ರಾಜ್ಯ ಸುದ್ದಿಗಳು
ಬೆಂಗಳೂರು:
ಹಿಂದು ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತಿಯಾಗಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತಿಚಿಗಷ್ಟೇ ಕರ್ನಾಟಕ ರಾಜ್ಯ ಸಿಎಂ ಬದಲಾವಣೆಯ ವಿವಾಧಾತ್ಮಕ ಹೇಳಿಕೆಯನ್ನು ನೀಡಿ ಪಕ್ಷದ ಹೈಕಮಾಂಡ್ ಕಣ್ಣುನಲ್ಲಿ ಉಳಿದುಕೊಂಡಿದ್ದರು. ಆದರೆ ದೇಶದ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆಯನ್ನು ಮಾಡಿದ ದಾರಿಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಪಕ್ಷದಲ್ಲೂ ಮಾಡುತ್ತಿರುವುದನ್ನು ನೋಡಿದರೆ ಯತ್ನಾಳ ಅವರು ಹೇಳಿದ್ದು ನಿಜವಾಗುತ್ತಾ ಎಂಭ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡಿಬರುತ್ತಿದೆ.!!!
ಇತ್ತಿಚಿಗಷ್ಟೇ ಉತ್ತರಾಖಂಡ ಮುಖ್ಯಮಂತ್ರಿಗಳ ಬದಲಾವಣೆಯನ್ನು ಮಾಡುವ ಮುನ್ನ ಬಿಜೆಪಿ ಹೈಕಮಾಂಡ್ ಅವರನ್ನು ದೆಹಲಿಗೆ ಬುಲಾವ ಮಾಡಿದ್ದರು. ನಂತರ ಅವರಿಂದ ರಾಜಿನಾಮೆಯನ್ನು ಪಡೆದುಕೊಂಡು ಸಿಎಂ ಬದಲಾವಣೆಯನ್ನು ಮಾಡಿದ್ದರು. ಇದರಂತೆ ರಾಜ್ಯದಲ್ಲಿಯೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ರವಿವಾರವಷ್ಟೇ ದೆಹಲಿಗೆ ಕರೆಸಿಕೊಂಡಿದ್ದು ಇಂದು ವಾಪಸ್ ಬಂದಿದ್ದಾರೆ. ಇದರ ಬೆನ್ನೆಲೆಯಲ್ಲಿಯೇ ಸಿಎಂ ಯಡಿಯೂರಪ್ಪನವರನ್ನು ದೆಹಲಿಗೆ ಬುಲಾವ್ ಮಾಡಿದ್ದು ರಾಜ್ಯ ಬಿಜೆಪಿ ಪಕ್ಷದಲ್ಲಿಯೂ ಸಂಚಲಕನ ಮೂಡಿಸಿದೆ.
ದೇಶದ ಪಂಚರಾಜ್ಯದ ಚುನಾವಣೆ ಮುಕ್ತಾಗೊಂಡ ಬಳಿಕೆ ರಾಜ್ಯ ಸಿಎಂ ಬದಲಾವಣೆಯಾಗುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದರು. ಇದಕ್ಕೆ ಪೂರಕವಾಗಿ ಸಿಎಂ ಯಡಿಯೂರಪ್ಪನವರಿಗೆ ಹೈಕಮಾಂಡ್ ಬುಲಾವ್ ಬಂದಿದ್ದು ಯತ್ನಾಳ ಹೇಳಿದ ಮಾತುಗಳು ಸತ್ಯವಾಗುತ್ತದಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ರಾಜ್ಯದಲ್ಲಿ ಸಾಕಷ್ಟು ಕುತುಹಲ ಮೂಡಿಸಿದ್ದ ಹಾಗೂ ರಾಜ್ಯದ ರಾಜಕಾರಣವನ್ನೆ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯತ್ನಾಳ ಅವರು ಮುಂಚಿತವಾಗಿಯೇ ಹೇಳಿದ್ದು ನಂತರ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿವಾದಗಳೊಂದಿಗೆ ಸಿಡಿ ಪ್ರಕರಣ ಬೆಳಕಿಗೆ ಬಂದು ರಾಜ್ಯ ಸರಕಾರಕ್ಕೆ ಮುಳುವಾಗಿತ್ತು. ಅದರಂತೆ ಈಗಲೂ ಯತ್ನಾಳ ಅವರು ಹೇಳಿದ್ದು ನಿಜವಾಗುತ್ತದಾ ಎಂದು ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ.
Be the first to comment