ರಾಜ್ಯ ಸುದ್ದಿಗಳು
ಬೈಂದೂರು
*ಉಪ್ಪುಂದ ಮೀನುಗಾರರಿಂದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿ ಭಟನೆ**ಮಲತಾಯಿ ಧೋರಣೆ ತೋರಿದ ಸರಕಾರದ ವಿರುದ್ಧ ಮೀನುಗಾರರ ಅಕ್ರೋಶ*ಶಿರೂರಿನಲ್ಲಿ ದೋಣಿ ದುರಂತ ಸ್ಥಳಕ್ಕೆ ತಹಶೀಲ್ದಾರ ರನ್ನು ಹೊರತು ಪಡಿಸಿ ಸಚಿವರು ಮತ್ತು ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಇಂದು ಬೈಂದೂರು ತಾಲೂಕು ಕಚೇರಿಯಲ್ಲಿ ಮೀನುಗಾರ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.ಮೀನುಗಾರರ ಮಾಜಿ ಅಧ್ಯಕ್ಷರಾದ ಮದನ್ ಕುಮಾರ್ ಮಾತನಾಡಿ ಶಿರೂರಿನ ಅಳ್ವೆ ಗೆದ್ದೆಯಲ್ಲಿ ಲಂಗರ್ ಹಾಕಿರುವ 50ಕ್ಕೆ ಹೆಚ್ಚು ದೋಣಿಗಳು ಸಮುದ್ರ ಪಾಲಾಗಿ ಹಲವು ದೋಣಿಗಳು ಹಾನಿಗಳಾಗಿದ್ದು ಸ್ಥಳಕ್ಕೆ ಯಾವುದೇ ಸಚಿವರಾಗಲಿ ಶಾಸಕ ಶಾಸಕರಾಗಲಿ ಇತ್ತ ಕಡೆ ಗಮನಹರಿಸದೆ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ,
ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಪಕ್ಕದ ಜಿಲ್ಲೆಗೆ ಬಂದಿದ್ದು, ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಪಕ್ಕದ ಊರಾದ ಶಿರೂರಿಗೆ ಬಾರದೆ ಇರುವುದು ಹಾಗೂ ಇತ್ತಕಡೆ ಗಮನಹರಿಸದೆ ಇರುದರಿಂದ ಸರ್ಕಾರ ಇಂದು ಮೀನುಗಾರರನ್ನು ಕಡೆಗಣೆಸುತ್ತಿದೆ ಎಂದು ಆಕ್ರೋಶಗೊಂಡ ಮೀನುಗಾರರು ನಮಗೆ ಸರಿಯಾದ ಬಂದರು ವ್ಯವಸ್ಥೆ ಇಲ್ಲ ನಮ್ಮನ್ನು ರಸ್ತೆಗೆ ಇಳಿಸಬೇಡಿ, ನಮ್ಮ ತಾಳ್ಮೆಗೆ ಒಂದು ಮೀತಿಇದೆ,ಇನ್ನೂ ಹತ್ತು ದಿನದ ಒಳಗೆ ಇನ್ನೊಂದು ಪ್ರತಿಭಟನೆಗೆ ಅವಕಾಶ ನಿಡಬೇಡಿ ಎಂಬ ಖಡಕ್ ಎಚ್ಚರಿಕೆ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ
ಬೈಂದೂರು ತಾಲೂಕು ತಹಸಿಲ್ದಾರ ಕೀರಣ್ ಗೋರಯ್ಯರವರ ಮೂಲಕ ಮನವಿ ನೀಡಿದರು.ಪ್ರತಿಭಟನೆಯಲ್ಲಿ ರಾಣಿಬಲೆ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡ ದೋಣಿ ಮಾಜಿ ಅಧ್ಯಕ್ಷರಾದ ಮದನ್ ಕುಮಾರ್, ಜಗದೀಶ್ ಕುಮಾರ್, ಜನಸೇವಕ ಸುಬ್ರಹ್ಮಣ್ಯ ,ಪೊಲೀಸ್ ಅಧಿಕಾರಿಗಳು ಮೀನುಗಾರ ಬಾಂದವರು ಪಾಲ್ಗೊಂಡಿದ್ದರು.
Be the first to comment