ಐಡಿಯಲ್ ಐಸ್ಕ್ರೀಮ್ ಕಂಪನಿ ಸ್ಥಾಪಕ ಪ್ರಭಾಕರ್ ಕಾಮತ್ ನಿಧನ

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

ಮಂಗಳೂರು

ನಾಡಿನ ಪ್ರಸಿದ್ಧ ಐಸ್‌ ಕ್ರೀಂ ಸಂಸ್ಥೆ ಐಡಿಯಲ್ಸ್‌ ನ ಸ್ಥಾಪಕ ಎಸ್‌.ಪ್ರಭಾಕರ ಕಾಮತ್‌(79) ಅವರು ಇಂದು ಬೆಳಿಗ್ಗೆ ನಿಧನರಾದರು.ಎಸ್ ಪ್ರಭಾಕರ್ ಅವರು ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು.ಅವರು ಪತ್ನಿ, ಪುತ್ರ, ಐಡಿಯಲ್‌ ಐಸ್‌ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್‌ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

CHETAN KENDULI

1975ರಲ್ಲಿ ಎಸ್ ಪ್ರಭಾಕರ್ ಕಾಮತ್ ಅವರು ಐಡಿಯಲ್ ಐಸ್‌ ಕ್ರೀಂ ಪಾರ್ಲರ್‌ ಆರಂಭಿಸಿದ್ದರು. ಅವರೇ ಸ್ವತಃ ವಿವಿಧ ನಮೂನೆಯ ಐಸ್‌ ಕ್ರೀಂ ಗಳನ್ನು ಮನೆಯಲ್ಲಿಯೇ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಇಂದು ಐಡಿಯಲ್ಸ್‌ ಐಸ್ ಕ್ರೀಂ ಮನೆಮಾತಾಗಿದೆ.

Be the first to comment

Leave a Reply

Your email address will not be published.


*