ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಗುರುವಾರ ತಾಲೂಕಿನ ಆಲೂರ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಂಚಾಯತಿ ಅಧಿಕಾರ ಗದ್ದುಗೆಯು ಕಾಂಗ್ರೆಸ್ ತೆಕ್ಕೆಗೆ ಒಳಿದಿದ್ದು ಅಧ್ಯಕ್ಷರಾಗಿ ಚನ್ನಬಸವರಾಜ ನಾಡಗೌಡ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಶೆಳ್ಳಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯಲಕ್ಷ್ಮೀ ಪಂಪಣ್ಣವರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸವರಾಜ ನಾಡಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಡಗೌಡ ಅವರಿಗೆ ಪಂಚಾಯತಿಯ ಒಟ್ಟು 21 ಸದಸ್ಯರಲ್ಲಿ 11 ಜನ ಸದಸ್ಯರು ಬೆಂಬಲ ಸಊಚಿಸಿದ್ದರು. ಆದರೆ ಮತದಾನ ಮಾಡುವಲ್ಲಿ ಓರ್ವ ಸದಸ್ಯರು ಮೊಹರು ಹಾಕುವಲ್ಲಿ ಯಡವಟ್ಟು ಮಾಡಿದ ಹಿನ್ನೆಲೆ ಒಂದು ಮತ ತಿರಸ್ಕೃತಗೊಂಡು ಇಬ್ಬರ ಅಭ್ಯರ್ಥಿಗಳಿಗೂ ಸಮ ಮತದಾನವಾಯಿತು. ನಂತರ ಚುನಾವಣೆ ಅಧಿಕಾರಿ ಬಡಿಗೇರ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ವ ಸದಸ್ಯ ಒಪ್ಪಿಗೆ ಮೆರೆಗೆ ಚೀಟಿ ಎತ್ತುವ ನಿರ್ಧಾರವನ್ನು ಪಡೆದು ಚುನಾವಣೆಯನ್ನು ಮುನ್ನೆಡಿಸಿ ಚೀಟಿ ಎತ್ತಿದಾಗ ಚನ್ನಬಸವರಾಜ ನಾಡಗೌಡ ಅವರೇ ಹೆಸರೇ ಬಂದಿದ್ದು ಪಂಚಾಯತಿ ಅಧ್ಯಕ್ಷರನ್ನಾಗಿ ಅಧಿಕಾರಿಗಳು ಘೋಟನೆ ಮಾಡಿದರು.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯಥಿ ಶೋಭಾ ಶೆಳ್ಳಗಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂಗಮ್ಮ ಕಲಬುರ್ಗಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 10 ಮತಗಳನ್ನು ಪಡೆದ ಸಂಗಮ್ಮ ಅವರು ಪರಾಭಗೊಂಡರು, 11 ಮತಗಳನ್ನು ಪಡೆದ ಶೋಭಾ ಅವರು ವಿಜೇತರಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಾಪುರಾಯ ದೇಸಯಿ, ಸದಸ್ಯರಾದ ನಬೀಸಾಬ ಕೇಸಾಪೂರ, ವಿರೇಶ ಗಾಳಪೂಜಿ, ಕಸ್ತೂರಿಬಾಯಿ ಹುನಗುಂದ, ಮಲ್ಲಪ್ಪ ಮೇಟಿ, ಮಾಯಪ್ಪ ಮಾದರ, ರೇಣುಕಾ ಮಾದರ, ಬಸನಗೌಡ ಪಾಟೀಲ, ನೀಲಮ್ಮ ನಾರಗಲ್ಲ, ವಿಜಯಮಹಾಂತೇಶ ಬಂಕದ, ಶಾರದಾ ಬಡಿಗೇರ, ಪಾರ್ವತಿ ವಡ್ಡರ, ಸಿದ್ದಮ್ಮ ಯರಝರಿ, ಗುರುಬಾಯಿ ತಳವಾರ, ಬಸವ್ವ ಬಂಗಾರಗುಂಡ, ನಿಂಗಮ್ಮ ಜಂಬಗಿ, ಬಸವರಾಜ ಡಮನಾಳ, ಬಸವರಾಜ ತಳವಾರ ಇದ್ದರು.
Be the first to comment