ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ರೋಗಿಗಳಿಗೆ ವೈದ್ಯರ ಚಿಕಿತ್ಸೆ ಎಷ್ಟು ಮುಖ್ಯವೋ ಅವರು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯವಾಗಿರುತ್ತದೆ. ಇದರಲ್ಲಿ ಮುದ್ದೇಬಿಹಾಳ ಕ್ಷೇತ್ರದ ಶಾಸಕರು ರೋಗಿಗಳಿಗೆ ಪೌಸ್ತಿಕ ಆಹಾರ ನೀಡಿದ್ದು ಮುದ್ದೇಬಿಹಾಳಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದು ಡಾ. ಅನಿಲಕುಮಾರ ಶೇಗುಣಸಿ ಹೇಳಿದರು.
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ರೋಗಿಗಳಿಗೆ ಹೆಚ್ಚಿನ ಪೌಷ್ಟಿಕಾಂಶ ಒದಗಿದರೆ ಬೇಗನೆ ಗುಣಮುಖರಾಗುತ್ತಾರೆ ಎಂದು ಪ್ರತಿದಿನವೂ ರೋಗಿಗಳಿಗೆ ಮೊಳಕೆಯೋಡಿದ ಕಾಳು, ಕಿತ್ತಳೆ ಹಣ್ಣು, ಮೊಟ್ಟೆ ಆಹಾರ ನೀಡಲು ಪ್ರಾರಂಭಿಸಿದ್ದು ಆಸ್ಪತ್ರೆಯಲ್ಲಿನ ರೋಗಿಗಳು ಚಿಕಿತ್ಸೆಗೆ ಬೇಗ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಈಗಾಗಲೇ 125 ರೋಗಿಗಳಲ್ಲಿ 80 ರೋಗಿಗಳು ಹಾಗೂ ವೆಂತಿಲೇಟೆರ್ನಲ್ಲಿನ 10 ರೋಗಿಗಳು ಸಂಪೂರ್ಣ ಗುಣಮುಖರಾಗಿ ಹೊರಹೋಗಿದ್ದು ಇನ್ನುಳಿದಿರುವ ರೋಗಿಗಳೂ ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದು ಬೇಗನೆ ಗುಣಮುಖರಾಗಿ ಹೊರನಡೆಯಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
“ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ನನಗೆ ಉತ್ತಮ ಚಿಕಿತ್ಸೆ ದೊರಕಿದೆ. ಶಾಸಕ ನಡಹಳ್ಳಿ ಸಾಹೇಬರು ನಮ್ಮಂಥ ರೋಗಿಗಳಿಗೆ ಕೊಟ್ಟಿರುವ ಪ್ರೋಟಿನ್ ಫುಡ್ ನಾವು ಚೇತರಿಸಿಕೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ನಾನು ಬೆಂಗಳೂರಿನಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖಳಾಗಿರುವುದು ನನಗೆ ಖುಷಿ ಕೊಟ್ಟಿದೆ. ಶಾಸಕರು ನಮ್ಮಂಥ ರೋಗಿಗಳ ಜೀವ ಉಳಿಸಲು ನೆರವಾಗಿದ್ದಾರೆ.”
–ಶಾಂತಾ ಬಿರಾದಾರ, ಚೇತರಿಸಿಕೊಂಡಿರುವ ರೋಗಿ.
“ಶಾಸಕರು ನಮ್ಮ ರೋಗಿಗಳಿಗೆ, ಸಿಬ್ಬಂದಿಗೆ ಕೊಡತಕ್ಕಂತಹ ಪ್ರೋಟಿನ್ ಕಂಟೆಂಟ್ ಇರುವಂಥ ಆಹಾರ ಕೊಡುತ್ತಿರುವುದು ರೋಗಿಗಳು ಚಿಕಿತ್ಸೆಗೆ ಸ್ಪಂಧಿಸುವಲ್ಲಿ ತುಂಬಾನೆ ಅನುಕೂಲ ಆಗಿದೆ. ಇದರಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ಹೇಳಲು ನನಗೆ ಹೆಮ್ಮೆ ಎನ್ನಿಸುತ್ತಿದೆ. ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ.
Be the first to comment