ರಕ್ಷಣಾ ವೇಧಿಕೆ ನಾರಾಣಗೌಡ ಅವರಿಗೆ ನಿಂಧನೆ ಹಾಗೂ ಬೆಧರಿಕೆ ಹಾಕಿದವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ….ಶಾಸಕ ಯತ್ನಾಳ ಅವರ ಹೇಳಿಕೆ ಖಂಡಿಸಿದ ರಕ್ಷಣಾ ವೇಧಿಕೆ ಪದಾಧಿಕಾರಿಗಳು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

 

ತಾಳಿಕೋಟಿ:

ಕರ್ನಾಟಕ ರಕ್ಷಣಾ ವೇಧಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಜೀವ ಬೆದರಿಕೆ ಹಾಕಿದ ವಿಜಯಪುರ ಜಿಲ್ಲೆಯ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆಯ ತಾಳಿಕೋಟಿ ತಾಲೂಕಿನ ಪದಾಧಿಕಾರಿಗಳು ತಹಸೀಲ್ದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ವೇಧಿಕೆಯ ಉಪಾಧ್ಯಕ್ಷ ಜೈಭೀಮ ಮುತ್ತಗಿ, ರಾಜ್ಯ ಸರಕಾರ ಕೈಗೊಂಡ ಮರಾಠಾ ಪ್ರಾಧಿಕಾರ ಸ್ಥಾಪನೆಯ ಬಗ್ಗೆ ರಾಜ್ಯದ ಜನತೆಯ ಮೇಲೆ ಆಗು ಹೋಗುವ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ನಾರಾಯಣಗೌಡರು ಸಿಎಂ ಅವರಿಗೆ ಪತ್ರದ ಮೂಲಕ ಕೇಳಿದ್ದಾರೆ. ರಾಜ್ಯ ಮರಾಠಾ ಪ್ರಾಧಿಕಾರವನ್ನು ರಾಜ್ಯದ ಗಡಿನಾಡ ಕನ್ನಡಗಿರಿಗಾ ಮಾಡಲಾಗುತ್ತಿದೆಯೋ ಅಥವಾ ಅಖಂಡ ಕರ್ನಾಟಕದ ಕನ್ನಡಿಗರಿಗಾಗಿ ಮಾಡಲಾಗುತ್ತಿಯೋ ಹಾಗೂ ಈ ಪ್ರಾಧಿಕಾರದಿಂದ ಮುಂದಿನ ದಿನದಲ್ಲಿ ರಾಜ್ಯ ಕನ್ನಡಿಗರಿಗೆ ಯಾವುದಾದರೂ ಹಿನ್ನಡೆಯಾಗುತ್ತದೆಯೋ ಎಂಬುವುದರ ಬಗ್ಗೆ ಮಾಹಿತಿ ಕೇಳಿದ್ದು ತಪ್ಪಾ…?



ಇದರ ಬಗ್ಗೆ ಮಾಹಿತಿ ನೀಡಲು ದಿನಗಳನ್ನು ಸುಖಾಸುಮ್ಮನೆ ದಿನಗಳನ್ನು ಎನೆಸುತ್ತಿರುವುದು ರಾಜ್ಯ ಸರಕಾರ. ಅದಕ್ಕಾಗಿ ರಕ್ಷಣಾ ವೇಧಿಕೆ ರಾಜ್ಯಾದ್ಯಂತ ಹೋರಾಟಕ್ಕೆ ಇಳಿದಿದೆ. ಆದರೆ ಇದರ ಬಗ್ಗೆ ವಿಜಯಪುರಲದಲಿ ಕೆಲವರು ತಮ್ಮ ಮಾತಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುವುದು ಕಾನೂನು ರೀತಿಯ ಅಪರಾಧವಾಗುತ್ತದೆ ಎಂಬುವುದನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಗಮನಿಸಬೇಕಾದ ಸಂಗತಿಯಾಗಿದೆ. ಅಲ್ಲದೇ ರಕ್ಷಣಾ ವೇಧಿಕೆಯ ರಾಜ್ಯದ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಜಿಲ್ಲಾದ್ಯಕ್ಷ ಎಂ.ಸಿ.ಮನಗೂಳಿ ಅವರ ಬಗ್ಗೆ ನಿಂಧನೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.



