ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿವಾದ ಜಾಗಕ್ಕೆ ತೆರೆ  _ರೈತರಿಗೆ ನ್ಯಾಯ ಒದಗಿಸುವ ಭರವಸೆ, ಜಿಲ್ಲಾ ಸತ್ರ ನ್ಯಾಯಾಧೀಶ ತ್ಯಾಗರಾಜ್.ಎನ್.ಇನ್ನವಳಿ ಸ್ಥಳ ಪರಿಶೀಲನೆ_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು

 ದೇವನಹಳ್ಳಿ

CHETAN KENDULI

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂಬರ್ ೧೩೪ರಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮಾಡಬೇಕೆಂದು ಆ ಜಾಗದಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ನ್ಯಾಯ ಒದಗಿಸುವ ಭರವಸೆಯನ್ನು ಗ್ರಾಮಾಂತರ ಜಿಲ್ಲಾ ಸತ್ರ ನ್ಯಾಯಾಧೀಶ ತ್ಯಾಗರಾಜ್.ಎನ್.ಇನ್ನವಳಿ ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭರವಸೆ ನೀಡಿದರು. ವಿವಾದಿತ ಜಾಗದಲ್ಲಿ ೧೦೦ ಎಕರೆಯಷ್ಟು ಸರಕಾರಿ ಗೋಮಾಳ ಜಮೀನು ಇದ್ದು, ಈಗಾಗಲೇ ರೈತರು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಂಡಿದ್ದು, ಜಾಗಕ್ಕೆ ಸಂಬಂಧಿಸಿದಂತೆ ಉಳುಮೆ ಮಾಡುವ ರೈತರು ತಮ್ಮಲ್ಲಿರುವ ದಾಖಲೆಗಳನ್ನು ತಹಶೀಲ್ದಾರ್ ನಿಯೋಜಿಸುವ ಅಧಿಕಾರಿಗಳಿಗೆ ಸಲ್ಲಿಸಿ, ಮುಂದಿನ ಮೂರ್‍ನಾಲ್ಕು ದಿನದಲ್ಲಿ ಇರುವ ಸಮಸ್ಯೆಯನ್ನು ಬರೆಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಸುಮಾರು ಬೆಳಿಗ್ಗೆ ೧೦ ಗಂಟೆಯಿಂದ ರೈತರು ವಿವಾದಿತ ಸ್ಥಳದಲ್ಲಿ ಕಾದುಕುಳಿತಿದ್ದು, ಸಂಜೆ ೫.೩೦ರ ಸಮಯದಲ್ಲಿ ನ್ಯಾಯಾಧೀಶ ತ್ಯಾಗರಾಜ್.ಎನ್.ಇನ್ನವಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ದೇವನಹಳ್ಳಿ ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳು ಅವರನ್ನು ಅಭಿನಂದಿಸಿದರು. ನಂತರ ಅಧಿಕಾರಿಗಳೊಂದಿಗೆ ಸರ್ವೆ ನಂ.೧೩೪ರ ಬಗ್ಗೆ ಮಾಹಿತಿ ಪಡೆದರು. ನಂತರ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಈಗಾಗಲೇ ಜಿಲ್ಲಾ ನ್ಯಾಯಾಲಯ ಸಂಕೀರ್ಣ ವನ್ನು ಸರ್ವೆ ನಂ.೧೩೪ರಲ್ಲಿ ಅವರಿಗೆ ಮಂಜೂರು ಮಾಡಲಾಗಿತ್ತು. ಕಂದಾಯ ಇಲಾಖೆಯಲ್ಲಿ ಆಕಾರಬಂದ್‌ಪ್ರಕಾರ ೧೦೪ ಎಕರೆ, ಆರ್‌ಟಿಸಿ ಪ್ರಕಾರ ೧೯೦ ಇದೆ. ಓವರ್‌ಲ್ಯಾಪ್ ಡುಬ್ಲಿಕೇಟ್ ಆರ್‌ಟಿಸಿ ಇರುತ್ತದೆ. ಅದ್ದರಿಂದ ಸರ್ವೆ ನಡೆಸಿ, ನಕ್ಷೆಯನ್ನು ತಯಾರು ಮಾಡಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ರೈತರು ಯಾವ ಯಾವ ಜಾಗದಲ್ಲಿದ್ದಾರೆ. ಸರ್ವೆ ಕಾರ್ಯ ನಡೆಯುವ ಸಂದರ್ಭದಲ್ಲಿ ರೈತರಿಗೆ ಅವರವರ ಜಾಗ ಯಾವ್ಯಾವ ಬ್ಲಾಕ್‌ನಲ್ಲಿರುತ್ತಾರೆಂಬುವುದು ತಿಳಿಯುತ್ತದೆ. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ. ಸೂಕ್ತ ದಾಖಲೆಗಳಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ನಿಮ್ಮಲ್ಲಿರುವ ದಾಖಲೆಗಳನ್ನು ನಾಳೆಯೇ ತಹಶೀಲ್ದಾರ್ ಅವರಿಗೆ ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇನ್ನೂ ಈ ವೇಳೆಯಲ್ಲಿ ದೇವನಹಳ್ಳಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಜೆ.ರಮೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗ್ರಾಮಾಂತರ ಜಿಲ್ಲಾ ಸತ್ರ ನ್ಯಾಯಾಧೀಶ ತ್ಯಾಗರಾಜ್.ಎನ್.ಇನ್ನವಳಿ ಅಧಿಕಾರಿಗಳ ಸಮ್ಮುಕದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಅರುಳ್‌ಕುಮಾರ್, ಉಪ ಭೂ ದಾಖಲೆಗಳ ನಿರ್ದೇಶಕ ಹನುಮೇಗೌಡ, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ದೇವನಹಳ್ಳಿ ನ್ಯಾಯಾಲಯದ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷ ಭೈರೇಗೌಡ, ಎಸ್‌ಎಲ್‌ಎಸ್ ಶಾಲೆಯ ಡಿ.ಎಸ್.ಧನಂಜಯ್, ರೈತರಾದ ಮಂಜುನಾಥ್, ಕಮಲಮ್ಮ, ವಿನೋದ್, ಆರ್ ಐ ವಿಶ್ವನಾಥ್, ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಸೇರಿದಂತೆ ಹಲವಾರು ಇದ್ದರು.

Be the first to comment

Leave a Reply

Your email address will not be published.


*