ಜಿಲ್ಲಾ ಸುದ್ದಿಗಳು
ಕಾರವಾರ
ಇಲ್ಲಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಔಷಧ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಸುಮಾರು 2.53 ಲಕ್ಷ ಮೌಲ್ಯದ ಸ್ಪಿರಿಟ್ ಸಹಿತ ವಶಕ್ಕೆ ಪಡೆಯಲಾಗಿದೆ.
ಗೋವಾದ ಫೋನ್ಡಾದಿಂದ ಮುಂಜಾನೆ ಕೇರಳದ ಕೊಚ್ಚಿಗೆ ಹೊರಟಿದ್ದ ಲಾರಿಯನ್ನು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ಗೋವಾ ಕರ್ನಾಟಕ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ತಡೆದಿದ್ದರು. ಔಷಧಿ ಎಂದು ಹೇಳಲಾಗುತ್ತಿದ್ದ ಬಾಕ್ಸ್ ಒಂದನ್ನು ಒಪನ್ ಮಾಡಿದಾಗ ಸ್ಪಿರಿಟ್ ಇರುವುದು ಪತ್ತೆಯಾಗಿದೆ. ತಕ್ಷಣ ಲಾರಿಯಲ್ಲಿ 35 ಲೀಟರ್‍ನ ಒಟ್ಟು 125 ಕ್ಯಾನ್‍ಗಳಲ್ಲಿ ತುಂಬಿಸಿದ್ದ 4,375 ಲೀಟರ್ ಸ್ಪಿರಿಟ್ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇದೇ ವೇಳೆ ಕೇರಳ ಮೂಲದ ಲಾರಿ ಚಾಲಕ ಜಿಷ್ಣು ಕೆ ಎಂಬುವವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಲ್ಲದೆ ಸ್ಪಿರಿಟ್ ಸಾಗಾಟಕ್ಕೆ ಬಳಸಿದ್ದ 20.80 ಲಕ್ಷದ ಲಾರಿ, ಲಾರಿಯಲ್ಲಿದ್ದ 7.14 ಲಕ್ಷ ಮೌಲ್ಯದ 1 ಸಾವಿರ ಬಾಕ್ಸ್ ಔಷಧ ಹಾಗೂ 2,53,750 ರೂಪಾಯಿ ಮೌಲ್ಯದ ಸ್ಪಿರಿಟ್ ಸೇರಿ ಒಟ್ಟು 30,47,750 ರೂಪಾಯಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment