ನೊಬೆಲ್ ವರ್ಲ್ಡ್ ರೆಕಾರ್ಡ್ ಅಟೆಂಪ್ಟ್ ಕಾರ್ಯಕ್ರಮ ದೇವನಹಳ್ಳಿಯಲ್ಲಿ ಆಯೋಜನೆ- ಕರಾಟೆ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪಟ್ಟಣದ ಗುರುಭವನದಲ್ಲಿ ಭಾರತೀಯ ರಿಯಾಲಿಟಿ ಇಂಟರ್ ನ್ಯಾಷನಲ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ನೊಬೆಲ್ ವರ್ಲ್ಡ್ ರೆಕಾರ್ಡ್ ಅಟೆಂಪ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ಕಿರಿಯ ಮತ್ತು ಹಿರಿಯ ಕರಾಟೆ ಪಟುಗಳು ಭಾಗಿಯಾಗಿದ್ದರು. ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಿದರು. ಇನ್ನೂ ಕಾರ್ಯಕ್ರಮದ ನೇತೃತ್ವವನ್ನು ನ್ಯಾಷನಲ್ ಸರ್ಟಿಫೈಡ್ ಚೀಫ್ ಎಲ್.ಆರ್.ಪೃತ್ವಿರಾಜ್ ಮತ್ತು ಜಂಟಿ ಕಾರ್ಯದರ್ಶಿ ಮುರುಳಿ ವಹಿಸಿಕೊಂಡಿದ್ದರು. ದಿವಾಂಗತ ಡಾ.ಎನ್.ಮಾಸ್ಟರ್ ಅವರ ಭಾವಚಿತ್ರಕ್ಕೆ ಗಣ್ಯರಿಂದ ಗೌರವ ಸಮರ್ಪಿಸಲಾಯಿತು. ಪಾಲ್ಗೋಂಡ ಕರಾಟೆ ಕ್ರಿಡಾಪಟುಗಳಿಗೆ ಅರ್ಹತಾ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ವೇಳೆಯಲ್ಲಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅರ್ಹತಾ ಪತ್ರವನ್ನು ನೀಡುವ ಮುನ್ನಾ ಕರಾಟೆ ಕ್ರಿಡಾಪಟುಗಳಿಂದ ಕರಾಟೆಯ ಕೆಲ ತಂತ್ರಗಳನ್ನು ಪ್ರದರ್ಶಿಸಲಾಯಿತು.

CHETAN KENDULI

ಜೀನಿಯಸ್ ರೆಕಾರ್ಡ್ ಹೋಲ್ಡರ್ ಡಾ.ಎ.ಪಿ.ಕರಾಟೆ ಶ್ರೀನಾಥ್ ಮಾತನಾಡಿ, ಮಕ್ಕಳಿಗೆ ಮತ್ತು ಪೋಷಕರಿಗೆ ಕರಾಟೆ ಮತ್ತು ಕ್ರೀಡೆಯ ಬಗ್ಗೆ ಕಿವಿ ಮಾತು ಹೇಳಿದರು.
ವಕೀಲ ಡಿ.ಎನ್.ನಾಗರಾಜು ಮಾತನಾಡಿ, ಮಕ್ಕಳು ಸದೃಢ ಮತ್ತು ಆರೋಗ್ಯವಾಗಿರಲು ತಮ್ಮನ್ನು ಪರಿಚಯಿಸಿಕೊಂಡು ಪ್ರೇರಿಪಿತ ನುಡಿಗಳನ್ನು ನುಡಿದರು.
ಈ ವೇಳೆಯಲ್ಲಿ ಭಾರತೀಯ ರಿಯಾಲಿಟಿ ಇಂಟರ್ ನ್ಯಾಷನಲ್ ಅಕಾಡೆಮಿಯ ಡಿಪ್ಯೂಟಿ ಚೇರ್‌ಮನ್ ಬಾಬುಸಾಬ್, ಸ್ಥಳೀಯರಾದ ಮಾನಸ ಆಸ್ಪತ್ರೆಯ ವೈದ್ಯ ಡಾ.ನರಸಾರೆಡ್ಡಿ, ಸಂಜಯ್, ಮಿಥುನ್, ಹಲವಾರು ಇದ್ದರು.

Be the first to comment

Leave a Reply

Your email address will not be published.


*