ಅಕ್ರಮವಾಗಿ ಜಾನುವಾರು ಸಾಗಾಟ: ದಾಂಡೇಲಿಯಲ್ಲಿ ಇಬ್ಬರ ಬಂಧನ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ದಾಂಡೇಲಿ

CHETAN KENDULI

ಪರವಾನಿಗೆಯಿಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾಂಡೇಲಿಯ ಬರ್ಚಿ ಚೆಕ್ ಪೋಸ್ಟ್ ಬಳಿ ದಾಂಡೇಲಿ ಗ್ರಾಮೀಣ ಪೋಲೀಸರು ಬಂಧಿಸಿದ್ದಾರೆ.
ಚೆಕ್ ಪೋಸ್ಟ್ ನಲ್ಲಿ ಗಸ್ತಿನ ವೇಳೆ ಹರೇಗಾಳಿಯಿಂದ ದಾಂಡೇಲಿ ಕಡೆಗೆ ಸಾಗುತ್ತಿದ್ದ ಎರಡು ಹೋರಿ ಹಾಗು ಕೋಣವೊಂದನ್ನು ತುಂಬಿಕೊಂಡು ಬಂದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ದಾಖಲೆಗಳಿಲ್ಲದಿರುವುದು ತಿಳಿದು ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೋಲೀಸರು ಆರೋಪಿಗಳನ್ನು ವಾಹನ ಸಮೇತ ಬಂಧಿಸಿದ್ದಾರೆ. ಆರೋಪಿಗಳನ್ನು ದಾಂಡೇಲಿ ಸುಭಾಶನಗರ ನಿವಾಸಿ ಗೌಸಲ್ಲಾ ಅಜಾಮ್ ಬರಕತ್ ಮಹಮದ್ ಅನಿಸ್ ದೇಸಾಯಿ(34) ಮತ್ತು ಬಾಬಾ ಸಾಬ್ ಸನದಿ(42) ಎಂದು ಗುರುತಿಸಲಾಗಿದೆ. ಬಂಧಿತರಿಂದ 1.5ಲಕ್ಷ ಮೌಲ್ಯದ ಅಶೋಲ್ ಲೇಲ್ಯಾಂಡ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸೈ ಐಆರ್ ಗಡ್ಡೆಕರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಂಗಾಧರ ಹನಕನಹಳ್ಳಿ ಮತ್ತು ದಯಾನಂದ ಲೋಂಡಿಕರ್ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*