ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯದಲ್ಲಿ 14 ದಿನಗಳವರೆಗೆ ರಾಜ್ಯ ಸರಕಾರ ಲಾಕಡೌನ್ ಘೋಷಣೆ ಮಾಡಿದ್ದು ಬಡವರಿಗೆ ಹಾಗೂ ನಿರ್ಗತಿಕರಿಗೆ ಎರಡು ಹೊತ್ತಿನ ಊಟಕ್ಕೂ ತರಿತಪಿಸುವಂತಾಗಿದೆ. ಈಗಾಗಲೇ ರಂಜಾನಿನ ಉಪವಾಸದ ದಿನಗಳ ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಲಾಕಡೌನ್ ಸಾಕಷ್ಟು ತೊಂದರೆಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಲಾಕಡೌನ್ ಘೋಷಣೆ ಮಾಡಿರುವ ಸರಕಾರದ ನಿರ್ಣಯ ಸ್ವಾಗತಾರ್ಹವಾಗಿದೆ. ಆದ್ದರಿಂದ ಬಡವರು ಮತ್ತು ನಿರ್ಗತಿಕರು ಯಾವುದೇ ಕಾರಣಕ್ಕೂ ಊಟಕ್ಕೆ ಪರಿತಪಿಸಬಾರದು ಎಂದು ಮುದ್ದೇಬಿಹಾಳ ಪಟ್ಟಣದ ಮಕ್ಕಾ ಮಜೀದ ಕಮೀಟಿಯಿಂದ ಮಾನವೀಯತೆಯ ಸೇವೆ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಕಾಮರಾಜ ಬಿರಾದಾರ, ಪರಿಸ್ಥಿತಿಯಲ್ಲಿ ಪಟ್ಟಣದ ಮಕ್ಕಾ ಮಜೀದ ಕಮೀಟಯವರು ಉಚಿತವಾಗಿ ಊಟ ನೀಡುವ ಕಾರ್ಯ ಶ್ಲಾಘನೀಯವಾದದ್ದು. ಲಕಡೌನ್ ಇರುವುದರಿಂದ ಪಟ್ಟಣದಲ್ಲಿ ಸಾಕಷ್ಟು ನಿರ್ಗತಿಕರು ಉಪವಾಸ ಮಾಡುವ ಸ್ಥಿತಿ ಉದ್ಭವವಾಗಿದೆ. ಸ್ಥಳೀಯ ಕಮೀಟಯ ಕಾರ್ಯದಿಂದ ಅಂತಹ ನೂರಾರು ಜನರ ಹೊಟ್ಟೆ ತುಂಬಿದಂತಾಗುತ್ತದೆ. ಅಲ್ಲದೇ ಕಮೀಟಿಯವರು ಈ ಕಾರ್ಯವನ್ನು ಮೇ.24ರ ವರೆಗೂ ಇಟ್ಟುಕೊಂಡಿದ್ದು ಒಂದು ವೇಳೆ ಲಾಕಡೌನ್ ಮುಂದುವರೆಯುವಂತಾದರೆ ಕಮೀಟಿಯ ಈ ಕಾರ್ಯವೂ ಮುಂದುವರೆಯುವಂತಾಗಬೇಕು ಎಂದು ಹೇಳಿದರು.
ಮೌಲಾನಾ ಅಫ್ತಬ ಆಲಂ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದೇ ಮನುಷ್ಯನ ಧರ್ಮವಾಗಿದೆ. ಸಹಾಯಹಸ್ತ ಚಾಚಿದ ಮನುಷ್ಯನಿಗೆ ಯಾವತ್ತೂ ಸೋಲಿಲ್ಲಾ. ಧರ್ಮವನ್ನು ಕಾಪಾಡುವ ಮನುಷ್ಯನಿಗೆ ದೇವರ ಕೃಷಿ ಎಂದಿಗೂ ಇರುತ್ತದೆ. ಇಂತಹ ಧರ್ಮ ಪಾಲನೆ ಪ್ರತಿಯೊಂದು ಊರಿನಲ್ಲೂ ಆಗಬೇಕು ಎಂದು ಹೇಳಿದರು. ಕಮೀಟಿಯಿಂದ ಹಮ್ಮಿಕೊಳ್ಳಲಾದ ಉಷಿತ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ ತಾಲೂಕಾಧ್ಯಕ್ಷ ಎಂ.ಬಿ.ನಾವದಗಿ ಚಾಲನೆ ನೀಡಿದರು.
