ಸೇದು ಬಾವಿ ತೆರವುಗೊಳಿಸಿ ಕಟ್ಟೆ ನಿರ್ಮಾಣ ಮಾಡುವಂತೆ ಒತ್ತಾಯ: ಜೇವರ್ಗಿ: ಪಟ್ಟಣದ ವಾರ್ಡ್ ನಂಬರ್ ೦೨ರ ಹರಕರ ಗಲ್ಲಿಯಲ್ಲಿ ಮೊದಲ ಒಂದು ಸೇದು ಬಾವಿ ಇದ್ದು ಅಲ್ಲಿ ಕಸ ಕಡ್ಡಿ ಕೊಳಚೆ ನೀರು ಸಂಗ್ರವಾಗುತ್ತದೆ ಅದನ್ನು ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಕೊಡುವ ಕಟ್ಟೆ ನಿರ್ಮಿಸಿ ಕೊಡುವಂತೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ನೌಕರರ ಸಂಘ ಜೇವರ್ಗಿ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಬಾವಿಯ ನೀರು ಈ ಸದ್ಯದ ಪರಿಸ್ಥಿತಿಯಲ್ಲಿ ಯಾರು ಉಪಯೋಗ ಮಾಡುತ್ತಿಲ್ಲ ಅದಕ್ಕಾಗಿ ಕೊಳಚೆ ಪ್ರದೇಶದಂತಾಗಿದೆ ಆದಕಾರಣ ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕಟ್ಟೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಬಸವರಾಜ್ ಸೇಡಂ
ಭೀಮಶಂಕರ್ ತಳವಾರ್ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೀಮಶಂಕರ್ ಬಸವಪಟ್ಟಣ, ಮರೆಪ್ಪ ಕೂಳಕೂರ, ಕರಣಪ್ಪ ಎಸ್ ಶಾಬಾದಿ, ಚಂದ್ರಪ್ಪ, ರಾಜು ತಳವಾರ್, ಸಾಯಬಣ್ಣ, ಸಿದ್ದು ತಳವಾರ್, ಸಾಧು, ರಾಜು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment