ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಮೊದಲಿಗೆ ಶಾಸಕ ಆರ್.ಬಸನಗೌಡ ತುರುವಿಹಾಳ ಸೇರಿದಂತೆ ಎಲ್ಲಾ ಕಾರ್ಯಕರ್ತರನ್ನು ಡೊಳ್ಳು ಬಾರಿಸುವುದರ ಮೂಲಕ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮ ನಡೆಸಲಾದ ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವವಾಗಿ ಬರಮಾಡಿಕೊಂಡರು. ಮೊದಲಿಗೆ ಶಾಸಕರು ಸೇರಿದಂತೆ ವಿವಿಧ ಪ್ರಮುಖ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಆರ್.ಬಸನಗೌಡ ಮಾತನಾಡಿ ಇಂದು ನಾನೂ ವಿಧಾನಸಭೆಯ ಅಧಿವೇಶದಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಕ್ಷೇತ್ರದ ಜನತೆಯು ಮತದಾನವನ್ನು ಮಾಡಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ನಂತರ ಕೆ. ಕರಿಯಪ್ಪ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಮಾತನಾಡಿ ಎರಡು ದಿನಗಳ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಲಾಗಿದ್ದ ವಿಧಾನ ಸಭಾ ಅಧಿವೇಶನದಲ್ಲಿ ನಿದ್ದೆಗೆ ಜಾರಿದ ಮಸ್ಕಿ ಕ್ಷೇತ್ರದ ಶಾಸಕರು ಎಂದು ಅಪಪ್ರಚಾರ ಮಾಡಬೇಡಿ. ಈ ಹಿಂದೆ 12 ವರ್ಷ ಕಾಲ ಮಸ್ಕಿ ಕ್ಷೇತ್ರದ ಶಾಸಕರಾಗಿದ್ದರು ಆ ಅವಧಿಗಳಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಒಂದು ದಿನಾನೂ ಕ್ಷೇತ್ರದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಲಿಲ್ಲ ಎಂದರು.
ಮೆದಿಕಿನಾಳ ಗ್ರಾಮದ ಕಿಲ್ಲಾ ಓಣಿಯಲ್ಲಿ ಸಮುದಾಯ ಭವನ ನಿರ್ಮಾಣ, ನಿರಂತರ ಜ್ಯೋತಿ ತೆಲಗರ ದೊಡ್ಡಿ, ಕೊಟ್ರೇ ಶ್ವರ ಮೂಲಿಮಟಕ್ಕೇ ಕಾಂಪೌಂಡ್ ನಿರ್ಮಾಣ, ಸೇರಿದಂತೆ ಗ್ರಾಮಸ್ತರು ಶಾಸಕರಿಗೆ ಮನವಿ ಮಾಡಿದರು.
ಈ ಕಾರ್ಯಕ್ರವನ್ನು ಜಯಪ್ಪ ಮೆದಿಕಿನಾಳ ಮಸ್ಕಿ ಕಾಂಗ್ರೇಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು, ಎ ಎಲ್ ಪಾಟೀಲ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಆರ್. ಬಸನಗೌಡ ವಿಧಾನಸಭಾ ಕ್ಷೇತ್ರ ಮಸ್ಕಿ, ಕೆ.ಕರಿಯಪ್ಪ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಮಲ್ಲಿಕಾರ್ಜುನ್ ಪಾಟೀಲ್ ಯದ್ದಲ ದಿನ್ನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ, ಸಿದ್ದಣ್ಣ ಹೂವಿನಬಾವಿ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ನಿರುಪಾದೆಪ್ಪ ವಕೀಲರು, ಮೈನುದ್ದಿನ್ ಮುದ್ದಾಪುರ ಸೇರಿದಂತೆ ಮೆದಿಕಿನಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
Be the first to comment