ಗ್ರಾಮದಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ತೆಗೆದುಕೊಳ್ಳುವ ಕ್ರಮಗಳ ಪರಾಮರ್ಶಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಟಾಸ್ಕ್‌ ಫೋರ್ಸ್‌ ಪುನಾರಚನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:(ಕೆಲೂರ)

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ ಸರಪಳಿ ತುಂಡರಿಸಲು, ಸಮುದಾಯ ಮಟ್ಟದಲ್ಲಿ ಸೋಂಕು ಹರಡುವುದನ್ನು ವ್ಯವಸ್ಥಿತವಾಗಿ ತಡೆಗಟ್ಟಲು ತಳಮಟ್ಟದಲ್ಲಿ ಸಾರ್ವಜನಿಕ ಸಹಯೋಗವನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಕೊರೊನಾ ಮೊದಲ ಅಲೆ ಕಾಣಿಸಿಕೊಂಡಿದ್ದ ವೇಳೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ರಚಿಸಲಾಗಿದ್ದ ಕಾರ್ಯಪಡೆಗಳನ್ನು (ಟಾಸ್ಕ ಪೋಸ್೯) ಇದೀಗ ಮತ್ತೆ ಸಕ್ರಿಯ ಗೊಳಿಸಲಾಗುತ್ತಿದ್ದು, ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಕಾರ್ಯಾನಿರತವಾಗಲಿವೆ.

ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಕಾರ್ಯ ಪಡೆಯ ಮುಖ್ಯಸ್ಥರಾಗಿರುತ್ತಾರೆ. ಉಪಾಧ್ಯಕ್ಷರು, ಗ್ರಾಮ ಪಂಚಾಯತ್‌ ಸದಸ್ಯರು, ವೈದ್ಯಾಧಿಕಾರಿ,ಗ್ರಾಮದ ಬೀಟ್ ಪೋಲಿಸ್, ಅಂಗನವಾಡಿ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಗ್ರಾಮಕರಣಿಕರು ಸದಸ್ಯರಾಗಿರುತ್ತಾರೆ. ಪಿಡಿಒ ಸದಸ್ಯಕಾರ್ಯದರ್ಶಿ ಯಾಗಿರುತ್ತಾರೆ.

ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡವರು ಹಾಗೂ ರೋಗ ಲಕ್ಷಣಗಳಿಲ್ಲದಿದ್ದವರು ಮನೆಯಲ್ಲೇ ಹೋಂ ಕ್ವಾರೆಂಟೈನ್‌ ಗೊಳಗಾದವರು ಸೂಕ್ತ ನಿಬಂಧನೆಗಳನ್ನು ಪಾಲನೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಈ ಟಾಸ್ಕ ಪೋಸ್೯ ಕಾರ್ಯ ನಿರ್ವಹಿಸಲಿದೆ.

ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಟಾಸ್ಕ ಪೋಸ್೯ ಇಂದು ಗ್ರಾಮದಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯದಿಂದ ಬಂದವರು ಆಶಾಕಾರ್ಯಕರ್ತೆಯರಲ್ಲಿ ಕಡ್ಡಾಯವಾಗಿ ಹೆಸರು ನೊಂದಾಯಿಸಲು ತಿಳಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ತೊಳೆಯುವುದು ಮುಂತಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಈ ಮೂಲಕ ವೈರಾಣು ಹರಡುವಿಕೆಯ ಸರಪಳಿ ಮುರಿಯುವುದು (ಚೈನ್‌ಬ್ರೆಕ್‌) .ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಪ್ರತಿಯೋರ್ವರಲ್ಲೂ ಜಾಗೃತಿ ಮೂಡಿಸುವುದು ಹಾಗೂ ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ,ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ಯುವಕರಾದ ಸಂಗಣ್ಣ ನಾಡಗೌಡರ,ಶ್ರವಣಕುಮಾರ ನಾಡಗೌಡರ,ಗೌಡಪ್ಪ ಕೊಪ್ಪದ,ಬಸವರಾಜ ಹಡಪದ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ,ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಗ್ರಾಮದ ಬೀಟ್ ಪೋಲಿಸ್ ಹನಮಂತ ಹಾಡಗಲ್ಲ,ಎಮ್.ಎಲ್.ವಿಜಯಕುಮಾರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ,ಕಂದಾಯ ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*