ರಾಜ್ಯ ಸುದಿದ್ದಗಳು
ಮುದ್ದೇಬಿಹಾಳ ಡಿ.29:
ತಾಲೂಕಿನ ಎಂಜಿವ್ಹಿಸಿ ಕಲೇಜಿನಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುವ ಗ್ರಾಮ ಪಂಚಾಯತ ಮತೇಣಿಕೆ ಪ್ರಕ್ರೀಯೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಮಾಸ್ಕ ಕಡ್ಡಾಯವಾಗಿಸಲಾಗಿದ್ದು ಮೊಬೈಲ್ ಹಾಗೂ ತಂಬಾಕು ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಂಜಿವ್ಹಿಸಿ ಕಾಲೇಜಿನ 6 ಕೊಠಡಿಗಳಲ್ಲಿ ಮತೇಣಿಕೆಗೆ ಸಕಲ ಸಿದ್ದತೆಯನ್ನು ಮಾಡಲಾಗಿದೆ. ಒಳಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಪರಿಶೀಲಿಸಿ ಬಿಡಲಾಗುವುದು. ಅಲ್ಲದೇ ಏಣಿಕೆ ಸಂದರ್ಭದಲ್ಲಿ ಏಜೆಂಟರಿಂದ ಯಾವುದೇ ಗೊಂದಲವಾದಲ್ಲಿ ಅವರ ವಿರುದ್ಧ ಕಾನೂನು ರೀತಿಯಾಗಿ ಕ್ರಮಕ್ಕೆ ಮುಂದಾಗಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚುನಾವಣೆಯನ್ನು ಶಾಂತಿಯುವಾಗಿ ನೆರವೇರಿಸಿದ ತಾಲೂಕಾ ಅಧಿಕಾರಿಗಳು:
ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆ ಮತದಾನವನ್ನು ಕೆಲವು ಗೊಂದಲ ಉದ್ಭವಿಸಿದ್ದರೂ ಅವುಗಳನ್ನು ಸರಿಪಡಿಸಿದ ತಾಲೂಕಾ ಚುನಾವಣಾ ಆಯೋಗವು ಚುನಾವಣೆ ಪೂರ್ಣಗೊಳಿಸಿದೆ. ತಾಲೂಕಿನ 20 ಗ್ರಾಮ ಪಂಚಾಯತಿಗಳ ಅವಿರೋಧ ಕ್ಷೇತ್ರಗಳನ್ನು ಬಿಟ್ಟು ಒಟ್ಟು 114 ಕ್ಷೇತ್ರಗಳ ಒಟ್ಟು 730 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಡೆಯಲಿರುವ ಏಣಿಕೆ ಪ್ರಕ್ರೀಯೆಯಲ್ಲಿದ್ದು ಯಾವ ಅಭ್ಯರ್ಥಿಗಳಿಗೆ ಮತದಾರರು ವಿಜಯಮಾಲೆ ಹಾಕಿದ್ದಾರೆ ಎನ್ನುವುದು ತಿಳೀದು ಬರಲಿದೆ.
ಮುದ್ದೇಬಿಹಾಳ ತಾಲೂಕಿನ ಕೋಳೂರು, ಬಸರಕೋಡ, ರೂಢಗಿ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮತದಾನದ ವೇಳೆಯಲ್ಲಿ ಹಲವು ಗೊಂದಲಗಳು ಸೃಷ್ಠಿಯಾಗಿದ್ದವು. ಆದರೆ ಸದಸ್ಯರಗಳನ್ನು ಸಮರ್ಥವಾಗಿ ಎದುರಿಸಿದ ತಾಲೂಕಾ ಚುನಾವಣಾ ಅಕಾರಿ ಮಲ್ಲಿಕಾರ್ಜುನ ಅರಕೇರಿ ಅವರು ಮತದಾನದ ಪ್ರಕ್ರೀಯೆಯನ್ನು ಯಶಸ್ವಿಗೊಳಿಸಿದ್ದಾರೆ. ತಾಲೂಕಿನ ಒಟ್ಟು20 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ.75.66ರಷ್ಟು ಮತದಾನವಾಗಿದೆ ಎಂದು ಚುನಾವಣಾಕಾರಿಗಳು ತಿಳಿಸಿದ್ದಾರೆ.
