ಕೋವಿಡ್ ಚಿಕಿತ್ಸೆಗೆ ಬೇಕಾಗಿರುವ ಬೆಡ್‍ಗಳು 20,ಆಕ್ಸಿಜನ್ ಬೇಡಿಕೆ 30:ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆಗಾಗಿ ಅಲ್ಲಮಪ್ರಭು ಆಸ್ಪತ್ರೆಗೆ ಎಸಿ ಗಂಗಪ್ಪ ನೋಟಿಸ್ ಜಾರಿ.

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಕೋವಿಡ್ ಚಿಕಿತ್ಸೆಗೆ ಬೆಡ್‍ಗಳ ನಿರ್ವಹಣೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ನಗರದ ಶಕುಂತಲಾ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಮತ್ತು ಅಲ್ಲಮಪ್ರಭು ಆಸ್ಪತ್ರೆಗೆ ಬಾಗಲಕೋಟೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ನೋಟಿಸ್ ಜಾರಿ ಮಾಡಿದ್ದಾರೆ.

ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗೆ ಸಿದ್ದಪಡಿಸಲಾದ ಬೆಡ್‍ಗಳ ಸಂಖ್ಯೆ, ಆಕ್ಸಿಜನ್, ರೆಮಿಡಿಸಿವರ, ವೆಂಟಿಲೇಟರ್, ಐ.ಸಿ.ಯು, ಎಚ್.ಡಿ.ಯು ಬೆಡ್‍ಗಳ ದರಪಟ್ಟಿ ಮುಂತಾದವುಗಳನ್ನು ಪರಿಶೀಲಿಸಿದಾಗ ಸರಿಯಾಗಿ ನಿರ್ವಹಣೆ ಕಂಡುಬಂದಿರುವದಿಲ್ಲ. ಅಲ್ಲದೇ ಆಕ್ಸಿಜನ್‍ಗೆ ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಭೇಟಿ ಸಮಯದಲ್ಲಿ 20 ಬೆಡ್ ಮಾತ್ರ ಸಿದ್ದಪಡಿಸಿದ್ದು, 30 ಬೆಡ್‍ಗಳಿಗೆ ಆಕ್ಸಿಜನ್ ಬೇಡಿಕೆ ಇಟ್ಟಿದ್ದರು. ಇದನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡುವುದರ ಜೊತೆಗೆ ನೋಟೀಸ್ ಸಹ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ಉಪವಿಭಾಗಾಧಿಕಾರಿಗಳ ತಂಡದಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾಲೂಕಾ ವೈದ್ಯಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ ಹಾಗೂ ಪಿ.ಎಸ್.ಐ ಇದ್ದರು.

Be the first to comment

Leave a Reply

Your email address will not be published.


*