ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
75ನೇ ಸ್ವತಂತ್ರ್ಯೋತ್ಸವ ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 225ನೇ ಜನ್ಮದಿನದ ಅಂಗವಾಗಿ ರಾಜಧಾನಿ ಸೇರಿದಂತೆ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ಭಾವಚಿತ್ರಕ್ಕೆ ಗೌರವ ನೀಡುವುದಾಗಿ ಘೋಷಣೆ ಮಾಡಿರುವ ರಾಜ್ಯ ಸರಕಾರ ರಾಯಣ್ಣನ ಅಭಿಮಾನಿಗಳಿಗೆ ಉಡುಗೊರೆ ನೀಡಿದಂತಾಗಿದೆ ಎಂದು ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಏರ್ಪಡಿಸಲಾದ 75ನೇ ಸ್ವತಂತ್ರ್ಯೋತ್ಸವ ನಿಮಿತ್ಯ ಧ್ವಾಜಾರೋಹಣ ಹಾಗೂ ರಾಯಣ್ಣ ವೃತ್ತಕ್ಕೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟೀಷರಿಗೆ ಸಿಂಹಸ್ವಪ್ನವಾದವರಲ್ಲಿ ಸಂಗೊಳ್ಳಿ ರಾಯಣ್ಣ ಅವರು ಪ್ರಥಮರಾಗಿದ್ದರು ಎನ್ನುವುದು ಸಮಾಜಕ್ಕೆ ಹಿರಿಮೆಯ ವಿಷಯವಾಗಿದೆ. ಅಂತಹ ಮಹಾನ ವ್ಯಕ್ತಿಯ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆಯವರು ಅಳವಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಇದೇ ವೇಳೆಯಲ್ಲಿ ಗ್ರಾಮದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಾಷ್ಟç ಧ್ವಜಾರೋಹನವನ್ನು ನೆರವೇರಿಸಲಾಯಿತು.
ಶಾಂತೇಶ್ವರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶಿವಾನಂದ ಇಂಡಿ, ಕೆಎಸ್‌ಆರ್‌ಪಿ ನಿವೃತ್ತಿ ಅಧಿಕಾರಿ ಜಿ.ಎಂ.ಹುಲಗಣ್ಣಿ, ಸರೂರ ಗ್ರಾಮದ ನಿವೃತ್ತ ಯೋದ ರೇವಣಯ್ಯ ಪೂಜಾರಿ ಅವರಿಗೆ ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಶಿವಬಸ್ಸು ಸಜ್ಜನ, ಉಪಾಧ್ಯಕ್ಷೆ ನೂರಜಾನಬಿ ಗುರಿಕಾರ, ಸದಸ್ಯರಾದ ರಾಚಪ್ಪ ಜಗಲಿ, ಶಾಂತಪ್ಪ ಕಂಬಳಿ, ಶೇಖಪ್ಪ ಒಣರೊಟ್ಟಿ, ಮೆಹಬೂಬ ನಿಡಗುಂಡಿ, ಗ್ರಾಮದ ಹಿರಿಯರಾದ ಗುರುಲಿಂಗಯ್ಯ ಸುಲೊಳ್ಳಿ, ಅಮತೆಪ್ಪ ಯರಝರಿ, ನಾಗಲಿಂಗಯ್ಯ ಮಠ, ಶರಣಬಸು ಹೆಬ್ಬಾಳ, ಸಿದ್ದು ಹೆಬ್ಬಾಳ, ರಾಮನಗೌಡ ಬಿರಾದಾರ, ರಾಮಣ್ಣ ಹುಲಗಣ್ಣಿ, ಮಲ್ಲಪ್ಪ ಯರಝರಿ ಸೇರಿದಂತೆ ಇದ್ದರು.
Be the first to comment