ಶುದ್ಧೀಕರಣ ನೀರಿಗೆ ತಮಿಳುನಾಡಿನ ಮರಳು ಬಳಕೆ…!

ವರದಿ: ಕಾಶಿನಾಥ ಬಿರಾದಾರ

 ಜಿಲ್ಲಾ ಸುದ್ದಿಗಳು 

ನಾಲತವಾಡ:

ಕೊರೋನಾ ವೈರಸ್ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಲು ಶುದ್ಧೀಕರಣ ಘಟಕದಲ್ಲಿ ತಮಿಳುನಾಡು ಹಾಗೂ ಬಳ್ಳಾರಿ ಜಲ್ಲಿಕಲ್ಲು ಉಪಯೋಗಿಸಿ ಶುದ್ಧ ಕುಡಿಯುವ ನೀರು ಬಳಸಲು ನಾಲತವಾಡಪಟ್ಟಣದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಂದಾಗಿದ್ದಾರೆ..



ಮುದ್ದೇಬಿಹಾಳ ಶಾಸಕ ಎ‌.ಎಸ್. ಪಾಟೀಲ ನಡಹಳ್ಳಿ ಸೂಚನೆ ಹಿನ್ನೆಲೆ ನಾಲತವಾಡಪಟ್ಟಣದ ಅಧಿಕಾರಿಗಳು ಟೆಂಡರ್ ಮೂಲಕ ಗುತ್ತಿಗೆ ನೀಡಿ ತಮಿಳುನಾಡಿನಿಂದ 2, 3, 4mm ಮರಳು ಹಾಗೂ ಬಳ್ಳಾರಿಯ ಮೂರು ತರಹ ಜಲ್ಲಿಕಲ್ಲು ಬಳಿಸಿ ಶುದ್ಧೀಕರಣಕ್ಕಾಗಿ ತಮಿಳುನಾಡು ಹಾಗೂ ಬಳ್ಳಾರಿ ಮರಳು ಹಾಗೂ ಜಲ್ಲಿಕಲ್ಲು ಆಮದು ಮಾಡಿಕೊಳ್ಳಲಾಗಿದೆ.



ಇನ್ನು ಘಟಕದಲ್ಲಿ ನೀರು ಶುದ್ಧೀಕರಿಸುವುದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದ್ದು, ಅದಕ್ಕಾಗಿ ಕೂಡಲೇ ನಾಲತವಾಡಪಟ್ಟಣದ ಪಂಚಾಯ್ತಿ ಅಧಿಕಾರಿ ಎಂ.ಆರ್. ದಾಯಿ ಮೂರು ವಿಭಿನ್ನ ತರಹದ ಎಂಟು ನೂರು ಚೀಲಗಳನ್ನು ತಮಿಳುನಾಡಿನಿಂದ ಟೆಂಡರ್ ನಿಂದ ಆಮದು ಮಾಡಿಕೊಂಡ ಶುದ್ಧೀಕರಣ ಘಟಕದಲ್ಲಿ ಬಳಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊರೋನಾ ನಡುವೆ ನಾಲತವಾಡಪಟ್ಟಣದ ಜನತೆಗೆ ಆರೋಗ್ಯ ಕೆಡದಂತೆ ಶುದ್ಧ ನೀರು ಪೂರೈಸಲು ಶಾಸಕ ನಡಹಳ್ಳಿ ಹಾಗೂ ಅಧಿಕಾರಿಗಳು ಶ್ರಮಪಡುತ್ತಿದ್ದಾರೆ… ಇ ವೇಳೆ M R ದಾಯಿ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಚಂದ್ರಶೇಖರ ಸಗರ್ ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ ಅವಟಿ ವೀರೆಶ ದೂಡಮನಿ ಇಂಜಿನಿಯರ್ ವೀರೆಶ ತಂಗಡಗಿ ವಾಟರ್ ಮ್ಯಾನ್ ಇದ್ದರು

Be the first to comment

Leave a Reply

Your email address will not be published.


*