ದೇವದುರ್ಗ:- ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷ ಗತಿಸಿದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶವು ಈ ದಿನವು ಅಮೃತ ಮಹೋತ್ಸವ ದಿನವನ್ನಾಗಿ ಆಚರಿಸುತ್ತಿದ್ದು ಇಂದು ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಶಾಸಕರು ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅದ್ಯಕ್ಷರಾದ ಕೆ.ಶಿವನಗೌಡ ನಾಯಕರ ಉಪಸ್ಥಿತಿಯಲ್ಲಿ ತಾಲೂಕು ದಂಡಾಧಿಕಾರಿ ಶ್ರಿನಿವಾಸ ಚಾಪೆಲ್ ಧ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ , ಸಿಪಿಐ ಆರ್ .ಎಮ್ .ನಧಾಫ್ , ಪಿ ಐ ಹನುಮಂತ ಸಣ್ಣಮನಿ ,ಸಮಾಜಕಲ್ಯಾಣ ಇಲಾಖಾಧಿಕಾರಿ ದೇವರಾಜ , ಎಸ್ ಟಿ ಕಲ್ಯಾಣಾಧಿಕಾರಿ ರಾಘವೇಂದ್ರ , ಸರ್ವೆ ಇಲಾಖೆ ಲಕ್ಮಣ ,ನೋಂದಣಾಧಿಕಾರಿ , ಬಿಇಓ ಶ್ರೀಮತಿ ಇಂದಿರಾ ,ಸಿಡಿಪಿಒ ವೆಂಕಟಪ್ಪ ಉಳಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರ ಕಾರ್ಯಾಲಯದ ಸಿಬ್ಬಂದಿ ಸಂಘಸಂಸ್ಥೆಗಳ ಮುಖಂಡರು ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Be the first to comment