ಪಟ್ಟಣ ಪಂಚಾಯತ್ ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಗ ಶಿಬಿರ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಹೊನ್ನಾವರ

ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ (ನಗರ) ಯನ್ನು ನಡೆಸುತ್ತಿದ್ದು, ಮ್ಯಾನ್ಯುಯಲ್
ಸ್ಕ್ಯಾವೆಂಜರ್‌ಗಳ ಕುರಿತು ವ್ಯಾಖ್ಯಾನಿಸಿರುವಂತೆ, ಪಟ್ಟಣ ಪಂಚಾಯತ ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಪ್ರಚಾರಪಡಿಸಿ ಪಟ್ಟಣ ಪಂಚಾಯತ ಸಭಾಭವನದಲ್ಲಿ ಗುರುವಾರ ಪೂರ್ವಾಹ್ನ ೯.೦೦ ರಿಂದ ಸಾಯಂಕಾಲ ೫.೩೦ ರವರೆಗೆ ಮ್ಯಾನ್ಯುಯಲ್ ಸ್ಕ್ಯಾವೆಂಜಿOಗ್ ಶಿಬಿರವನ್ನು ಏರ್ಪಡಿಸಲಾಗಿತ್ತು.ಶಿಬಿರಕ್ಕೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರು ಆದ ಹೆಚ್.ಕೆ. ಕೃಷ್ಣಮೂರ್ತಿ ಹಾಗೂ ಜಿಲ್ಲಾ ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಅಭಿಯಂತರಾರ ವಿವೇಕ ತಡಲ್ಲೂರು . ಪರಿಸರ ಅಭಿಯಂತರರಾದ ಶುಭಂ ರವರುಗಳ ತಂಡ ಭೇಟಿ ನೀಡಿ ಶಿಬಿರದ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ಹಾಗೂ ಶಿಬಿರದ ಮಹತ್ವದ ಬಗ್ಗೆ ಹಾಗೂ ವರದಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಕಂಡುಬAದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.

CHETAN KENDULI

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ ನಾಗರಾಜ ನಾಯ್ಕಡ g, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಅಜೇಯ ಭಂಡಾರಕರ್, ಪಟ್ಟಣ ಪಂಚಾಯತ ಮಂಕಿ ಸಹಾಯಕ ಅಭಿಯಂತರರು ಹಾಗೂ ಕ್ಯಾಂಪ್ ಅಧಿಕಾರಿಗಳು ಆದ ಸದಾನಂದ ಸಾಳೆಹಿತ್ತಲ , ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀವಾಸ ಗಣಪ ಹಳ್ಳೇರ , ಬಿಲ್ ಕಲೆಕ್ಟರ್ ವಿಷ್ಣು ಹನ್ನಂತ ನಾಯ್ಕ, ಮಂಜುನಾಥ ದೇವಿದಾಸ ನಾಯ್ಕ, ಗಣೇಶ ಬಾಲಚಂದ್ರ ನಾಯ್ಕ, ಮಂಜುನಾಥ ನಾರಾಯಣ ನಾಯ್ಕ ಹಾಗೂ ಜನಾರ್ಧನ ನಾರಾಯಣ ನಾಯ್ಕ ಮತ್ತು ರಾಜು ನಾಯ್ಕ ಮಂಕಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*