ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಸರ್ಕಾರಿ ಪ್ರೌಢ ಶಾಲೆ,ಗ್ರಾಮ ಪಂಚಾಯಿತಿ ಸುನಗ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ, ವಿದ್ಯಾನಿಕೇತನ್ ಸಂಸ್ಥೆ ಮತ್ತು ರೀಚ್ ಸಂಸ್ಥೆಯ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಮತ್ತು ಲಿಂಗ ಸಮಾನತೆ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಯುತ ಎಸ್ ಬಿ ಬಿರಾದರ್ ರವರು ಅರಿವಿನ ವಾಹನವನ್ನು ರಿಬ್ಬನ್ ಕಟ್ ಮಾಡುವುದರ ಮುಖಾಂತರ ಚಾಲನೆಯನ್ನು ನೀಡಿದರು.ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ನೀಲಾ ಜಲಗೇರಿ ಅವರು ಮತ್ತು ಆರೋಗ್ಯ ಇಲಾಖೆ ಶ್ರೀಮತಿ ರೇಣುಕಾ ಬಿರಕಬ್ಬಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಮತ್ತು ಇಮೇಜ್ ನೆಷ್ಟ್ ಆಂದೋಲನದ ನಾಯಕರಾದ ಸುಧಾ ಮತ್ತು ದೇವಕಿರವರಿಂದ ಹಸಿರು ನಿಶಾನೆ ಮೂಲಕ ಜಾಥಾ ಚಾಲನೆ ನೀಡಿದರು.
ಬಾಲ್ಯವಿವಾಹ ನಿಷೇಧ ಮತ್ತು ಲಿಂಗ ಸಮಾನತೆ ಕುರಿತು ಜಾಗೃತಿ ಜಾಥಾ ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಬಾಲ್ಯವಿವಾಹ ನಿಷೇಧ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳ ಸಹಾಯವಾಣಿ ೧೦೯೮, ಬಗ್ಗೆ ಮಕ್ಕಳು ಘೋಷಣೆ ಕೂಗುವುದರ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಮಕ್ಕಳು ಬಾಲ್ಯವಿವಾಹ ನಿಷೇಧ ಪೋಸ್ಟರ್ ಹಚ್ಚುವುದರ ಮೂಲಕ ಅರಿವು ಮೂಡಿಸುವ ಮೂಲಕ ಜಾಥಾ ಮತ್ತು ಬಾಲ್ಯ ವಿವಾಹ ನಿಷೇಧ ಮತ್ತು ಲಿಂಗ ಸಮಾನತೆಯ ಕುರಿತು ವಾಹನದಲ್ಲಿ ಜಾಗೃತಿ ಹಾಡುಗಳ ಮೂಲಕ ಅರಿವು ಮಾಡಲಾಯಿತು. ಜಾಥಾದಲ್ಲಿ ಪ್ರೌಢಶಾಲೆಯ ೩೬೦ಕ್ಕೂ ಹೆಚ್ಚು ಮಕ್ಕಳು, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾನೀಕೆಥನ್, ರೀಚ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಮಕ್ಕಳೊಂದಿಗೆ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
Be the first to comment