ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ವಿಧಾನಸಭಾಧ್ಯಕ್ಶರು ರಾಜೀನಾಮೆ ನೀಡಲು ಸಮಾಜವಾದಿ ಪಕ್ಷದ ಉತ್ತರಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಆಗ್ರಹ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಸಿದ್ದಾಪುರ- ನಿನ್ನೆ ಸಿದ್ಧಾಪುರದ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಆಗಿರುವುದು ತಮಗೆಲ್ಲ ತಿಳಿದ ವಿಷಯ. ಈ ಮಿನಿ ವಿಧಾನಸೌಧದ ಕಟ್ಟಡವು ಐದಾರು ವರ್ಷಗಳ ಹಿಂದೆ ಉದ್ಘಾಟನೆ ಗೊಳ್ಳಬೇಕಿತ್ತು. ಆದರೆ ಸ್ಥಳೀಯ ಶಾಸಕರ ನಿರ್ಲಕ್ಷ ಧೋರಣೆ ಈ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಲು ಕಾರಣ ಎನ್ನಬಹುದು. ಇವರು ಬಾನ್ಕುಳಿ ಯಲ್ಲಿರುವ ಗೋಶಾಲೆಯ ರಸ್ತೆ ನಿರ್ಮಾಣಕ್ಕೆ ತೋರಿದ ಕಾಳಜಿಯನ್ನು ಉಳಿದ ಅಭಿವೃದ್ಧಿ ಕಾಮಗಾರಿಗಳಲ್ಲಿ ತೋರಿಸಿದ್ದರೆ ಇವತ್ತು ಸಿದ್ದಾಪುರ ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತು. ಆದರೆ ಸ್ಥಳಿಯ ಶಾಸಕರು ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಅನೇಕ ಸಾರ್ವಜನಿಕ ಕೆಲಸಗಳು ಬಾಕಿ ಉಳಿದಿವೆ.

ಇನ್ನು ಕೋವಿಡ್ ಪ್ರಕರಣಗಳು ಸಿದ್ದಾಪುರದಲ್ಲಿ ಅತ್ಯಧಿಕವಾಗಿ ಇದ್ದ ಸಂದರ್ಭದಲ್ಲಿ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಹಂತ ಹಂತವಾಗಿ ಪ್ರಕರಣಗಳು ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿನ್ನೆ ನಡೆದ ಮಿನಿ ವಿಧಾನಸೌದ ಕಟ್ಟಡ ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಕಾರ್ಯಕ್ರಮ ನಡೆಸಿರುವುದು ಸರಕಾರದ ನಿಯಮ ಉಲ್ಲಂಘನೆಯಾಗಿದೆ. ಘನತೆವೆತ್ತ ವಿಧಾನಸಭಾ ಅಧ್ಯಕ್ಷ ಸ್ಥಾನದಲ್ಲಿರುವವರೆ ಸರಕಾರದ ನಿಯಮ ಉಲ್ಲಂಘಿಸಿರುವುದು ಇಂದಿನ ಸಮಾಜದ ವಾಸ್ತವಿಕತೆಯನ್ನು ತಿಳಿಸುತ್ತದೆ.  ಗ್ರಾಮ ಪಂಚಾಯಿತಿಗಳಿಗೆ ಹೋಗಿ ಕೋವಿಡ್ ನಿಯಮದ ಬಗ್ಗೆ ಪಾಠ ಮಾಡುವವರು, ಓದುವುದು ಕಾಶಿ ಪಟ ತಿನ್ನುವುದು ಮಸಿ ಕೆಂಡ ಎನ್ನುವಂತೆ ನಡೆದುಕೊಂಡಿದ್ದಾರೆ. ಈ ಕಟ್ಟಡವನ್ನು ಅಧಿಕಾರಿಗಳು ಸಾಂಕೇತಿಕವಾಗಿ ಉದ್ಘಾಟನೆ ಮಾಡಿ ಪ್ರಾರಂಭ ಮಾಡಬಹುದಿತ್ತು. ನಂತರದ ದಿನಗಳಲ್ಲಿ ಸಂಬಂಧಪಟ್ಟ ಮಂತ್ರಿಗಳು, ಉಸ್ತುವಾರಿ ಸಚಿವರು ಹಾಗೂ ಮಾನ್ಯ ಸಭಾಧ್ಯಕ್ಷರನ್ನು ಕರೆದು ಉದ್ಘಾಟನೆಯನ್ನು ಮಾಡಬಹುದಿತ್ತು. ಆದರೆ ತರಾತುರಿಯಲ್ಲಿ ಗುಂಪು ಕೂಡಿ ಉದ್ಘಾಟನೆ ಮಾಡುವ ಅವಶ್ಯಕತೆ ಇತ್ತೆ ಎನ್ನುವುದು ನಮ್ಮ ಪ್ರಶ್ನೆ.

ಕೋರೊನಾದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬೇಜವಾಬ್ದಾರಿತನ ತೋರಿಸಿರುವ ವಿಧಾನಸಭಾ ಅಧ್ಯಕ್ಷರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಸರ್ಕಾರದ ಮಟ್ಟದಲ್ಲಿ ಇವರ ರಾಜೀನಾಮೆಯನ್ನು ಪಡೆಯಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ತಿಸಿದ್ದಾರೆ.    ಇನ್ನೂ ನೋಡುವಾಗ ತಾವು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದ್ದೇವೆ, ರಸ್ತೆ ಅಭಿವೃದ್ಧಿ ಮಾಡುತ್ತಿದ್ದೇವೆ, ಎಂದು ಸರಕಾರದ ಅಭಿವ್ರದ್ಧಿ ಕಾರ್ಯಕ್ರಮದ ಬಗ್ಗೆ ತಮ್ಮ ಅಪ್ಪನ ಮನೆಯ ಹಣ ತಂದು ಮಾಡಿದವರಂತೆ ಪೋಸು ನೀಡುತ್ತಿರುವ ಜನಪ್ರತಿನಿಧಿಗಳು ಇದು ನಿಮ್ಮ ಅಪ್ಪನ ಮನೆಯ ಹಣ ಅಲ್ಲಾ ನಮ್ಮ ತೆರಿಗೆಯ ಹಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕು ಹೇಳಿದ್ದಾರೆ.  ಜನಪ್ರತಿನಿಧಿಗಳನ್ನು ನಾವು ನಮ್ಮ ಸೇವೆಗೆ ನೇಮಕ ಮಾಡಿದ್ದೇವೆ. ನೀವು ನಮ್ಮ ಸೇವಕರೆ ಹೊರತು ನಾಯಕರಲ್ಲ ಇದನ್ನು ನೆನಪಿಟ್ಟುಕೊಳ್ಳಿ ಎಂದು ಈ ಮೂಲಕ ತಿಳಿಸಲು ಬಯಸುತ್ತೇನೆ ಹೇಳಿದ್ದಾರೆ.

Be the first to comment

Leave a Reply

Your email address will not be published.


*