ಕರ್ನಾಟಕ ಚಾಲಕರ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಘಟಕ ಉದ್ಘಾಟನೆ….! ಚಾಲಕರಿಗೆ ವಾಹನ ಚಾಲನೆ ಮಾತ್ರವಲ್ಲದೇ ಅನೇಕ ಜವಾಬ್ದಾರಿಗಳಿವೆ: ಪಿಣ್ಯ ಪಿಎಸ್ಐ ಸಿದ್ದು ಹೂಗಾರ

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಯಾವ ಚಾಲಕರಿಗೆ ಡಿ.ಎಲ್. ಎಲ್ಲವೊ ಅಂತಹ ಚಾಲಕರ ಪಟ್ಟಿ ಮಾಡಿ ಕೊಟ್ಟರೆ ವಿಜಯಪುರದಿಂದ ಆರ್.ಟಿ.ಓ. ಅಧಿಕಾರಿಗಳಿಗೆ ತಿಳಿಸಿ ಒಂದು ದಿನಾಂಕವನ್ನು ನಿಗದಿ ಮಾಡಿ ಚಾಲಕರಿಗೆ ಡಿ.ಎಲ್. ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗುವುದು.
-ಎಂ.ಬಿ.ಬಿರಾದಾರ, ಪಿಎಸ್‌ಐ, ಮುದ್ದೇಬಿಹಾಳ.

ಚಾಲಕರೆಂದರೆ ಕೇವಲ ವಾಹನ ಚಲಾವಣೆ ಮಾಡುವುದಷ್ಟೇ ಅಲ್ಲಾ. ಹಲವು ಜೀವಿಗಳ ರಕ್ಷಣೆಯೂ ಪ್ರತಿಯೊಬ್ಬ ಚಾಲಕರ ಮೇಲಿರುತ್ತದೆ. ಇಂತಹ ಚಾಲಕರನ್ನು ಇಗ್ಗೂಡಿಸುವ ಮೂಲಕ ಕರ್ನಾಟಕ ಚಾಲಕರ ಒಕ್ಕೂಟ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಬೆಂಗಳೂರಿನ ಪಿಣ್ಯ ಪೊಲೀಸ ಠಾಣೆಯ ಪಿಎಸ್‌ಐ ಸಿದ್ದು ಹೂಗಾರ ಹೇಳಿದರು.
ಪಟ್ಟಣದ ರಾಗವೇಂದ್ರ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಮುದ್ದೇಬಿಹಾಳ ಕರ್ನಾಟಕ ಚಾಲಕರ ಒಕ್ಕೂಟದ ಸಂಘ ಉದ್ಗಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಲಕರಿಗೆ ಅತೀ ಕಡಿಮೆ ವೇತನದಲ್ಲಿ ದುಡಿಮೆ ಮಾಡುವ ದುಸ್ಥಿತಿ ಎದುರಾಗುತ್ತಿದೆ. ಅಲ್ಲದೇ ಇಂತಹ ಚಾಲಕರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗಳನ್ನು ನೇರವಾಗಿ ಒದಗಿಸಿಕೊಡಲು ಒಕ್ಕೂಟವನ್ನು ಮಾಡಲಾಗಿದೆ. ಪ್ರತಿಯೊಬ್ಬ ಚಾಲಕರೂ ಒಗ್ಗೂಡಿ ಒಕ್ಕೂಟವನ್ನು ಬೆಳೆಸಿದರೆ ಚಾಲಕರ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅವರು ಹೇಳಿದರು.



