ಕಾಡಾ ಅಧ್ಯಕ್ಷರಾಗಿ ಶರಣಪ್ಪ ತಳವಾರ ಸದಸ್ಯರನ್ನಾಗಿ ಭಾಗೇಶ ಹೊತ್ತಿನಮಡು ರವರ ನೇಮಕ

ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ರೈತ ಮುಖಂಡ ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಶರಣಪ್ಪ ತಳವಾರ ಅವರು ಕೃಷ್ಣ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಶರಣಪ್ಪ ತಳವಾರರವರು ಕಳೆದ ಮೂವತ್ತು ವರ್ಷಗಳಿಂದ ರೈತಪರ ಹೋರಾಟಗಳನ್ನು ಮಾಡುತ್ತಾ, ಹೈದರಾಬಾದ್ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ ಬೀದರ್, ಯಾದಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಗುರುತಿಸಿಕೊಂಡಿದ್ದರು. ಜೊತೆಗೆ ಬಿಜೆಪಿ ಪಕ್ಷದಲ್ಲೂ ಸಕ್ರೀಯವಾಗಿ ತೊಡಗಿದ್ದ ಅವರನ್ನು ಹೈಕಮಾಂಡ್ ಗುರುತಿಸಿ ಕಾಡಾ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಆರಂಭದಲ್ಲಿ ಆರ್ ಎಸ್ ಎಸ್ ಮೂಲಕ ಗುರುತಿಸಿಕೊಂಡು ಬಿಜೆಪಿ ಮೂಲಕ ರಾಜಕೀಯಕ್ಕೆ ಬಂದಿದ್ದರು.

ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಸಣ್ಣ ಕೈಗಾರಿಕಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅದಕ್ಕೂ ಕಲಬುರಗಿ ಬಿಜೆಪಿ ಜೀಲ್ಲಾ ಅಧ್ಯಕ್ಷ ಸ್ಥಾನಕ್ಕೂ ಇವರ ಹೆಸರು ಕೆಳಿಬಂದಿತ್ತು ವಿಧಾನ ಪರಿಷತ ನಾಮ ನಿರ್ದೇಶನ ಸದಸ್ಯ ಸ್ಥಾನಕ್ಕೂ ಇವರ ಹೆಸರು ಕೇಳಿ ಬಂದಿತ್ತು.

ಇದೀಗ ಅವರ ಸೇವೆಯನ್ನು ಗುರುತಿಸಿ ಬಿಜೆಪಿ ಹೈಕಮಾಂಡ್ ಕೃಷ್ಣ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಹೊತ್ತಿನಮಡು ಗ್ರಾಮದ ಬಡ ರೈತ ಕುಟುಂಬದ ಭಾಗೇಶ ಹೊತ್ತಿನಮಡು ರವರನ್ನು ಕೃಷ್ಣ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ನೂತನ ಸದಸ್ಯರನ್ನಾಗಿ ನೇಮಕಗೊಂಡಿದ್ದಾರೆ.

ಕಳೆದ 15 ವರ್ಷಗಳಿಂದ ವಿದ್ಯಾರ್ಥಿ ಮುಖಂಡರಾಗಿ ಹೋರಾಟಗಳನ್ನು ಮಾಡುತ್ತಾ, ಎಬಿವಿಪಿಯ ಸಕ್ರೀಯ ಕಾರ್ಯಕರ್ತರಾಗಿ ಉತ್ತರ ಕರ್ನಾಟಕ ವಿದ್ಯಾರ್ಥಿ ಮತ್ತು ಭಾಗದ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಗುರುತಿಸಿಕೊಂಡಿದ್ದರು. ಜೊತೆಗೆ ಬಿಜೆಪಿ ಪಕ್ಷದಲ್ಲೂ ಸಕ್ರೀಯವಾಗಿ ತೊಡಗಿದ್ದ ಅವರನ್ನು ಹೈಕಮಾಂಡ್ ಗುರುತಿಸಿ ಕಾಡಾ ಸದಸ್ಯರನ್ನಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಆರಂಭದಲ್ಲಿ ಆರ್ ಎಸ್ ಎಸ್ ಮೂಲಕ ಗುರುತಿಸಿಕೊಂಡು ಎಬಿವಿಪಿ ನಾಯಕರಾಗಿ ಬಿಜೆಪಿ ಮೂಲಕ ರಾಜಕೀಯಕ್ಕೆ ಬಂದಿದ್ದರು.

ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಎಬಿವಿಪಿಯ ಬಳ್ಳಾರಿ ಪ್ರಾಂತ ಮುಖ್ಯಸ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದೀಗ ಅವರ ಸೇವೆಯನ್ನು ಗುರುತಿಸಿ ಬಿಜೆಪಿ ಹೈಕಮಾಂಡ್ ಕೃಷ್ಣ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಿಸಿದೆ.

Be the first to comment

Leave a Reply

Your email address will not be published.


*