ಪುನೀತ್ ಸಮಾಧಿ ಎದುರು ಮದುವೆಯಾಗಲು ಬಂದಿದ್ದ ಜೋಡಿಗಳಿಗೆ, ಪೋಷಕರಿಲ್ಲದ ಕಾರಣ ನಿರಾಕರಿಸಿದ ಪುನೀತ್ ಸಹೋದರರು..!!

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

ಬೆಂಗಳೂರು

ನಟ ಪುನೀತ್ ರಾಜಕುಮಾರ್ ಸಮಾಧಿ ಎದುರು ಮದುವೆಯಾಗಲು ಬಂದಿದ್ದ ಪ್ರೇಮಿಗಳಿಗೆ, ಅವಕಾಶ ಸಿಗದ ಹಿನ್ನಲೆಯಲ್ಲಿ ಕಂಠೀಠವ ಸ್ಟುಡಿಯೋ ಪಕ್ಕದಲ್ಲಿರುವ ಅಂಜನೇಯ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದ ಗುರುರಾಜ್ ಮತ್ತು ಗಂಗಾ ಎಂಬ ಜೋಡಿಗಳು ಪುನೀತ್ ಸಮಾಧಿ ಎದುರು ಮದುವೆಯಾಗಲು ಶಿವಣ್ಣ ಹಾಗೂ ರಾಘಣ್ಣ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದರು.

CHETAN KENDULI

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಘವೇಂದ್ರ ರಾಜಕುಮಾರ್, ವಿವಾಹವಾಗುವುದಾಗಿ ಒಂದು ಜೋಡಿ ಬಂದಿತ್ತು. ಆದರೆ ನಾನು ನಿಮ್ಮ ತಂದೆ-ತಾಯಿಗಳೊಂದಿಗೆ ಬಂದರೆ ಮಾತ್ರ ವಿವಾಹಕ್ಕೆ ಒಪ್ಪಿಗೆ ಸೂಚಿಸುವುದಾಗಿ ತಿಳಿಸಿದ್ದೇನೆ. ಇವತ್ತು ಇವರು ಬರ್ತಾರೆ, ನಾಳೆ ಬೇರೆಯವರು ಬರ್ತಾರೆ. ಇದರಿಂದ ಅಪ್ಪುವಿಗೆ ಕೆಟ್ಟ ಹೆಸರು ಬರಬಾರದು ಎಂದು ಹೇಳಿದ್ದರು.

ಇದಾದ ಬಳಿಕ ಪ್ರೇಮಿಗಳು ಇಂದು ಸಂಜೆ ಕಂಠೀರವ ಸ್ಟುಡಿಯೋ ಪಕ್ಕದ ಅಂಜನೇಯ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ.

Be the first to comment

Leave a Reply

Your email address will not be published.


*