ಮುಸ್ಲಿಂ ಮುಖಂಡ ರಸೂಲ ದೇಸಾಯಿ, ಕಸಾಪ ತಾಲೂಕಾ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ, ಶಿವು ಶಿವಪೂರ, ಅಲ್ಲಾಭಕ್ಷ ಢವಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ನ್ಯಾಯವಾದಿ ಎಂ.ಸಿ.ಮ್ಯಾಗೇರಿ ಮಾತನಾಡಿದರು.
ಲಾಕಡೌನ್ ದಿನಗಳಲ್ಲಿ ಸಿಗಲಿದೆ ಉಚಿತ ಊಟ:
ಮೇ.10 ರಿಂದ ಮೇ.24ರ ವರೆಗೂ ಮಕ್ಕಾ ಮಜೀದ ಕಮೀಟಿಯವತಿಯಿಂದ ಮಧ್ಯಾಹ್ನ 12.30 ರಿಂದ 2 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 8.30ರ ವರೆಗೆ ಮಕ್ಕಾ ಮಜೀದ ಕಮೀಟಿಯಿಂದ ಎಲ್ಲರಿಗೂ ಉಚಿತ ಆಹಾರ ಕಿಟ್ ವಿತರಿಸಲಾಗುವುದು. ಪ್ರತಿಯೊಂದು ಕಿಟನಲ್ಲಿ ಒಂದು ಮೊಟ್ಟೆ, ಅನ್ನ, ಸಾಂಬರ ಜೊತೆಗೆ ಅರ್ಧ ಲೀಟರ್ ನೀರಿನ ಬಾಟಲಿ ನೀಡಲಾಗುವುದು. ಸದ್ಯಕ್ಕೆ ಕೊರೊನಾ ಸಂದಿಗ್ಧ ಪರಿಸ್ಥಿತಿ ಇರುವುದರಿಂದ ಪಟ್ಟಣದ ಬಡವರು ಹಾಗೂ ನಿರ್ಗತಿಕರು ಯಾವುದೇ ಕಾರಣಕ್ಕೂ ಇಂದಿರಾ ವೃತ್ತದ ವರೆಗೂ ಬರುವ ಅವಶ್ಯಕವಿಲ್ಲ. ಇದಕ್ಕಾಗಿ ಕಮೀಟಿಯಿಂದ ವಾಹನದ ವ್ಯವಸ್ಥೆ ಮಾಡಿದ್ದು ನಿರ್ಗತಿಕರು ಇರುವ ಸ್ಥಳಕ್ಕೆ ಕಮೀಟಿ ಸೇವಕರು ತೆರಲಿ ಊಟವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರ ಗಮನಕ್ಕೂ ಯಾರಾದರೂ ಬಡವರು ನಿರ್ಗತಿಕರು ಕಂಡು ಬಂದರೆ ಅಂತಹ ವ್ಯಕ್ತಿಗಳ ಸ್ಥಳದ ಸಮೇತ ಕಮೀಟಿಯವರಿಗೆ (9845992289) ಮಾಹಿತಿ ನೀಡಬೇಕು ಎಂದು ಪುರಸಭೆ ಸದಸ್ಯ ಹಾಗೂ ಮಕ್ಕಾ ಮಜೀದ ಕಮೀಟಿ ಮುಖ್ಯಸ್ಥ ಮೆಹಬೂಬ ಗೊಳಸಂಗಿ ತಿಳಿಸಿದ್ದಾರೆ.
Be the first to comment