ವಿಜಯಪುರ ಶಾಸಕರ ಹೇಳಿಕೆ ಖಂಡನೀಯ:

ವಿಜಯಪುರ ನಗರ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಮರಾಠಾ ಪ್ರಾಧಿಕಾರ ವಿರುದ್ಧ ಕನ್ನಡ ಕೆಲ ಸಂಘಟನೆಗಳು ಹೋರಾಟ ನಡೆಸಿದ್ದವರು ರೋಲ್ ಕಾಲ್ ದಂಧೆಯವರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದು ಖಂಡನೀಯವಾಗಿದೆ. ಕರ್ನಾಟಕ ರಕ್ಷಣಾ ವೇಧಿಕೆ ಎಂದಿಗೂ ಹಿಂದು ರಾಜ ಶಿವಾಜಿ ಅವರ ಬಗ್ಗೆ ಅವಹೇಳನಾಕಾರಿಯಲ್ಲಿ ಮಾತನಾಡಿಲ್ಲ. ಬದಲಿಗೆ ಮರಾಠಾ ಪ್ರಾಧಿಕಾರದ ಬಗ್ಗೆ ಮಾಹಿತಿಯನ್ನು ಕೇಳಿದೆ ಎನ್ನುವುದು ತಿಳಿದುಕೊಳ್ಳಬೇಕು. ಒಬ್ಬ ಜವಾಬ್ದಾರಿತ ಸ್ಥಾನದಲ್ಲಿರುವ ಯತ್ನಾಳ ಅವರು ತಮ್ಮ ಬಾಯಿಗೆ ಲಗಾಮು ಹಾಕಿಕೊಳ್ಳಬೇಕು. ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿ ಅಧಿಕಾರಕ್ಕಾಗಿ ಅಪಹಪಿಸಿದಂತೆ ರಾಜ್ಯ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ಮಾತನಾಡಲು ಹೋಗಬಾರದು.

ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಇದೇ ಯತ್ನಾಳ ಅವರು ಮಾಂಸ ಸೇವನೆ ಮಾಡಿದ್ದು ಹಾಗೂ ಬಿಜೆಪಿಯಲ್ಲಿದ್ದಾಗ ಗೋ ಬಗ್ಗೆ ಮಾತನಾಡಿದ್ದು ಜನತೆಗೆ ತಿಳಿದಿದೆ. ಯತ್ನಾಳ ಅವರು ಕನ್ನಡ ಹೋರಾಟಗಾರರ ಬಗೆಯ ಹೇಳಿಕೆ ನೀಡಿದ್ದು ಕೂಡಲೇ ಕ್ಷಮೆಯಾಚಿಸಬೇಕೆಂದು ಜೈಭೀಮ ಮುತ್ತಗಿ ಆಗ್ರಹಿಸಿದರು.



ಇದಕ್ಕೂ ಮೊದಲು ತಾಳಿಕೋಟಿ ತಹಸೀಲ್ದಾರ ಕಛೇರಿಯ ಎದುರಿಗೆ ರಾಘವ ಅಣ್ಣಿಗೇರಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ರಕ್ಷಣಾ ವೇಧಿಕೆಯ ತಾಲೂಕಾಧ್ಯಕ್ಷ ನಿಸಾರ ಬೇಪಾರಿ, ಪ್ರಭು ಪಾಟೀಲ, ನಬಿ ಲಾಹೋರಿ, ಪ್ರಭು ಅಣ್ಣಿಗೇರಿ, ಇಬ್ಬರ ಹವಾಲ್ದಾರ, ರಾಜು ಕಲಾಲ, ಶರಣು ಮಡಿವಾಳರ, ಪೀರಶ್ಯಾ ಕುಳಗೇರಿ, ಟಿಪ್ಪು ಕಾಳಗಿ, ಸುಬಾಸ ಅಗಸರ, ಅಯೂಭ ವಠಾರ, ಅಂಬು ಕುಂಬಾರ, ಶೌಕತ ಲಾಹೋರಿ ಇದ್ದರು.

Be the first to comment

Leave a Reply

Your email address will not be published.


*