ಪಿಂಜಾರ ಅಭಿವೃದ್ದಿ ನಿಗಮಕ್ಕಾಗಿ ಮಹಾಮಂಡಳ ಆಗ್ರಹ

ರಾಯಚೂರು ಜಿಲ್ಲಾಧಿಕಾರಿಗಳ ಮುಕಾಂತರ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ಜಿಲ್ಲಾಧ್ಯಕ್ಷರಾದ ಬಾಬಾ ಶಂಸಾವಲಿ ಹಾಗೂ ಪದಾಧಿಕಾರಿಗಳಿಂದ ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಮಾಜದ ಬಹುದಿನದ ಬೇಡಿಕೆ ಪಿಂಜಾರ್ ಅಭಿರುದ್ದಿ ನಿಗಮ ಮಾಡುವಂತೆ ಆಗ್ರಹಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಬಾಬಾ ಮಾತನಾಡಿ ಸುಮಾರು ವರ್ಷಗಳಿಂದ ಪಿಂಜಾರ ಸಮುದಾಯದಿಂದ ಹೋರಾಟ ಮಾಡುತ್ತಾ ಬಂದರು ನಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ. ಇತ್ತೀಚಿಗೆ ಮರಾಠ ಹಾಗೂ ವೀರಶೈವ ಲಿಂಗಾಯತ ನಿಗಮಕ್ಕೂ ಹೆಚ್ಚಿನ ಒತ್ತು ನೀಡಿದೆ

ಕರ್ನಾಟಕದಲ್ಲಿ ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯದವರು ಈವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಬ್ಯಗಳಿಂದ ವಂಚಿತರಾಗಿದ್ದೇವೆ ಎಂದು ಹೇಳಿದರು.

ದೇವದುರ್ಗ ತಾಲೂಕು ಅಧ್ಯಕ್ಷ ಖಾಸಿಂಮಸಾಬ್ ಎಳ್ಳಿಮನಿ ಮಾತನಾಡಿ ಪಿಂಜಾರ/ನದಾಫ್ ಸಮುದಾಯದ ಉಳಿವು ಮತ್ತು ಬೆಳವಣಿಗೆಗೆ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ ಎಂದರು.

ಡಾ. ಸಿ.ಎಸ್. ದ್ವಾರಕನಾಥ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ವರದಿಯಲ್ಲಿ ಅಲೆಮಾರಿ ಪಿಂಜಾರ್, ನದಾಫ್, ಜನರ ಉದ್ಯೋಗವು ನಸೀಶಿ ಹೋಗಿದ್ದು ಈ ಸಮುದಾಯವು ತುಂಬಾ ಸಂಕಷ್ಟದಲ್ಲಿ ಇದೆ ಈ ಅಲೆಮಾರಿ ಸಮುದಾಯಕ್ಕೆ ಪಿಂಜಾರ್ ಅಭಿರುದ್ದಿ ನಿಗಮ ಮಾಡಬೇಕು ದ್ವಾರಕನಾಥ ಅವರು ಸಲ್ಲಿಸಿದೇ ಆದರೆ ಅಲೆಮಾರಿ ಪಿಂಜಾರ್, ನದಾಫ್ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು

ಕರ್ನಾಟಕ ಪಿಂಜಾರ ಅಭಿವೃದ್ದಿ ನಿಗಮ ಮಂಡಳಿ ಆದಷ್ಟು ಬೇಗ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು

ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಟಿಪ್ಪುಸುಲ್ತಾನ್ ಅಂಜಳ, ಮಹಿಬೂಬ ಕುಷ್ಟಗಿ, ಇಮಾಮುದ್ದಿನ ಕಲ್ಮಲಾ, ಖಾಲಿಲಸಾಬ್ ಪೋತ್ನಾಳ, ಡಾ. ಶಾಮೀದಅಲಿ ಕರಡಕಲ್ಲ್, ನಾಸಿರಹುಸೇನ್ ಸೇರಿದಂತೆ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*