ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಕಾಯಿದೆ ತಿದ್ದುಪಡಿ ವಿರೋಧಿಸಿ ಬಾಗಲಕೋಟೆ ನಗರದ ಎಬಿವಿಪಿ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಹೋರಾಟ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಕಾಯಿದೆ ತಿದ್ದುಪಡಿ ವಿರೋಧಿಸಿ ಬಾಗಲಕೋಟೆ ನಗರದ ಎಬಿವಿಪಿ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡಲಾಯಿತು.

ರಾಜ್ಯದ ಏಕೈಕ ಹಾಗೂ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯವಾದ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಿಂದ ಬಂದು ವೈದ್ಯಕೀಯ ಶಿಕ್ಷಣ ಪಡೆಯಲು ವಿವಿಯ ಮೇಲೆ ಅವಲಂಬಿತರಾಗಿದ್ದಾರೆ. ವಿವಿಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ಹಣಕಾಸಿನ ವಿಷಯಗಳ ಬಗ್ಗೆ ಈಗಿರುವ ರಚನೆಯಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಅಗತ್ಯ ತೀರ್ಮಾನ ತೆಗೆದುಕೊಳ್ಳುವ ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ರಚನೆ ರಚನೆಯು ಈ ವರೆಗೆ ಸರಿಯಾಗಿ ನಡೆದು ಬಂದಿದೆ.

ಪ್ರಸ್ತುತ ಕರ್ನಾಟಕ ಸರಕಾರವು ವಿವಿಯ ಹಣಕಾಸಿನ ವಿಷಯಗಳನ್ನು ಇನ್ನು ಮುಂದೆ ಸರ್ಕಾರದ ಅಧೀನದಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಈಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.

ವಿಶ್ವವಿದ್ಯಾಲಯದ ಫಂಡ್ ನ ಉಪಯೋಗಕ್ಕೆ ವಿಶ್ವವಿದ್ಯಾಲಯದ ಒಪ್ಪಿಗೆ ಇಲ್ಲದೆ ಸರಕಾರವೇ ಏಕಪಕ್ಷೀಯವಾಗಿ ಫಂಡ್ ಖರ್ಚು ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿವಿಯ ಹಿತದೃಷ್ಟಿಯಿಂದ ಸಮಂಜಸವಲ್ಲ. ಯೂನಿವರ್ಸಿಟಿಯ ಫಂಡ್ ಕುರಿತು ಎಲ್ಲಾ ನಿರ್ಣಯವನ್ನು ಯುನಿವರ್ಸಿಟಿಯ ಆಡಳಿತ ಮಂಡಳಿಗೆ ಬಿಡುವುದೇ ಸೂಕ್ತ. ಒಂದು ವೇಳೆ ರಾಜ್ಯ ಸರ್ಕಾರ ಯುನಿವರ್ಸಿಟಿಯ ಫಂಡ್ ನಿರ್ವಹಣೆ ಮಾಡುವ ಅವಕಾಶ ಪಡೆದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವ ಸಂದರ್ಭವಿರುತ್ತದೆ. ಈ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಯುನಿವರ್ಸಿಟಿಯ ಫಂಡ್ ಕುರಿತು ಕಾನೂನು ತಿದ್ದುಪಡಿ ಮಾಡಬಾರದು.

ಶಿಕ್ಷಣ ಸಂಸ್ಥೆಗಳ ಒಟ್ಟು ಹಣಕಾಸಿನ ವಿಚಾರಗಳು ಸರಕಾರದ ಅಧೀನಕ್ಕೆ ಬಂದರೆ ವಿವಿಯ ಹಣವು ಸರಿಯಾಗಿ ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಉಪಯೋಗವಾಗದೆ ಸರ್ಕಾರಗಳ ಹಿತಾಸಕ್ತಿಯ ಆಧಾರದ ಮೇಲೆ ನಡೆಯುತ್ತದೆ ಎಂಬ ಆತಂಕ ಶಿಕ್ಷಣ ತಜ್ಞರದ್ದು. ಅದರಲ್ಲೂ ಅತಿ ಹೆಚ್ಚು ಹಣಕಾಸಿನ ಠೇವಣಿ ಹೊಂದಿರುವ ವಿವಿಯಲ್ಲಿ ಭ್ರಷ್ಟಾಚಾರ ರಹಿತವಾದ ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯಲ್ಲಿ ಹಣಕಾಸಿನ ನಿರ್ವಹಣೆ ಅವಶ್ಯಕತೆಯಿದ್ದು ಮತ್ತು ಸರಕಾರಗಳ ಅಧೀನದಲ್ಲಿ ಈ ಹಣಕಾಸಿನ ನಿರ್ವಹಣೆ ಬರದೇ ಸ್ವಾಯತ್ತತೆ ದೃಷ್ಟಿಯಿಂದ ಸರ್ಕಾರ ತನ್ನ ಪ್ರಸ್ತಾವನೆಯನ್ನು ಹಿಂಪಡೆಯಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ಎಬಿವಿಪಿ ಕರ್ನಾಟಕ ರಾಜ್ಯ ಹಾಸ್ಟೆಲ್ ಪ್ರಮುಖ ಪ್ರಕಾಶ್ ಪೂಜಾರ್, ಜಿಲ್ಲಾ ಸಹ ಸಂಚಾಲಕ ಉನ್ನತ ಬೇವಿನಕಟ್ಟಿ, ನಗರ ಸಹ ಕಾರ್ಯದರ್ಶಿ ನಿಖಿಲ್ ಹೆಬ್ಬಾಳ್, ಶ್ರೇಯಸ್ ಶೆಟ್ಟಿ ಹಾಗೂ ಕಾರ್ಯಕರ್ತ ಧೀರಜ್ ವರ್ಣೇಕರ್, ಅಭಿಷೇಕ್ ಗೌಡರ್, ಸ್ವಸ್ತಿಕ್ ಶೆಟ್ಟಿ, ಹರ್ಷ ಚಂಡಕ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*