ಸರ್ಕಾರಿ ಜಮೀನು ಒತ್ತುವರಿ; ಖುಲ್ಲಾ ಪಡಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು

ಮುಂಡಗೋಡ

CHETAN KENDULI

ಸನವಳ್ಳಿ ಗ್ರಾಮದಲ್ಲಿ ಸರ್ವೇ ನಂ.51ರಲ್ಲಿ ನಿವೇಶನ ಹಕ್ಕುಪತ್ರ ಮಂಜೂರಿಯಾದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದನ್ನು ಖುಲ್ಲಾ ಪಡಿಸಬೇಕೆಂದು ಒತ್ತಾಯಿಸಿ ಗ್ರಾಮದ ನಿವೇಶನ ಮಂಜೂರಿದಾರರು ಪಟ್ಟದಲ್ಲಿ ಪ್ರತಿಭಟಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.ಇದಕ್ಕೂ ಮುನ್ನ ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ತಹಶೀಲ್ದಾರ ಕಛೇರಿಯ ವರೆಗೆ ಮೆರವಣಿಗೆ ನಡೆಸಿ ಒತ್ತುವರಿ ಮಾಡಿದವರ ವಿರುದ್ಧ ಘೋಷಣೆ ಕೂಗಿದರು. ಸನವಳ್ಳಿ ಗ್ರಾಮದಲ್ಲಿ ಸವೇ ನಂ51 ರಲ್ಲಿ 1.18 ಎಕರೆ ಜಮೀನಿದ್ದು ಈ ಜಮೀನಿನಲ್ಲಿ ಸರಕಾರವು 1992ರಲ್ಲಿ ಆಶ್ರಯ ಯೋಜನೆಯಲ್ಲಿ 16ಜನರಿಗೆ ನಿವೇಶನ ಹಂಚಿದ್ದು ಅಲ್ಲಿ ಮನೆ ಕಟ್ಟಲು ಹೋದರೆ ಅಕ್ಕ-ಪಕ್ಕದ ಜಮೀನುದಾರರಾದ ಶಿವಲಿಂಗಪ್ಪ ಕಳಸಗೇರಿ ಮಕ್ಕಳು ಹಾಗೂ ಭೀಮಣ್ಣ ಬೈರಣ್ಣವರ ಮಕ್ಕಳು ತಂಟೆ ತಕರಾರು ಮಾಡುತ್ತ್ರಾ ಅಡ್ಡಿ ಪಡಿಸುತ್ತಿದ್ದಾರೆ. ಈ ಕುರಿತು ಪೆÇಲೀಸ್ ಠಾಣೆ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳಿಗೆ ದೂರು ಸಲ್ಲಿಸುತ್ತಾ ಬಂದರು ಯಾವುದೇ ಕ್ರಮ ಕೈಗೊಂಡಿಲ್ಲ.

 

ತಾಲೂಕಿನ ಓಣಿಕೇರಿ, ಇಂದೂರ ಕೆಂದಲಗೇರಿ, ನಂದಿಗಟ್ಠಾ ಮತ್ತು ಹುಲಿಹೊಂಡ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸರ್ಕಾರಿ ಜಮೀನಿನ್ನು ಕೆಲವರು ಒತ್ತುವರಿ ಮಾಡಿದ್ದನ್ನು ತಹಶೀಲ್ದಾರ ಹಾಗೂ ಪೆÇಲೀಸ್ ಅಧಿಕಾರಿಗಳು ಖುಲ್ಲಾ ಪಡಿಸಿದ್ದಾರೆ. ಆದರೆ, ಸನವಳ್ಳಿ ಗ್ರಾಮದಲ್ಲಿ ಒತ್ತುವರಿ ಮಾಡಿದ್ದನ್ನು ಖುಲ್ಲ ಪಡಿಸದೇ ಮೃದು ಧೋರಣೆ ತೋರುತ್ತಾ ಬಂದಿದ್ದಾರೆ. ಸರ್ಕಾರ ಒಂದು ವಾರದ ಒಳಗೆ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಜುಲೈ 26 ರಿಂದ ತಹಶೀಲ್ದಾರ ಕಛೇರಿ ಮುಂದೆ ಅನಿರ್ದಿಷ್ಟ ಕಾಲದವರಿಗೆ ಸತ್ಯಾಗ್ರಹ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಶ್ರೀಧರ ಮುಂದಲನಿ: ಈಗಾಗಲೇ ಗ್ರಾಮದ ಈ ಸಮಸ್ಯೆಯ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದೇನೆ. ಗ್ರಾಮಕ್ಕೆ ಭೇಟಿ ನೀಡಿ ನಿಮ್ಮಗಳ ಗಮನಕ್ಕೆ ತಂದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.ಮಾದೇವಪ್ಪ ಕ್ಯಾಮಣಕೇರಿ, ಸರೇಶ ಕೇರಿಹೊಲದವರ, ಸಂಪತ್ತ ಕ್ಯಾಮಣಕೇರಿ, ಈರಣ್ಣ ಕ್ಯಾಮಣಕೇರಿ, ದಿನೇಶ ಕೇರಿ ಹೊಲದವರ, ಬೈರಪ್ಪ ಹನಕನಳ್ಳಿ, ಫಕ್ಕೀರಪ್ಪ ಮನಗ್ಗಿ, ಅಶೋಕ ಮಟ್ಟಿಮನಿ, ಗಂಗಾಧರ ಕೇರಿಹೊಲದವರ, ಶಂಭು ಕೇರಿಹೊಲದವರ, ಹಸನಸಾಬ ಸಿದ್ದಿ, ನಾಗಪ್ಪ ಯಲ್ಲಾಪುರ, ತಿರಕಪ್ಪ ಸುಣಗಾರ, ಪ್ರಭು ಅರಶಿಣಗೇರಿ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*