ಅವಿರೋಧ ವಿರೋಸಿದ ಕ್ಷೇತ್ರದಲ್ಲಿ ಶೇ.91 ಮತದಾನ:
ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮ ಪಂಚಾಯತಿಯ ಯರಝರಿ ವಾರ್ಡ-1ರಲ್ಲಿ ಕಳೆದ ಮೂರು ಅವಯೂ ಗ್ರಾಮದ ಗುರುಹಿರಿಯರು ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡುತ್ತಾ ಬರುತ್ತಿದ್ದರು. ಆದರೆ ಯುವಕರು ಅವಿರೋಧವನ್ನು ತಿರಸ್ಕರಿಸಿ ಚುನಾವಣೆಗೆ ಪಟ್ಟು ಹಿಡಿದಿದ್ದು ಡಿ.22ರಂದು ಆದ ಮತದಾನದಲ್ಲಿ ಶೇ.91.11ರಷ್ಟು ಮತದಾನವಾಗಿದೆ. ಯುವಕರ ಬೆಂಬಲದಿಂದ ವಾಡ-1ಕ್ಕೆ ರ್ಸ್ಪಸಿದ್ದ ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ ಎಂಬುವರ ಫಲಿತಾಂಶಕ್ಕೆ ಗ್ರಾಮವೇ ಕಾದು ಕುಳಿತಂತಾಗಿದೆ.
ಮಾಟಮಂತ್ರಕ್ಕೆ ಒಳಗಾದ ಕವಡಿಮಟ್ಟಿ ಪಂಚಾಯತಿಯಲ್ಲಿ ಶೇ.80ರಷ್ಟು ಮತದಾನ:
ಹಡಲಗೇರಿ ಪಂಚಾಯತಿಯ ಗ್ರಾಮದ ಪ್ರತಿಯೊಂದು ಮನೆಯ ಬಾಗಿಲಿಗೆ ಹಾಗೂ ಗೋಡೆಗಳಿಗೆ ಕುಂಕುಮ ಹಾಗೂ ಅಕ್ಕಿಕಾಳುಗಳನ್ನು ಹಚ್ಚಿ ಮತದಾರರನ್ನು ಬೆಗಾಗುವಂತೆ ಮಾಡಲಾಗಿತ್ತು. ಅಲ್ಲದೇ ಸ್ಪರ್ಧೆಯಲ್ಲಿದ್ದ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಪಂಚಾಯತಿ ಕಟ್ಟೆಗೆ ಬರಮಾಡಿಕೊಂಡು ಮಾಟಮಂತ್ರದ ಹಿಂದಿರುವ ವಿಷಯದ ಬಗ್ಗೆ ಮತದಾರರೇ ಕೇಳುವಂತಾಗಿತ್ತು. ಆದರೆ ಅಕಾರಿಗಳ ಜಾಗೃತಿಯಿಂದ ಬೂದಿಮುಚ್ಚಿದ ಕೆಂಡದಂತಾಗಿದ್ದ ಗ್ರಾಮದಲ್ಲಿ ಶೇ.80ರಷ್ಟು ಮತದಾನವಾಗಿದೆ.
6 ಕೊಠಡಿಗಳಿಗೆ 217 ಸಿಬ್ಬಂದಿಗಳ ನೇಮಕ:
ಮುದ್ದೇಬಿಹಾಳ ಪಟ್ಟಣದ ಎಂಜಿವ್ಹಿಸಿ ಕಾಲೇಜಿನ 6 ಕೊಠಡಿಗಳಲ್ಲಿ ಮತೇಣಿಕೆ ಪ್ರಕ್ರೀಯೆ ಪ್ರಾರಂಭಗೊಳ್ಳಲಿದ್ದು 47 ಏಣಿಕೆ ಮೇಲ್ವಿಚಾರಕರು, 90 ಸಹಾಯಕ ಸಿಬ್ಬಂದಿಗಳು ಸೇರಿ ಹೊರ ಹಾಗೂ ಒಳ ಭದ್ರತೆಗಾಗಿ ಪಿಎಸ್‌ಐ ಸೇರಿದಂತೆ 80 ಪೊಲೀಸ ಸಿಬ್ಬಂದಿಗಳು ನೇಮಕಗೊಂಡಿದ್ದಾರೆ.
ಸಂಭ್ರಮಾಚರಣೆಗೆ ನಿಷೇಧ:
ಮತೇಣಿಕೆಯಲ್ಲಿ ಗೆಲವು ಸಾಧಿಸಿದಿ ಅಭ್ಯರ್ಥಿ ಮತ್ತು ಬೆಂಬಲಿಗರು ಗೂಲಾಲ ಎರಚುವುದು, ಪಟಾಕಿ ಸಿಡಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ ಬುಧವಾರ ಪಟ್ಟಣದಲ್ಲಿ ಪಟಾಕಿ ವ್ಯಾಪಾರಸ್ಥರೂ ಯಾವುದೇ ರೀತಿಯಲ್ಲಿಲ ಪಟಾಕಿ ಮಾರಾಟ ಮಾಡುವುದು ನಿಷೇಧಿಸಲಾಗಿದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ ತಿಳಿಸಿದ್ದಾರೆ.
Be the first to comment