ಮುದ್ದೇಬಿಹಾಳ ಪಿಎಸ್‌ಐ ಎಂ.ಬಿ.ಬಿರಾದಾರ ಮಾತನಾಡಿ, ಚಾಲಕರ ಒಕ್ಕೂಟ ಸಂಘ ಸ್ಥಾಪನೆಯಾಗಿದ್ದು ಪೊಲೀಸ ಇಲಾಖೆಗೂ ತುಂಬಾ ಅನುಕೂಲಕರಾವಗಿದೆ. ಆದರೆ ಪ್ರತಿಯೊಬ್ಬ ಚಾಲಕರೂ ತಮ್ಮ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ದಾಖಲಾತಿಗಳು ನಮ್ಮ ಜೀವನದ ಏಳಿಗೆಗೆ ಮಾಡಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಚಾಲಕರಿಗೂ ಖಾಕಿ ಬಟ್ಟೆಯನ್ನು ಕಡ್ಡಾಯಗಿಳಿಸಿದ್ದು ಅವರಲ್ಲಿಯೂ ಸೇವಾ ಮನೋಭಾವನೆ ಇರಬೇಕು ಎನ್ನುವ ದೃಷ್ಠಿಕೋಣದಿಂದ ಎನ್ನುವುದು ತಿಳಿದುಕೊಳ್ಳಬೇಕು. ಅಲ್ಲದೇ ಮದ್ಯಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಂದ ಪ್ರತಿಯೊಬ್ಬ ಚಾಲಕರೂ ದೂರ ಉಳಿಯುವ ಸಂಕಲ್ಪ ಮಾಡುವುದು ಅಗತ್ಯವಿದೆ ಎಂದು ಕಿವಿ ಮಾತು ಹೇಳಿದರು.



ಚಾಲಕರ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಅಶೋಕ ಖಿಲಾರಿ ಅವರು ತಾಲೂಕಾ ಒಕ್ಕೂಟದ ಪದಾಧಿಕಾರಿಗಳಿಗೆ ಗುರುತಿನ ಚೀಟಿಗಳನ್ನು ಪಿಎಸ್‌ಐ ಸಿದ್ದು ಹೂಗಾರ ಅವರಿಂದ ವಿತರಿಸಿದರು. ಸಂಗಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖಂಡ ಕಾಮರಾಜ ಬಿರಾದಾರ ಮಾತನಾಡಿದರು.


ತಾಲೂಕಾ ಒಕ್ಕೂಟ ಪದಾಧಿಕಾರಿಗಳು:
ಕರ್ನಾಟಕ ಚಾಲಕರ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಘಟಕದ ಗೌರವಾಧ್ಯಕ್ಷರಾಗಿ ಎಂ.ಜಿ.ಬಿರಾದಾರ(ಬಾಂಬೆಗೌಡ್ರು), ತಾಲೂಕಾಧ್ಯಕ್ಷರಾಗಿ ಶರಣಗೌಡ ಗಂಗನಗೌಡರ, ಉಪಾಧ್ಯಕ್ಷರಾಗಿ ಮಸ್ತಾನ ಬಾಗವಾನ, ಕಾರ್ಯದರ್ಶಿಗಳಾಗಿ ಜಗದೇವರಾವ ಚಲವಾದಿ(ಬೈಲಕೂರ) ಅವರಿಗೆ ಒಕ್ಕೂಟದಿಂದ ನೇಮಕಾತಿ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಅಮರೇಶ ಗೂಳಿ, ತಾಳಿಕೋಟಿ ತಾಲೂಕಾಧ್ಯಕ್ಷ ಚಂದ್ರು ಹರನಾಳ, ಉಪಾಧ್ಯಕ್ಷ ಸತೀಶ ಸಿಂಧೆ, ನಾಗರಾಜ ಭಜಂತ್ರಿ ವೇಧಿಕೆಯಲ್ಲಿದ್ದರು.
ಪ್ರಶಾಂತ ಹೊನ್ನಕಟ್ಟಿ, ಗಂಗಾಧರ ಶಿರೂರ, ಸಂಜು ತಿಕೋಟ, ಅಯ್ಯಪ್ಪ ಯಾಳವಾರ, ರಂಜಾನ ಇಲಕಲ್ಲ, ಅಶೋಕ ಸಂಗಮ, ರಜಾಕ ಆಲೂರ, ಅಪ್ಪು ಬಿರಾದಾರ, ಅಪ್ಪು ಮುರಾಳ, ಅಬ್ಬು ಸಾಲವಾಡಗಿ, ಸಂತೋಷ ಹಿರೇಮಠ, ಆಶ್ಪಾಕ ನಾಲತವಾಡ, ದತ್ತು ದೇಶಪಾಂಡೆ, ಬಸವರಾಜ ನಾಡಗೌಡ್ರು ಇದ್ದರು.

 

Be the first to comment

Leave a Reply

Your email address will not be published.


*