ಸಹಾಯದೊಂದಿಗೆ ತಂಡಗಳನ್ನು ರಚಿಸಿ ಅಂಕಿಅಂಶಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.ಇಂದು ಸಂಜೆಯ ಒಳಗಾಗಿ ಮಾಹಿತಿ ನೀಡುವಂತೆ ಸರ್ವೆ ಮಾಡುತ್ತಿರುವ ತಂಡದ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನಿಡಲಾಗಿದ್ದು. ಮಾಹಿತಿ ಸಂಪೂರ್ಣ ಬಂದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಸರ್ಕಾರದ ಆದೇಶದ ಪ್ರಕಾರ ಮನೆಗಳಿಗೆ ನೀರು ನುಗ್ಗಿದರೆ ಅಥವಾ ಯಾವದೇ ರೀತಿ ಸಮಸ್ಯೆಗಳು ಸಂಭವಿಸಿದಲ್ಲಿ ತಕ್ಷಣಕ್ಕೆ 10000 ರೂಗಳನ್ನು ಬಿಡುಗಡೆಗೊಳಿಸಿ ಹಾನಿಯಾದ ಪ್ರಮಾಣಗಳ ಪರಿಶಿಲನೆ ನಂತರ ಉಳಿದ ಹಣವನ್ನು ಬಿಡುಗಡೆ ಗೊಳಿಸಲಾಗುವುದು . ದಿನಬಳಕೆಯ ದಿನಸಿ ವಸ್ತುಗಳು, ಆಹಾರ ಪದಾರ್ಥ ಅಥವಾ ಬಟ್ಟೆಬರೆಗಳು ನಾಶವಾದರೆ 10000 ರೂಗಳನ್ನು ನೀಡಲಾಗುವುದು. ಯಾವದೇ ರಿತಿಯ ಗೃಹ ಬಳಕೆಯ ವಸ್ತುಗಳಾದ ಟಿವಿ ಪ್ರೀಡ್ಜ್ ವಾಶೀಂಗ್ ಮಶಿನ್‌ಗೆ ಯಾವುದೇ ರಿತಿ ಪರಿಹಾರ ಧನ ನೀಡಲು ಸರ್ಕಾರದ ನಿರ್ದೇಶನಗಳಲ್ಲಿ ಅವಕಾಶಗಳಿಲ್ಲ ಎಂದರು.
ಸರ್ಕಾರದ ಪ್ರಸ್ತುತ ಇರುವ ನಿರ್ದೇಶನದಂತೆ ಯಾವುದೇ ರೀತಿ ವಾಣಿಜ್ಯ ಮಳಿಗೆಗಳಿಗೆ ಪರಿಹಾರ ನೀಡುವ ಬಗ್ಗೆ ಅವಕಾಶಗಳಿಲ್ಲ ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಾನಿಯಾದ ಬಗ್ಗೆ ವಿವರ ಕಳಿಸಿಕೊಡುವಂತೆ ನಿರ್ದೇಶನ ನಿಡಿದ್ದು ಈ ಸಂಭಂದ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಣಣ ಪಂಚಾಯತ್ ನ ಮುಖ್ಯಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ್ ನ ಪಿಡಿಒಗಳಿಗೆ ಮಾಹಿತಿ ರವಾನಿಸಲಾಗಿತ್ತು . ಹತ್ತು ಸಾವಿರದಿಂದ ಹತ್ತು ಲಕ್ಷದವರೆಗೆ ಹಾನಿಯಾದ ಬಗ್ಗೆ ಮಾಹಿತಿ ಬಂದಿದ್ದು ಅದನ್ನು ಆಧರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಮಿನುಗಾರರಿಗೆ ದೋಣಿ ಮತ್ತು ಬಲೆ ಹಾನಿಯಾದ ಸಂಧರ್ಭದಲ್ಲಿ ಎನ್ ಡಿ ಆರಎಫ್‌ನ ಅಡಿಯಲ್ಲಿ ಅವಕಾಶವಿದ್ದು ಅದರ ಪ್ರಮಾಣ ದೋಣಿ ಸಂಪೂರ್ಣ ಹಾನಿಗೆ 9000 ರೂಗಳಷ್ಟಿದ್ದು ಭಾಗಶ: ಹಾನಿಗೆ 4500 ಹಾಗೂ ಬಲೆ ಹಾನಿಗೆ 2600 ರಷ್ಟುಪರಿಹಾರ ದೊರಕಬಹುದು ಅದೇ ಮಿನಗಾರಿಕಾ ಇಲಾಖೆಯಿಂದ ಸುಮಾರು 1 ಲಕ್ಷದಷ್ಟು ಪರಿಹಾರ ನೀಡಲು ಅವಕಾಶವಿದೆ. ಸದ್ಯ ಜಿಲ್ಲಾಡಳಿತ ತಾತ್ಕಾಲಿಕವಾಗಿ ಪರಿಹಾರ ಧನ ಬಿಡುಗಡೆಗೊಳಿಸಿದರು ಮಿನುಗಾರಿಕಾ ಇಲಾಖೆಯಿಂದ ಬಿಡುಗಡೆಯಾಗುವ ಪರಿಹಾರಧನಕ್ಕೆ ಈ ಪರಿಹಾರ ಧನವನ್ನು ಕಳೆದು ಬಾಕಿ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡಲಾಗುದು ಎಂದರು. ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತರಾದ ಮಮತಾದೇವಿ, ತಹಶಿಲ್ದಾರ ಸುಮಂತ ಬಿಇ ಉಪಸ್ಥಿತರಿದ್ದರು,
Be the first to comment