ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ” ರೈತ ಹೋರಾಟ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ

CHETAN KENDULI

ಅಂಕೋಲಾ-“ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ” ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು , ವಿದ್ಯುತ್ ಕಾಯ್ದೆ-2020 ರದ್ದು ಪಡಿಸಲು ಮತ್ತು ರೈತರಿಗೆ ಎಂಎಸ್ ಪಿ ನೀಡಲು ಕಾನೂನು ಖಾತರಿ ಪಡೆಯುವುದಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿ ಗಳಿಗೆ ಅಂಕೋಲಾ ತಹಶಿಲ್ದಾರರ ಮೂಲಕ ಮನವಿ ನೀಡಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ ದ ಜಿಲ್ಲಾ ಅಧ್ಯಕ್ಷರಾದ ಶಾಂತಾರಾಮ ನಾಯಕ ಮಾತನಾಡಿ’ ಭಾರತೀಯ ಸಮಾಜವು ರೈತರನ್ನು “ಅನ್ನದಾತರು” ಎಂದು ಕರೆಯುತ್ತದೆ, .ರೈತ ಇಂದು 140 ಕೋಟಿ ಭಾರತೀಯರಿಗೆ ಆಹಾರ ಬೆಳೆದು ನೀಡುತ್ತಿದ್ದಾರೆ, ಇಂತಹ ರೈತರ ಮೇಲೆ ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾನೂನನ್ನು ಹೇರಿದೆ.ಅವುಗಳು ನಮ್ಮ ಕೃಷಿಯನ್ನು ಮತ್ತು ನಮ್ಮ ಮುಂದಿನ ಪೀಳಿಗೆಗಳನ್ನು ನಾಶಪಡಿಸುತ್ತದೆ. ಇವು ಕೃಷಿಯನ್ನು ನಮ್ಮ ಕೈಯಿಂದ ಕಸಿದುಕೊಂಡು ದೊಡ್ಡ ಕಾರ್ಪೋರೆಟ್ ಸಂಸ್ಥೆಗಳಿಗೆ ಹಸ್ತಾಂತರಿಸುವ ಕಾನೂನುಗಳು. ಇದಲ್ಲದೆ ಇತರೆ ಕೆಲವು ಕಾನುನಿನ ಕತ್ತಿಗಳು ರೈತರ ತಲೆಯ ಮಡಕೆ ತೂಗುತ್ತಿವೆ. ಇದನ್ನಾ ವಿರೋಧಿಸಿ 7 ತಿಂಗಳಿಂದ ದೆಹಲಿ ಹೊರವಲಯದಲ್ಲಿ ಲಕ್ಷಾಂತರ ರೈತರು ಹೊರಾಟ ನಡೆಸುತ್ತಿದ್ದರು ಮಾತುಕತೆ ಮೂಲಕ ಬಗೆಹರಿಸಲು ಸರಕಾರ ತಯಾರಿಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ, ಸಂವಿಧಾನ ವಿರೋಧಿ ಕ್ರಮ ಕೇಂದ್ರ ಸರಕಾರ ಅನುಸರಿಸಯತಿದೆಯೆಂದು ತೀವ್ರವಾಗಿ ಖಂಡಿಸಿದರು.

ದೇಶಾದ್ಯಂತ ಇಂದು ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚ ಕರೆನೀಡಿತ್ತು. ರಾಷ್ಟ್ರಪತಿ ಗಳಿಗೆ ನೀಡಿದ ಮನವಿಯಲ್ಲಿತಾವು ಭಾರತದ ಸಂವಿಧಾನವನ್ನು ಉಳಿಸುವ ಪ್ರಮಾಣವಚನ ಸ್ವೀಕರಿಸಿದ್ದೀರಿ. ರೈತರ ಐತಿಹಾಸಿಕ ಆಂದೋಲನವು ದೇಶದ ಕೃಷಿ ಮತ್ತು ರೈತರನ್ನು ಉಳಿಸುವ ಚಳುವಳಿಯಷ್ಟೇ ಅಲ್ಲ, ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಅಂದೋಲನವೂ ಆಗಿದೆ. ರೈತರ ಈ ಪವಿತ್ರ ಕಾರ್ಯಾಚರಣೆ ಗೆ ತಮ್ಮ ಸಂಪೂರ್ಣ ಬೆಂಬಲವನ್ನು ಪಡೆಯುತ್ತೇವೆ ಎಂದು ಭಾವಿಸುತ್ತೇವೆ ಎಂದು ಮನವಿ ಮಾಡಲಾಗಿದೆ.ಮುಖಂಡರಾದ ಎಚ್.ಬಿ.ನಾಯಕ, ಸಂತೋಷ ನಾಯ್ಕ, ಮೀನಾಕ್ಷಿ ನಾಯಕ, ಲೀಲಾ ನಾಯ್ಕ, ವರದಾ , ಬೊಳಾ ಗೌಡ ಮುಂತಾದವರು ನೇತ್ರತ್ವವಹಿಸಿದ್ದರು.

Be the first to comment

Leave a Reply

Your email address will not be published.


*